ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಸಲು ಹೋದ ಮಲ್ಲಿಗೆಯಂಥಾ ನಾಯಿ ನಿನಗೆ ಬೇಕೆ ? ಎಂದು. ಜೋಯಿಸ ಕೇಳಿದನು. ಆಗ ಮದನನು ಉಪಾಧ್ಯಾಯನನ್ನು ಕುರಿತು -ನನಗೆ ಮಲ್ಲಿಗೆಯಂಥಾ ನಾಯಿಯೇನೋ ಬೇಕು, ಆದರೆ ಅದಕ್ಕೆ ಮೈ ತೊಳೆದು ಒಳ್ಳೇ ಆಹಾರವನ್ನು ಕೊಟ್ಟು ಅದನ್ನು ಸುಖವಾಗಿ ಇಟ್ಟುಕೊಂಡಿರುತಿದ್ದೆನೇ ಹೊರತು, ಹೀಗೆ ಅದನ್ನು ಕಂಡರೆ ಲಕ್ಷವಿಲ್ಲದೆ ಬಿಟ್ಟು ಬಿಡುತ್ತಿರಲಿಲ್ಲ, ಎಂದನು. ಕೂಡಲೆ ಜೋಯಿಸನು- ನೀನು. ಹಾಗೆ ಮಾಡಿದ್ದರೆ, ಮಲ್ಲಿಗೆಯೂ ಸಂಪಗೆಯಂತೆಯೇ ದಪ್ಪವಾಗಿ ಇದ್ದ ಕಡೆಯಲ್ಲಿಯೇ ಇರುತ್ತಾ ಹೇಡಿಯಾಗುತಿತ್ತು. ಆದರೆ ಈ ಕಥೆ ಇನ್ನೂ ಮುಂದಕ್ಕೆ ಇದೆಯಷ್ಟೇ ; ಅದನ್ನು ಕೊನೆಗಾಣಿಸು, ಮುಂದಕ್ಕೆ ಏನಾಗು ವುದೋ ನೋಡೋಣ, ಎಂದನು, ಆಗ ಮದನಕುಮಾರನು ಕಥೆಯನ್ನು ಮುಂದಕ್ಕೆ ಸಾಗಿಸಿದನು ಮಲ್ಲಿಗೆಯ ಗುಣಾತಿಶಯಗಳನ್ನು ಕಂಡು ಗೌಡನಿಗೆ ಬಹು. ಸಂತೋಷವಾಯಿತು; ಆದಕಾರಣ ತನ್ನ ಸವಿಾಪದಲ್ಲಿಯೇ ಅದನ್ನು ಇರಿಸಿಕೊಳ್ಳಬೇಕೆಂಬ ತಾತ್ಪರ್ಯದಿಂದ, ತನಗೆ ಮಲ್ಲಿಗೆಯನ್ನು ಇನಾ. ಮಾಗಿ ಕೊಡೆಂದು ಒಕ್ಕಲಿಗನನ್ನು ಕೇಳಿಕೊಂಡನು, ಒಕ್ಕಲುಮಗ ನಿಗೆ ಗೌಡನ ಅಪೇಕ್ಷೆಯಂತೆ ಮಲ್ಲಿಗೆಯನ್ನು ಅವನ ಸಂಗಡ ಕಳುಹಿಸಿ ಕೊಡುವುದು ಇಷ್ಟವಿಲ್ಲದಿದ್ದಾಗ್ಯೂ, ಯಜಮಾನನ ಮಾತನ್ನು ಮಾರು ವುದಕ್ಕಾಗಲಿಲ್ಲ. ಗೌಡನು ಹೇಡಿಯಾದ ಸಂಪಗೆಯ ಮೇಲೆ ಅತ್ಯಾ. ಗ್ರಹಗೊಂಡು, ಅದನ್ನು ಬೈದು, ಕಾಡಿನಲ್ಲಿಯೇ ಬಿದ್ದಿರಲಿ, ಅದಕ್ಕೆ ಆಹಾರವನ್ನು ಹಾಕಬೇಡವೆಂದು ಹೇಳಿ, ಮಲ್ಲಿಗೆಯನ್ನು ಕರೆದು ಕೊಂಡು ಊರಿಗೆ ಹೊರಟು ಹೋದನು. ಗೌಡ ಹೊರಟುಹೋದ ತರುವಾಯ, ಒಕ್ಕಲಿಗನು ಸಂಪಗೆಗೆ ಹಿಟ್ಟನ್ನು ಹಾಕದೆ, ಈ ಕೆಟ್ಟ ನಾಯಿ ಸತ್ತು ಹೋಗಲೆಂದು ಸುಮ್ಮ ನಿದ್ದನು, ಆದರೆ ಅದರ ಆಕಾರವೂ, ರೂಪೂ, ಒಕ್ಕಲಿಗನನ್ನು ಕಂಡಾಗ ಲೆಲ್ಲಾ ಬಾಲವನ್ನು ಅಲ್ಲಾಡಿಸಿಕೊಂಡು ಅವನ ಕಾಲನ್ನು ನೆಕ್ಕುವುದಕ್ಕೆ ಬರುವ ವಿನ್ಯಾಸವೂ ಇವನ ಮನಸ್ಸನ್ನು ಕರಗಿಸಿತು, ಮತ್ತು ಇದನ್ನು ಕಂಡವರೆಲ್ಲಾ ಅದರ ಮೇಲಿನ ಪ್ರೀತಿಯಿಂದ ಅದಕ್ಕೆ ಆಹಾರವನ್ನು