ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೪೧. ನಿಂದ ಅವನ ಐಶ್ವರ್ಯವನ್ನೆಲ್ಲಾ ಕಿತ್ತು ಕೊಂಡು ಇರಿಸಿಕೊಳ್ಳುತಿದ್ದೆ ಎಂದನು. ಕೂಡಲೆ ಸುಮತಿಯು-ಆ ದೊರೇ ಅಳಿಯನ ಹಾಗೆ ಅಹಂಕಾರಿ ಯಾಗಿಯೂ ದುಷ್ಟನಾಗಿಯೂ ಜಡನಾಗಿಯೂ ನಾನು ಎಲ್ಲಿಯಾದರೂ 'ಆದೇನಲ್ಲಾ ಎಂಬ ಭಯದಿಂದ ಅವನ ಆಸ್ತಿ ನನಗೆ ಬೇಡವೆನ್ನು ತಿದ್ದೆ, ಎಂದನು. ಅಲ್ಲಿಂದ ಮುಂದಕ್ಕೆ ರಾಮಜೋಯಿಸನೂ ಈ ಇಬ್ಬರು ಹುಡು ಗರೂ ಸಹಾ ಬೆಳಗಿನ ಹೊತ್ತು ತೋಟದಲ್ಲಿ ಕೆಲಸ ಮಾಡುತ್ತಲೇ ಇದ್ದರು, ಅವರಿಗೆ ಆಯಾಸವಾದಾಗ ಗುಡಿಲಿಗೆ ಹೋಗಿ ವಿಶ್ರಮಿಸಿ ಕೊಳ್ಳುವುದು, ಅಲ್ಲಿ ಸುಮತಿಯು ಯಾವುದಾದರೂ ಒಂದು ಇಂಪಾದ ಕಥೆಯನ್ನು ನಿತ್ಯವೂ ಓದುವುದು, ಮದನ ಕುಮಾರನು ಅದನ್ನು ಕಿವಿ ಗೊಟ್ಟು ಕೇಳಿ ಆನಂದ ಪಡುವುದು, ಹೀಗೆಯೇ ನಡೆಯುತಿತ್ತು. ಒಂದಾ ನೊಂದು ಕಾಲದಲ್ಲಿ ಸುಮತಿಯು ತನ್ನ ಅಕ್ಕನ ಮದುವೆಗೋಸ್ಕರ ೧೫ ದಿವಸಗಳ ಮಟ್ಟಿಗೆ ಗುರುವಿನ ಮನೆಯನ್ನು ಬಿಟ್ಟು ತಮ್ಮ ತಂದೇ ಮನೆಗೆ ಹೊರಟು ಹೋಗಲಾಗಿ, ರಾಮಜೋಯಿಸ ಮದನಕುಮಾರ ಇವರಿಬ್ಬರೇ ನಿಂತರು. ಸುಮತಿ ಹೊರಟುಹೋದ ಮಾರನೇ ದಿವಸ ಇವರಿಬ್ಬರೂ ತೋಟ ದಲ್ಲಿ ಕೆಲಸಮಾಡಿ ಎಂದಿನಂತೆ ಗುಡಿಲಿಗೆ ಬಂದರು, ಆಗ ಮದನನು ಯಥಾ ಪ್ರಕಾರವಾಗಿ ಓದತಕ್ಕ ಕಥೆ ಯನ್ನು ರಾಮಜೋಯಿಸನು ಓದು ವನೆಂದು ತಿಳಿದುಕೊಂಡಿದ್ದನು, ಆದರೆ ಜೋಯಿಸನು ಹಾಗೆ ಓದದೆ ಬೇರೇ ಕೆಲಸವಾಗಿದ್ದನು. ಮಾರನೇ ದಿನವೂ ಮೂರನೇ ದಿನವೂ ಹೀಗೆಯೇ ೧೫ ದಿವಸಗಳವರೆಗೂ ಓದುಗಾರಿಕೆ ಏನೇನೂ ಆಗಲಿಲ್ಲ. ಇದನ್ನು ಕಂಡು ಮದನನಿಗೆ ಬಹಳ ಅಸಮಾಧಾನವಾಯಿತು. ಇವನು ತನ್ನ ಮನಸ್ಸಿನಲ್ಲಿ ಏನೋ ನಿತ್ಯವೂ ಹೀಗಾಗುತಿದೆ. ಕಥೆಯನ್ನು ಕೇಳಬೇಕೆಂಬ ಆಶೆ ನನಗೆ ಉ೦ಟು, ಆದರೆ ಓದುವವರು ಯಾರೂ ಇಲ್ಲ. ಸುಮತಿಯಹಾಗೆ ಓದುವುದಕ್ಕೆ ನಾನೇ ಯಾಕೆ ಕಲಿತುಕೊಳ್ಳ “ಬಾರದು ? ನನಗೆ ಅಕ್ಷರ ಬಂದರೆ, ನೀವು ಓದಿ ತಾವು ಓದಿ,