ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮತಿ ಮುದನಕುಮಾರರ ಚರಿತ್ರ [ಅಧ್ಯಾಯ ಲಕ್ಷವಿಲ್ಲದೆ ಇಂಥಾ ಪಾತಕವನ್ನು ಮಾಡಿದಾನೆ. ಇವನು ಶುದ್ಧವಾಗಿ ಅಪ್ರಯೋಜಕನೆಂತಲೂ ನೀಚನೆಂತಲೂ ಅವನಿಗೆ ತೋರಿಸಿಕೊಡ ಬೇಕು, ಅವನು ತನ್ನ ನಿಜವಾದ ಯೋಗ್ಯತೆಯನ್ನು ತಾನಾಗಿಯೇ ತಿಳಿದುಕೊಳ್ಳುವುದಕ್ಕೆ ನಾನು ಒಂದು ಯೋಚನೆ ಮಾಡಿದೇನೆ. ಆ ಯೋಚನೆ ಸಾಗುವುದಕ್ಕೆ ನೀನು ಸಹಕಾರಿಯಾಗಿ ನಾನು ಹೋಗು ಎಂದಕಡೆಗೆ ನೀನು ಹೋಗಬೇಕು, ಹೀಗೆಂದು ಹೇಳಿದನು. - ಅದಕ್ಕೆ ಮೇದರವನು--ಸ್ವಾಮಿ, ನನಗೆ ಇದ್ದ ಐಶ್ವರ್ಯ ಅಷ್ಟ. ರಲ್ಲಿಯೇ ಇತ್ತು, ಇದ್ದ ಅಲ್ಪ ಸ್ವಲ್ಪವೂ ಈ ನೀಚನ ಚೇಷ್ಟೆ ಯಿಂದ ಹಾಳಾಗಿ ಹೋಯಿತು, ನಾನು ಪೂರ್ತಿಯಾಗಿ ಮುಳುಗಿಹೋದೆ, ಇನ್ನೊಂದು ಗಳಿಗೆಗೆ ಹಸಿವಾದರೆ ಒಂದು ಮುದ್ದೆ ಹಿಟ್ಟಿಗೆ ಸಹಿತವಾಗಿ ನನಗೆ ಗತಿಯಿಲ್ಲ. ಈ ಮನುಷ್ಯ ಮಾಡಿದ ಅಪಕಾರಕ್ಕೆ ತಕ್ಕದ್ದನ್ನು ಮಾಡುವುದು ನನಗೇನೋ ಇಷ್ಟ ವಿಲ್ಲ, ಆದರೆ ನ್ಯಾಯವೂ ದಯಾ ರಸವೂ ಇಂಥಾದ್ದೆಂದು ತೋರಿಸಿಕೊಟ್ಟು ಇನ್ನು ಮುಂದಕ್ಕೆ ಬಡವ. ರನ್ನು ವೇಧಿಸದ ಹಾಗೆ ಇವನಿಗೆ ಬುದ್ದಿ ಕಲಿಸಬೇಕೆಂದು ನನಗೆ ಇಷ್ಟ ವುಂಟು, ಎಂಬದಾಗಿ ನುಡಿದನು. ಕೂಡಲೆ-ಒ೦ದು ಹಡಗಿನಮೇಲೆ ಇವರಿಬ್ಬರನ್ನೂ ಕೂರಿಸಿ. ಸಮುದ್ರದಮೇಲೆ ಕರೆದುಕೊಂಡುಹೋಗಬೇಕು ; ಅಲ್ಲಿ ಒಂದು ಎಡು ತಿಟ್ಟನ್ನು ಹುಡುಕಬೇಕು ; ಅಲ್ಲಿನ ಜನರು ನಾಗರಿಕವನ್ನು ಅರಿಯದೆ ಒರಟರಾಗಿ, ಐಶ್ವರ್ಯ ಎನ್ನು ವುದನ್ನು ಕಿವಿಯಲ್ಲಿಯೂ ಕೇಳದೆ, ಜೀವಿ ಸುವಂಥವರಾಗಿರಬೇಕು ; ಆ ಎಡತಿಟ್ಟು ಈ ಸ್ವಭಾವದ್ದಾಗಿರಬೇಕು ; ದೂರವಾಗಿರತಕ್ಕ ಅಂಥಾ ಒಂದು ಟಾಪಿನ ಮೇಲೆ ಈ ಮೇದರವನನ್ನೂ ಅರಸನನ್ನೂ ಬಿಟ್ಟು ಬಿಡಬೇಕು, ಎಂದು ಅಧಿಕಾರಿಯು ಅಪ್ಪಣೆ ಮಾಡಿ ದನು, ಅಧಿಕಾರಿಯ ಅಪ್ಪಣೇ ಪ್ರಕಾರ ನಾವಿಕರು ಅವರಿಬ್ಬರನ್ನೂ ಕರೆದುಕೊಂಡು ಹೋಗಿ ಒಂದಾನೊಂದು ದ್ವೀಪದಲ್ಲಿ ಬಿಟ್ಟು ಹೊರಟು ಹೋದರು. ಈ ಮಧ್ಯೆ ತನ್ನ ಕೈಕೆಳಗೆ ಸಂಬಳಕ್ಕಿರುವ ಅಧಿಕಾರಿಯು ತನ್ನ ಅಳಿಯನನ್ನೇ ದಂಡಿಸಿದನಲ್ಲಾ ಎಂಬ ದ್ವೇಷದಿಂದ, ಆ ಮಧುಪುರಿಯ