ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ p೬ ಎಸೆದ ಹಾಗೆ ಓಡಿಬಂದು ಬಹುಧೈರ್ಯದಿಂದಲೂ ಚಮತ್ಕಾರದಿಂ ದಲೂ ಸಿವಂಗಿಯಮೇಲೆ ಹಾರಿ ಬಿತ್ತು, ಇದು ಬಿದ್ದ ಸೆಟ್ಟ ಗೇ ಸಿವಂ ಗಿಯು ತತ್ತರಿಸಿಹೋಗಿ ಕೆಳಕ್ಕೆ ಬಿತ್ತು ; ತರುವಾಯ ಚೇತರಿಸಿ ಕೊಂಡು ಕೂಡಲೆ ಎದ್ದು ತನ್ನ ಪಂಜದಿಂದ ಅತಿ ಬಿರುಸಾಗಿ ನಾಯಿಯ ಮುಖದಮೇಲೆ ಒಂದು ಏಟಹಾಕಿತು, ಮಲ್ಲಿಗೆಯು ಅದನ್ನು ತಪ್ಪಿಸಿ ಕೊಂಡು ತನ್ನ ಹಲ್ಲುಗಳಿಂದ ಸಿವಂಗಿಯ ಕತ್ತನ್ನು ಕಡಿಯಿತು. ಹೀಗೆ ಇವೆರಡಕ್ಕೂ ಘೋರವಾದ ಜಗಳ ಹತ್ತಿತು. ಬಹಳ ಹೊತ್ತು ಕಾದಿ- ಕಾದಿ ಎರಡೂ ತಟ್ಟಾಗಿ ಹೋದವು. ಎರಡರ ಮೈ ಯೂ ರಕ್ತಮಯವಾಯಿತು. ಮಲ್ಲಿಗೆಯು ಸಿವಂಗಿಯ ಆಯಸ್ಥಳವನ್ನು ಹಿಡಿದು ಕಚ್ಚಲು, ಸಿವಂಗಿಯು ಬಿದ್ದು ಪ್ರಾಣವನ್ನು ಬಿಟ್ಟಿತು. ದೂರದಲ್ಲಿ ನಿಂತು ಈ ಘೋರವಾದ ಕದನವನ್ನು ನೋಡುತಿದ್ದ ಗೌಡನ ಸವಿಾಪಕ್ಕೆ ಮಲ್ಲಿ ಗೆಯು ಓಡಿಬಂತು, ಅದಕ್ಕೂ ಪೂರಾ ಏಟು ಬಿದ್ದಿತ್ತು, ಗೌಡನು ಆ ದಿನ ಪ್ರಾಣ ಉಳಿದುದಕ್ಕೆ ಸಂತೋಷ ಪಡುತಾ ಮಲ್ಲಿಗೆಯ ಮೈ ರಕ್ತವನ್ನು ಒರಸಿ ಅದನ್ನು ಆದರಿಸಿದನು. ಇದರಿಂದ ಯಾರೂ ಮೇಲೆ ಮೇಲೆ ನೋಡಿ ಮೋಸ ಹೋಗಕೂಡದು; ಹೊರಗಡೆ ಎಷ್ಟು ಸರಕ ಲಾಗಿದ್ದರೂ ಒಳಗೆ ಉತ್ತಮವಾದ ಯೋಗ್ಯತೆ ಇರಬಹುದು; ಪ್ರಾಸಾದ ವಾಸಿಗಳಲ್ಲಿ ಶುದ್ಧ ಶೂನ್ಯವಾಗಿರುವ ಸದ್ಗುಣಗಳು ಗುಡಿಸಿಲಿನ ಬಡವರಲ್ಲಿ ಕಂಡು ಬರಬಹುದು, ಎಂದು ಆ ಗೌಡನು ಅನುಭವದಿಂದ ತಿಳಿದು ಕೊಂಡನು. ಈ ರೀತಿಯಲ್ಲಿ ಓದಿ ನಿಲ್ಲಿಸಲು, ರಾಮಜೋಯಿಸನು- ಬಹು ಚೆನ್ನಾಗಿದೆ ; ಸಂತೋಷವಾಯಿತು. ಹುಡುಗರು ಶ್ರಮಪಟ್ಟರೆ ದೊಡ್ಡ ವರು ಮಾಡತಕ್ಕ ಕೆಲಸಗಳನ್ನು ಅವರಿಗೆ ಸಮಸಮವಾಗಿ ಮಾಡಿಯಾರು. ಇದು ಹಾಗಿರಲಿ ಮದನ, ಈಗ ನೀನು ಓದುತಿದ್ದ ಕಥೆ ಹೇಗಿದೆ ? ನೋಡುವುದಕ್ಕೆ ಸುಂದರವಾಗಿ ಒಲಪುಮಾಡುತಿದ್ದು ತನ್ನೊಡೆಯನನ್ನು .ಸಿವಂಗಿ ತಿಂದುಕೊಳ್ಳಲೆಂದು ಬಿಟ್ಟು ಬಿಟ್ಟು ಓಡಿಹೋದ ಸಂಪಗೆ ಯಂಥಾ ನಾಯಿ ನಿನಗೆ ಬೇಕೆ ? ಇಲ್ಲ, ಯಾರೂ ಲಕ್ಷ ಮಾಡದೆ ತೆಳ್ಳಗೆ ಪರಕಲಾಗಿದ್ದು ಯಜಮಾನನಿಗೋಸ್ಕರ ತನ್ನ ಪ್ರಾಣವನ್ನು ಒಪ್ಪಿ