ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೮ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ ಆತನನ್ನು ಕರೆಯಿಸುತಿದ್ದೆ ಎಂದು ಹೇಳಿದನು. ಅತ್ತ ದ್ವೀಪಾಂತರಕ್ಕೆ ಗಡೀಪಾರಾಗಿ ಕಳುಹಿಸಲ್ಪಟ್ಟಿದ್ದ ಮಧು ವರ್ಮನು ತನಗೆ ಬಂದ ಕಷ್ಟಕ್ಕೆ ಗೋಳಾಡುತಾ ಇದ್ದನು. ಇವನಿಗೆ ಯಾರ ಸಹಾಯವೂ ಇಲ್ಲ ; ಇತ್ತ ಬಾ ಎನ್ನು ವರಿಲ್ಲ, ಇವನ ಇರವನ್ನು ಕೇಳುವರಿಲ್ಲ. ಆ ದ್ವೀಪದ ಜನರು ಬಹು ಒರಟರು, ಅವರ ಭಾಷೆ ಇವನಿಗೆ ತಿಳಿಯದು. ಇಂಥಾ ಜನರ ಕೈಗೆ ಇವ ಸಿಕ್ಕಿದ, ಹಲವು ಬಗೆಯಲ್ಲಿಯೂ ಕಷ್ಟ ಬಂತು, ಇದೆಲ್ಲವನ್ನೂ ಕಂಡು ಪೇಚಾಡುತಾ, ದುಃಖ ಪಡುತ್ತಾ, ಕೈ ಕೈ ಮುರಿದುಕೊಳ್ಳುತಾ, ಕೆಟ್ಟ ಮುಖವನ್ನು ಹಾಕಿಕೊಂಡು ಅಳುತಾ ಮಧುವರ್ಮ ಕುಕ್ಕರಿಸಿದ್ದನು. ಇವನ ಸಂಗಡ ಆ ದ್ವೀಪಕ್ಕೆ ಹೋಗಿ ಇಳಿದ ಮೇದರನನಿಗೆ ಇದು ಯಾವುದೂ ಕಷ್ಟ ವಾಗಿ ತೋರಲಿಲ್ಲ. ಬಾಲ್ಯದಿಂದಲೂ ಕಷ್ಟ ಪಟ್ಟು ಇವನಿಗೆ ಅಭ್ಯಾಸ ವಿತ್ತು, ಆ ದ್ವೀಪದ ಒರಟು ಜನರನ್ನು ಈ ಮೇದರವನು ಕಂಡು, ತಾನು ಅವನಿಗೆ ಶತ್ರುವಾಗಿ ಬಂದಿಲ್ಲ, ಅವರು ಹೇಳಿದ ಕೆಲಸವನ್ನು ಮಾಡಿಕೊಂಡು ಇರುತೇನೆ, ತನಗೆ ಹೊಟ್ಟೆಗೆ ಹಾಕಿದರೆ ಸಾಕು, ಎಂದು ಕೈಸನ್ನೆಯಿಂದ ತಿಳಿಸಿದನು. ಅವರು ಇವರಿಬ್ಬರನ್ನೂ ನೋಡಿ, ಭಯ ಪಡತಕ್ಕೆ ಅಗತ್ಯವಿಲ್ಲ, ತಾವು ಅವರಿಬ್ಬರಿಗೂ ಏನೂ ಕೇಡ ಮಾಡುವು ದಿಲ್ಲ; ಆದರೆ ತಮ್ಮ ಜೊತೆಯಲ್ಲಿ ಅವರು ಮೀನ ಹಿಡಿಯಬೇಕು, ಮರದ ತುಂಡುಗಳನ್ನು ಹೊರಬೇಕು, ಎಂದು ಕೈಸನ್ನೆ ಯಿಂದ ತಿಳಿಸಿ ದರು.

  • ತರುವಾದ ಆ ಕಾಡುಜನರು ಹೇಳಿದ ಚಾಕರಿಗೆ ಇವರಿಬ್ಬರೂ ಒಪ್ಪಿಕೊಂಡರು, ಆಮೇಲೆ ಅವರ ಸಂಗಡಲೇ ಕಾಡಿಗೆ ಹೋದರು. ಅಲ್ಲಿ ಮರದ ತುಂಡುಗಳು ರಾಸಿರಾಸಿಯಾಗಿ ಬಿದ್ದಿದ್ದವು. ಆ ಕಾಡು ಜನರು ಆ ಮರದ ತುಂಡುಗಳನ್ನು ಮನೆಗೆ ಹೊತ್ತುಕೊಂಡು ಹೋಗ ಬೇಕೆಂದು ಇಬ್ಬರಿಗೂ ಹೇಳಿದರು, ಅದೇ ಪ್ರಕಾರ ಅವರಿಬ್ಬರೂ ಕೆಲ ಸಕ್ಕೆ ಅನುವಾದರು. ಬಡವನಾದ ಮೇದರವನು ಬಲಶಾಲಿಯಾಗಿ ಶ್ರಮ ಪಡುವ ರೂಢಿವುಳ್ಳವನಾದಕಾರಣ, ತನಗೆ ಹಂಚಿಹಾಕಿದ್ದ ತನ್ನ ಪಾಲಿನ ತುಂಡುಗಳನ್ನು ಜಾಗ್ರತೆಯಾಗಿ ಸಾಗಿಸಿದನು. ಕೈ ಕಾಲು