ಪುಟ:ಸಮತಿ ಮದನಕುಮಾರರ ಚರಿತ್ರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ತನ್ನ ಭೂಮಿಯನ್ನು ನೋಡಿಕೊಂಡು ಬರಬೇಕೆಂದು ಹೊರಟು ಸಂಪಗೆ ಯನ್ನು ತನ್ನ ಜೊತೆಯಲ್ಲಿಯೇ ಕರೆತಂದನು. ಹೊಸಜನರು ಯಾರಾ ದರೂ ಬಂದರೆ ನಾಯಿಗಳು ಎದ್ದು ಅವರ ಸುತ್ತಮುತ್ತಲೂ ಸುತ್ತಿ ಯಾಡುವುದು, ಅವರನ್ನು ಮೂಸಿನೋಡುವುದು ಹೀಗೆಲ್ಲಾ ಮಾಡು ವುದು ಉಂಟಷ್ಟೆ, ಅದೇ ಪ್ರಕಾರ ಗೌಡ ಅಲ್ಲಿಗೆ ಬಂದು ತಲಪಿದ ಕೂಡಲೆ ಮಲ್ಲಿಗೆಯು ಇವನನ್ನು ಮೂಸಿನೋಡಿ ಅಲ್ಲಲ್ಲಿ ಸುಳಿದಾಡಿತು. ಆಗ ಗೌಡನು ಒರಟಾಗಿ ಪರಪರಕಲಾಗಿ ಕಾಣಿಸಿಕೊಳ್ಳುತಿದ್ದ ಈ ಮಲ್ಲಿಗೆಯನ್ನು ನೋಡಿ ಅಸಹ್ಯ ಪಡುತಾ, ಇದನ್ನು ಅಲಕ್ಷವಾಗಿ ಕಂಡನು. ಸಂಸಗೆಯಲ್ಲಿದ್ದ ಚಾಕಚಕ್ಯಗಳು ಇದರಲ್ಲಿ ಕಾಣಬರಲಿಲ್ಲ. ಇದು ಒಂದು ಕೆಲಸಕ್ಕೂ ಬಾರದ ಎಂಜಲಹಾಳೇ ನಾಯಿ ಎಂದು ಗೌಡ ತಿಳಿದುಕೊಂಡಿದ್ದನು. ಈ ಸಮಯದಲ್ಲಿ ಈ ದುರಭಿಪ್ರಾಯವನ್ನು ಹೋಗಲಾಡಿಸತಕ್ಕಂಥಾ ಒಂದು ಸಂಗತಿ ಜರುಗಿತು. ಗೌಡನು ಅಲ್ಲಿಗೆ ಬಂದು ಎರಡು ಮೂರು ದಿವಸವಾದಮೇಲೆ ತನ್ನ ಭೂಮಿಗಳನ್ನೆಲ್ಲಾ ಅಲ್ಲಲ್ಲಿ ನೋಡಿಕೊಳ್ಳು ತಾ ಸ್ವಲ್ಪ ಒತ್ತಾದ ಕಾಡಿನಲ್ಲಿ ಹೋಗುತಿದ್ದನು. ಈ ನಾಯಿಗಳೆರಡೂ ಅವನ ಹಿಂದೆ ಹೋಗುತಿದ್ದವು, ಸವಿಾಪವಾದ ಒಂದು ಹೊದರಿನಲ್ಲಿ ಒಂದಾನೊಂದು ಸಿವಂಗಿಯು ಹೊಟ್ಟೆ ಗೆ ಕಾಣದೆ, ಏನಾದರೂ ಸಿಕ್ಕಿತೆ, ಬಾಯಿಗೆ ಹಾಕಿಕೊಂಡೇನೆ, ಎಂದು ಕಾದುಕೊಂಡು ಕೂತಿತ್ತು, ಅದು ಮನುಷ್ಯ ಬರುವ ಸದ್ದನ್ನು ಕೇಳಿ ಹೊದರಿನಿಂದ ಈಚೆಗೆ ಹೊರಟು ಹಾರಿಹಾರಿ ಬರುತಾ ನೆಗೆದು ಈ ಗೌಡನ ಮೇಲೆ ಬೀಳುವುದಕ್ಕೆ ಬಂತು. ಇವನಿಗೆ ಕಕಮಕೆ ಹಿಡಿಯಿತು. ಏನೂ ತೋರಲಿಲ್ಲ. ಈ ಗಾಬರಿಗೆ ಅನು ಸಾರವಾಗಿ, ಜೊತೆಯಲ್ಲಿ ಬರುತ್ತಿದ ಮೆಚ್ಚಿನ ಸಂಪಗೆಯು ಒಡೆಯ ನಿಗೆ ಸಮಯದಲ್ಲಿ ಸಹಾಯಮಾಡದೆ ಬಾಲವನ್ನು ಎರಡು ಕಾಲು ಸಂದಿಗೆ ಸೇರಿಸಿಕೊಂಡು ಭಯದಿಂದ ಅರಚಿಕೊಳ್ಳು ತಾ ಅವನ ಹಿಂದೆ ಓಡಿಹೋಯಿತು, ಗೌಡನ ಆಶೆ ನಿರಾಶೆಯಾಗುತ ಬಂತು, ಇವನ ಹಿಂದೆಯೇ ಸದ್ದು ಮಾಡದೆ ಇವನ ಕಣ್ಣಿಗೆ ಕಾಣಿಸಿಕೊಳ್ಳದೆ ದೂರ ದಲ್ಲಿ ಮೆಲ್ಲಗೆ ಬರುತಿದ್ದ ಮಲ್ಲಿಗೆಯು ಕ್ಷಣಮಾತ್ರದಲ್ಲಿ ಅಂಬು