ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] ಸುಮತಿ ಮದನಕುಮಾರರ ಚರಿತ್ರೆ ೩೭ ದೊರೆಯು ಸರ್ವಾಧಿಕಾರಿಯನ್ನು ಕೆಲಸದಿಂದ ತೆಗೆದು ತನ್ನ ಅಳಿಯ ನನ್ನು ಹಿಂದಕ್ಕೆ ಕರೆಯಿಸಲು ಯತ್ನಿ ಸಿದನು. ಈ ದೊರೆ ಅಳಿ ಯನ ತುಂಟತನವನ್ನೂ ದೊರೆಯ ಅವಿವೇಕವನ್ನೂ ಕೇಳಿ, ಪರ ರಾಜರು-ಯಾರೋ ಕುಮಂತ್ರಿ ಸೇರಿಕೊಂಡಿದಾನೆ ; ಇಂಥಾ ವಿಪ ರೀತಕಾರ್ಯಗಳು ನಡೆಯುತಿವೆ ; ಈ ರೀತಿಯಲ್ಲಿ ಮಂತ್ರಿಯು ಕೆಟ್ಟ ಹಾದಿಗೆ ಎಳೆಯುವುದೂ, ದೊರೆಯು ನ್ಯಾಯವನ್ನು ಬಿಟ್ಟು ಬಡ ಬಗ್ಗರ ಯೋಗಕ್ಷೇಮವನ್ನು ನೋಡದೇ ಸ್ವಜನ ಪಕ್ಷಪಾತಿಯಾಗು ವುದೂ, ಇಂಥಾ ನಡತೆಗಳೆಲ್ಲಾ ರಾಜ್ಯ ಕೆಡುವುದಕ್ಕೆ ಕಾರಣ ; ನನಗೆ ಆ ರಾಜ್ಯವನ್ನು ಗೆಲ್ಲುವುದಕ್ಕೆ ಇದೇ ಸಮಯ ಎಂದು ಯೋಚಿಸಿ ಕೊಂಡು, ದಂಡೆತ್ತಿ ಬಂದು ಮಧು ಪುರಿಗೆ ಮುತ್ತಿಗೆ ಹಾಕಿದರು. ದೊರೆಯು ಇದೆಲ್ಲಾ ತನ್ನ ಅವಿವೇಕದ ಫಲವೆಂದು ತಿಳಿದು ಕೆಲಸ ದಿಂದ ತೆಗೆದಿದ್ದ ಅಧಿಕಾರಿಯನ್ನು ಕರೆಯಿಸಿ ಅವನಿಗೆ ಬಹುಮಾನ ಮಾಡಿ, ತಾವು ನ್ಯಾಯ ಪಕ್ಷಪಾತಿಗಳು ; ತಮ್ಮಂಥಾ ಸತ್ಯವಂತರು ನನ್ನ ರಾಜ್ಯದಲ್ಲಿ ಇರುವವರೆಗೂ ನನಗೆ ಯಾವ ಕೇಡೂ ಸಂಭವಿಸ ಲಿಲ್ಲ ; ಈಗ ನನಗೆ ಬಂದಿರುವ ವಿಪತ್ತನ್ನು ಪರಿಹರಿಸಬೇಕು, ನನ್ನಿಂದ ತಪ್ಪಾಯಿತು, ಕ್ಷಮಿಸಬೇಕು ಎಂದು ಅತಿದೈನ್ಯದಿಂದ ಹೇಳಿಕೊಂಡನು. ಅಧಿಕಾರಿಯು ಕನಿಕರದಿಂದ ಶತ್ರುಗಳನ್ನು ಜಯಿಸುವ ಉಪಾಯ ಮಾಡಿ, ಅವರನ್ನು ಆಚೆಗೆ ಅಟ್ಟಿ ಎಂದಿನಂತೆ ಅರಸು ರಾಜ್ಯಭಾರ ವನ್ನು ಮಾಡುವಂತೆ ಆತನಿಗೆ ತಕ್ಕ ವಿವೇಕ ಹೇಳಿ, ಮಂತ್ರಿತ್ವವನ್ನು ವಹಿಸಿದನು. ದೊರೆಯು ಸ್ವಲ್ಪ ದಿವಸಗಳು ಕಳೆದ ಮೇಲೆ ತನ್ನ ಮಂತ್ರಿ ಯನ್ನು ಕುರಿತು, ತನ್ನ ಮಗಳು ಬಹಳವಾಗಿ ಅಳುತಾಳೆ ; ಅಳಿಯ ನನ್ನು ಏನಾದರೂ ಮಾಡಿ ಹಿಂದಕ್ಕೆ ಕರೆಸಬೇಕೆಂದು ಹೇಳಿದನು. ಅದಕ್ಕೆ ಅಧಿಕಾರಿಯು ಆತನನ್ನು ದ್ವೀಪಾಂತರಕ್ಕೆ ಸಾಗಿಸಿದ್ದು ಅವ ನಿಗೆ ವಿವೇಕಬರಲಿ, ತನ್ನ ಐಶ್ವರ್ಯಮದದಿಂದ ಬಡವರನ್ನು ಹಿಂಸಿ 'ಸದೆ ಇರಲಿ ಎಂದೇ ಹೊರತು ಅವನಿಗೆ ಕೇಡು ಸಂಭವಿಸಲೆಂದು ಅಲ್ಲ ; ಆತನನ್ನು ಹಿಂದಕ್ಕೆ ಕರೆಯಿಸುವ ಸಮಯ ಕೂಡಲೆ ಬರುವುದು, ಸ್ವಲ್ಪ ತಡೆಯಬೇಕು ; ತಾವು ಈ ಪ್ರಸ್ತಾಪವನ್ನು ಮಾಡದಿದ್ದಾಗ್ಯೂ ನಾನೇ