ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ( uk ಸುಮತಿ ಮದನಕುಮಾರ [ಅಧ್ಯಾಯ ಎಂದು ನಾನು ಇತರರನ್ನು ಬೇಡಿಕೊಳ್ಳಬೇಕಾದ್ದೇ ಇಲ್ಲ. ನನ್ನ ಮಟ್ಟಿಗೆ ನಾನೇ ಓದಿಕೊಂಡು ಸಂತೋಷ ಪಡಬಹುದು. ಸುಮತಿ ಏನೋ ಬಹು ಬುದ್ಧಿಶಾಲಿಯೇ ಸರಿ; ಆದರೆ ಅವನಿಗೆ ಓದುವುದಕ್ಕೆ ಯಾರೂ ಹೇಳಿಕೊಡದೆಯೇ ಅವನು ಕಲಿತುಕೊಂಡಿರಲಾರ. ಅವನಿಗೆ ಹೇಳಿಕೊಟ್ಟ ಹಾಗೆ ನನಗೂ ಹೇಳಿಕೊಟ್ಟರೆ, ಅವನಹಾಗೆಯೇ ನಾನೂ ಓದಿಯೇನು, ಆಗಲಿ ನೋಡೋಣ. ಈಸಾರಿ ಅವನು ಇಲ್ಲಿಗೆ ಬರಲಿ, ಈ ವಿಷಯದಲ್ಲಿ ಅವನನ್ನು ಕೇಳಿಯೇ ಸಿದ್ಧ ಎಂದನು. - ಸುನತಿಯು ೧೫ ದಿವಸಗಳು ಕಳೆದ ಮಾರನೇ ದಿವಸವೇ ಹಿಂತಿ ರುಗಿ ಬಂದನು, ಇವನ ಆಗಮನವನ್ನೆ ನಿರೀಕ್ಷಿಸಿಕೊಂಡಿದ್ದ ಮದನ ಕುಮಾರನು,-ಸುಮತಿ, ನೀನು ಓದಲಿಕ್ಕೆ ಹೇಗೆ ಕಲಿತುಕೊಂಡೆ ? - ಸುಮತಿ- ರಾಮಜೋಯಿಸರು ಮೊದಲು ನನಗೆ ಅಕ್ಷರಗಳ ನ್ನೆಲ್ಲಾ ಹೇಳಿಕೊಟ್ಟರು, ತರುವಾಯ ಅಕ್ಷರಗಳನ್ನು ಸೇರಿಸುವುದಕ್ಕೂ, ಆ ಮೇಲೆ ಹೆಸರಕ್ಷರವನ್ನು ಬರೆಯುವುದಕ್ಕೂ ಕಲಿಸಿಕೊಟ್ಟರು ; ಹಾಗೆಯೇ ನಾನು ಓದುವುದಕ್ಕೆ ಕಲಿತುಕೊಂಡೆ. ಮದನ-ನನಗೂ ಅಕ್ಷರಗಳನ್ನು ಹೇಳಿಕೊಡುತೀಯ ? ಸುಮತಿ ಅಗತ್ಯವಾಗಿ ಆಗಲಿ. ಹೀಗೆ ಈ ಹುಡುಗರಿಬ್ಬರೂ ಮಾತನಾಡಿಕೊಂಡರು. ಆಗ ಸುಮ ತಿಯು ಅವನಿಗೆ ಅಕ್ಷರವನ್ನು ಹೇಳಿಕೊಟ್ಟನು. ಮದನ ೫ನೆ ವರ್ಷ ದಲ್ಲಿ ಕ್ರಮವಾಗಿ ಅಕ್ಷರಾಭ್ಯಾಸವಾಗಿದ್ದಾಗ್ಯೂ ಇವನು ಒಂದು ದಿವಸ ವಾದರೂ ಕೂತು ಒಂದು ಅಕ್ಷರವನ್ನೂ ಕಲಿತವನಲ್ಲ. ಆದರೆ ಈಗ ಅಕ್ಷರದ ಮೇಲೆ ಮಮತೆಹುಟ್ಟಿದ ಕಾರಣ ಮದನನು ವರ್ಣಮಾಲೆ ಯನ್ನೆಲ್ಲಾ ೩ ದಿವಸದಲ್ಲಿ ಕಲಿತುಕೊಂಡನು, ಅಕ್ಷರವೆಲ್ಲಾ ಹೀಗೆ ಜಾಗ್ರತೆಯಾಗಿ ಬರಲು, ಅರಸುಮಗನಿಗೆ ಅತ್ಯಂತ ಸಂತೋಷವಾಯಿತು. ಈ ಸಂತೋಷವನ್ನು ರಾಮಜೋಯಿಸನಿಗೆ ಆತುರದಿಂದ ಓಡಿಹೋಗಿ ಹೇಳಬೇಕೆಂದು ಮದುನನಿಗೆ ಮನಸ್ಸು ಹುಟ್ಟಿ ತು, ಆದರೆ ಉಂಡೆ ಯಾದ ಒಂದು ಕಥೆಯನ್ನು ಆತನ ಮುಂದೆ ಓದಿ ಆತನಿಗೆ ಇನ್ನೂ ಆಶ್ಚರ್ಯ ಹೆಚ್ಚಾಗುವಂತೆ ಮಾಡಬೇಕೆಂದು ಆಗ್ಗೆ ಸುಮ್ಮನಾದನು.