ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಸುಮತಿ ಮದನಕುಮಾರರ ಚರಿತ್ರೆ ರ [ಅಧ್ಯಾಯ ತಾನು ಉಳುಮೆ ಮಾಡತಕ್ಕೆ ಭೂಮಿಯ ಒಡೆಯನಾದ ಗೌಡನಿಗೆ ಒಪ್ಪಿಸಿದನು ; ಮತ್ತೊಂದನ್ನು ತನ್ನ ಕುರಿಮಂದೆ ಕಾಯುವುದಕ್ಕಾಗಿ 'ಇರಿಸಿಕೊಂಡನು. ಅದು ಮೊದಲುಗೊಂಡು ಈ ಎರಡು ಮರಿಗಳ ರೀತಿಯೂ ವಿಶೇಷವಾಗಿ ಬದಲಾಯಿಸಿತು, ಒಡೆಯನಿಗೆ ಕೊಟ್ಟ ಸಂಪಗೆ ಎಂಬ ನಾಯಿಯು ಗೌಡನ ಮನೆಗೆ ಹೋಗಿ ಅಲ್ಲಿನ ಅಡಿಗೆಯವರ ಸಂಗಡಲೂ ಆಳುಗಳ ಸಂಗಡಲೂ ವಿಶೇಷವಾಗಿ ಸಲಿಗೆಯಾಗಿ, ಅವರೊಡನೆ ಆಟ ವಾಡುತ ಅನೇಕ ಚೇಷ್ಟೆಯನ್ನು ಕಲಿತುಕೊಂಡಿತು. ಇದು ಮಾಡುವ ಚೇಷ್ಟೆ ಗಳನ್ನು ನೋಡಿ ಅಲ್ಲಿನ ಆಳುಗಳು ಸಂತೋಷಪಟ್ಟು, ಅದಕ್ಕೆ ಬೇಕಾದಷ್ಟು ಹಿಟ್ಟನ್ನೂ ಮಾಂಸವನ್ನೂ ಆಗಾಗ್ಗೆ ಹಾಕಿ, ಅದನ್ನು ಎಲ್ಲರೂ ಆದರದಿಂದ ಸಾಕುತಿದ್ದರು, ಹೀಗೆ ತಿಂದು ತಿಂದು ಸಂಪಗೆಯು ದಪ್ಪವಾಗಿ ಬೆಳೆದು ದುಂಡುದುಂಡಾಗಿ ನೋಡುವುದಕ್ಕೆ ಬಹು ಚೆನ್ನಾಗಿತ್ತು, ಆದರೆ ಮೈ ಹೊತ್ತು ಕೊಂಡು ನಡೆಯಲಾರದೆ ಇರುತಿತ್ತು ; ಇದರಲ್ಲಿ ಹೇಡಿತನ ಬಹು ಹೆಚ್ಚಾಗಿತ್ತು ; ಒಂದು ಸಣ್ಣ ನಾಯಿಯನ್ನು ಕಂಡರೂ ಹೆದರಿಕೊಂಡು ಓಡಿಹೋಗುತಿತ್ತು ; ಹೆಚ್ಚಾಗಿ ತಿಂಡಿ ತಿಂದು ಅಭ್ಯಾಸವಿದ್ದ ಕಾರಣ ತಿಂಡೀ ಸದಾರ್ಥ ಯಾವುದು ಎಲ್ಲಿ ಬಿದ್ದಿದ್ದಾಗ್ಯೂ ಕದ್ದು ತಿನ್ನು ತಿತ್ತು, ಆದಾಗ್ಯೂ ಪಾದಚಾರಿಗಳಾಗಿ ಹೋಗುತಿದ್ದ ಯಾರನ್ನು ಕಂಡರೂ ಬಾಲವನ್ನು ಅಲ್ಲಾಡಿಸುತಾ ಅವರ ಹಿಂದೆಯೇ ಹೋಗುತಿತ್ತು. ಅವರ ಮೈಮೇಲಕ್ಕೆ ಸಂತೋಷದಿಂದ ಅಡರುವುದು, ಎರಡು ಕಾಲಿನಲ್ಲಿ ನಿಂತುಕೊಳ್ಳುವುದು, ಯಾರಾದರೂ ಕಡ್ಡಿ ಯನ್ನಾಗಲಿ, ಬಟ್ಟೆ ಯನ್ನಾಗಲಿ, ಲಾಂದ್ರವನ್ನಾಗಲಿ, ಬಾಯಿಗೆ ಕೊಟ್ಟರೆ ಅದನ್ನು ಕಚ್ಚಿಕೊಂಡು ಹಿಂದೆಯೇ ಹೋಗಿ ಅವರಿಗೆ ಕೊಡು ವುದು, ಹೀಗೆಲ್ಲಾ ಮಾಡು ತ್ತಿದ್ದ ಕಾರಣ, ಆ ಸುತ್ತು ಮುತ್ತಿನ ಜನರೆಲ್ಲರ ಪ್ರೇಮಕ್ಕೆ ಇದು ಪಾತ್ರವಾಗಿತ್ತು. ಒಕ್ಕಲಿಗನ ಮನೆಯಲ್ಲಿದ್ದ ಮಲ್ಲಿಗೆಯಾದರೋ, ಅವನ ಗುಡಿಲಿನ ಬಾಗಿಲ ಜಗಲಿಯ ಮೇಲೆಯೇ ಬಿದ್ದಿರುತಿತ್ತು, ಇದರ ಮೈ ಸ್ವಲ್ಪ ಒಣಗಿಕೊಂಡೇ ಇತ್ತು, ಸಂಪಗೆ ಮಾಡುತಿದ್ದ ಚೇಷ್ಟೆ ಯಾವುದೂ