ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ 4 ಕದಿರು ಕಡ್ಡಿ ಯಾಗಿ ಹೊಟ್ಟೆ ಸಿಟ್ಟೇಕಾಯಿಯಾಗಿ ಬೊಜ್ಜು ಬೆಳಸಿ ಕೊಂಡಿದ್ದ ದೊರೇ ಅಳಿಯಂದಿರಾದ ಶ್ರೀಮಂತರಿಗೆ ಯಾವ ಕೆಲಸ ನನ್ನೂ ಮಾಡಿದ ಅಭ್ಯಾಸವೇ ಇಲ್ಲದ ಕಾರಣ, ಇವರ ಹಸಿಗೆಗೆ ಬಂದ ತುಂಡುಗಳಲ್ಲಿ ನಾಲ್ಕರಲ್ಲಿ ಒಂದು ಭಾಗವೂ ಸಾಗಲಿಲ್ಲ. ಇದೆಲ್ಲವನ್ನೂ ನೋಡುತಿದ್ದ ಕಾಡುಜನರು ತಮ್ಮ ಕೆಲಸಕ್ಕೆ ಮೇದರವನು ಉಪಯೋ ಗಿಸುತ್ತಾನೆಂದು ಮೆಚ್ಚಿ, ಒಳ್ಳೇದಾಗಿರುವ ಒಂದು ವಿಾನನ ತಮ್ಮ ಕಾಡಿನಲ್ಲಿ ಸಿಕ್ಕುವ ಒಳ್ಳೇ ಗಡ್ಡೆ ಗೆಣಸುಗಳನ್ನೂ ತಂದು ಅವನಿಗೆ ಕೊಟ್ಟರು, ಮಧುವರ್ನನಿಗೆ ಕೆಲಸಮಾಡಲು ಸಾಮರ್ಥ್ಯವಿಲ್ಲವೆಂತ ತಿಳಿದುಕೊಂಡು ಅವನಿಗೂ ಕುತ್ತು ಪರಿಹಾರವಾಗಲು ಏನೋ ಸ್ವಲ್ಪ ತಿಂಡಿಯನ್ನು ಕೊಟ್ಟರು. ಆ ದಿನವೆಲ್ಲಾ ಅನ್ನ ನಿಲ್ಲದೆ ವಿಶೇಷವಾಗಿ ಕೆಲಸಮಾಡಿ ಆಯಾಸಪಟ್ಟಿದ್ದ ಕಾರಣ ಮಧುವರ್ಮನಿಗೆ ಹೆಚ್ಚಾಗಿ ಹಸಿವಾಗಿತ್ತು; ಆ ಜನರು ಕೊಟ್ಟ ತಿಂಡಿಯನ್ನು ತಿಂದನು. ಆ ತಿಂಡಿಯು ತನ್ನ ಮಾವನ ಖಾಸಾ ಪಜ್ಞ ಯಲ್ಲಿ ಇವ ತಿನ್ನು ತಿದ್ದ ಮೃಷ್ಟಾನ್ನ ಕ್ಕಿಂತಲೂ ರುಚಿಯಾಗಿ ತೋರಿತು. ಹೀಗೆಯೇ ಕೆಲವು ತಿಂಗಳು ಕಳೆದವು. ತರುವಾಯ ಮಧುಪುರಿಯ ಮಂತ್ರಿಯಾಗಿ ಇವರಿಬ್ಬರಿಗೂ ಶಿಕ್ಷೆಯನ್ನು ವಿಧಿಸಿದ್ದ ಅಧಿಕಾರಿಯು ಅವರನ್ನು ಹಿಂದಕ್ಕೆ ಕರೆತರುವಂತೆ ಅಪ್ಪಣೆ ಮಾಡಿದನು. ನಾವಿಕರು ಹೋಗಿ ಅವರನ್ನು ಕರೆತಂದು ಮಂತ್ರಿಯ ಮುಂದೆ ನಿಲ್ಲಿಸಿದರು. ಆತನು ಅಲ್ಲಿ ನಡೆದ ಸಮಾಚಾರವನ್ನೆಲ್ಲಾ ಕೇಳಿ ದೊರೆ ಅಳಿಯನನ್ನು ಕೋಪ ದಿಂದ ನೋಡಿ--ಈಗ ನಿನಗೆ ಬುದ್ದಿ ಬಂತೆ ? ನಿನ್ನ ಯೋಗ್ಯತೆ ನಿನಗೆ ಗೊತ್ತಾಯಿತೆ ? ನಿನ್ನಿಂದ ಹಿಂಸೆಯನ್ನು ಹೊಂದಿದ ಆ ಬಡಮೇದರವನಿ ಗಿಂತಲೂ ನಿನ್ನ ಯೋಗ್ಯತೆ ಎಷ್ಟು ಕಡಮೆಯಾಗಿದೆ, ತಿಳಿದುಕೊಂಡೆಯ? ಅವನಿಗೆ ನೀನು ಹಿಂದೆ ಮಾಡಿದ ಅಪರಾಧಕ್ಕೆ ತಕ್ಕ ಪರಿಹಾರವನ್ನು ನಿನ್ನಿಂದ ಅವನಿಗೆ ಕೊಡಿಸಬೇಕಾಗಿದೆ. ನೀನು ಅವನ ವಿಷಯದಲ್ಲಿ ಬೇಕೆಂದು ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಮಾಡಿದರೆ, ನಿನ್ನ ಆಸ್ತಿಯನ್ನೆಲ್ಲಾ ಅವನಿಗೆ ಕೊಡಿಸಿ ಅವನಿಗೆ ನೀನು ಮಾಡಿದ ಹಾಗೆ ನಿನಗೂ ಜೀವನೋಪಾಯಕ್ಕೆ ಮಾರ್ಗವಿಲ್ಲದಂತೆ ಮಾಡುವುದೇ ಧರ್ಮ.