ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೪ ಹಾಕೆಂದು ಆ ರೈತನಿಗೆ ಹೇಳಿದರು. ಆಗ ಒಕ್ಕಲಿಗನು ಬೇರೇ ಗುಣ ಉಂಟಾಗಲಾರದೆ, ನೋಡಬೇಕೆಂದು ನಿಶ್ಚಯಿಸಿಕೊಂಡು, ಮಲ್ಲಿಗೆಗೆ ಹಾಕುತ್ತಿದ್ದ ಹಾಗೆಯೇ ಸ್ವಲ್ಪ ಹಿಟ್ಟು ಸೊಪ್ಪನ್ನು ಹಾಕಿ ಸಾಕುತಿದ್ದನು. ಮೊದಲಿಗೆ ಈಗ ಆಹಾರ ಕಡಮೆಯಾಯಿತು ; ಮೈ ಸಣ್ಣಗಾಯಿತು ; ಲವಲವಿಕೆ ಹೆಚ್ಚಾಯಿತು, ಒಂದು ದಿವಸ ಸಂಪಗೆಯು ಮಳೆಯಲ್ಲಿ ನೆನೆದು ಮನೆಗೆ ಓಡಿಬಂದು ಬೆಂಕಿ ಉರಿಯುತಿದ್ದ ಒಲೇ ಹತ್ತಿರಕ್ಕೆ ಹೋಯಿತು, ಹೀಗೆ ಮಳೆಯಲ್ಲಿ ನೆನದಾಗಲೆಲ್ಲಾ ಬೆಂಕೀ ಕಾಸಿ ಕೊಳ್ಳುವುದಕ್ಕೆ ಒಲೆಯ ಹತ್ತಿರಕ್ಕೆ ಹೋಗುವ ಅಭ್ಯಾಸ ಇದಕ್ಕಿತ್ತು. ಆದಕಾರಣ ಹಿಟ್ಟನ್ನು ಮಾಡುತ್ತಾ ಕೂತಿದ್ದ ಒಕ್ಕಲಿಗನ ಹೆಂಡತಿಯ ಹತ್ತಿರ ಹೋಗಿ ಮೈ ಯನ್ನೂ ತಲೆಯನ್ನೂ ಝಾಡಿಸುತಾ ಒಲೆಯ ಮುಂದೆ ಮಲಗಿಕೊಂಡಿತು, ಆ ಹೆಂಗಸು ಅದನ್ನು ಆಚೆಗೆ ಅಟ್ಟ ಬಿಟ್ಟಳು. ಚಳಿಯಲ್ಲಿ ಶುನಕವು ಆಚೆಗೆ ಹೊರಟುಹೋಗಬೇಕಾಗಿ ಬಂತು. ನಿತ್ಯವೂ ಹೀಗೆಯೇ ಮಳೆಯಲ್ಲಿಯೂ ಗಾಳಿಯಲ್ಲಿಯೂ ನಡುಗಿ ನಡುಗಿ ಗಟ್ಟಿ ಯಾಯಿತು. ಎಷ್ಟು ಚಳಿ ಯಾದರೂ ತಡೆದುಕೊಳ್ಳುವ ಅಭ್ಯಾಸ ಹುಟ್ಟಿ ತು. ಪೂರೈಕ್ಕಿಂತಲೂ ಈಚೆಗೆ ಇದರ ಅಭ್ಯಾಸಗಳೆಲ್ಲಾ ಬದಲಾಯಿಸಿ ದವು. ಆದರೂ ಈ ಸಂಪಗೆಗೆ ಕಾಡುಮೃಗಗಳ ವಿಷಯದಲ್ಲಿ ಏನೋ ಭಯವಿತ್ತು, ಒಂದು ದಿವಸ ಕಾಡಿನಲ್ಲಿ ಈ ನಾಯಿ ಒ೦ದೇ ಹೋಗು ತಿರಲು, ಒಂದು ತೋಳ ಇದನ್ನು ದೂರದಿಂದ ಕಂಡು, ಓಡಿ ಬಂದು ಸಂಪಗೆಯ ಮೇಲೆ ಬಿದ್ದು ಅದರ ಕತ್ತನ್ನು ಹಿಡಿದುಕೊಂಡಿತು, ನಾಯಿ ತಪ್ಪಿಸಿಕೊಂಡು ಹೊರಡಬೇಕೆಂದು ಪ್ರಯತ್ನ ಮಾಡಿದರೂ ತೋಳ ಬಿಡಲಿಲ್ಲ. ಯಾರಾದರೇನು ? ಸಮಯ ಬಂದಾಗ ಹೇಡಿಗಳೂ ಕೂಡ ಶೂರರಾಗುತ್ತಾರೆ. ಅತ್ತಿತ್ತ ಅಡ್ಡಾಡುವುದಕ್ಕೆ ಆಸ್ಪದವಿಲ್ಲದೆ ಸಂಪಗೆಯು ಗರನೆ ತಿರುಗಿ ಉಪಾಯವಾಗಿ ತನ್ನ ಶತ್ರುವಿನ ಕತ್ತನ್ನು ಬಲವಾಗಿ ಹಿಡಿದು ಕಚ್ಚಿತು, ತೋಳವು ಒಂದು ಗಳಿಗೆಯಲ್ಲಿ ಸತ್ತು ಒರಗಿತು. ನಾಯಿಯನ್ನು ಒಕ್ಕಲಿಗನು ಹುಡುಕುತ್ತಾ ಬಂದು ಅದನ್ನು ಕಂಡು ಸಂತೋಷದಿಂದ ಅದರ ಮೈ ತಡವರಿಸಿ, ಅದಕ್ಕೆ ಸಂತೋಷವಾಗುವಂತೆ