ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಂ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ ಮಾತನಾಡಿದನು. ಇಷ್ಟರ ಮಟ್ಟಿಗೆ ಅದನ್ನು ಒಕ್ಕಲಿಗನು ಯಾವಾ ಗಲೂ ಮುದ್ದಿ ಸಿರಲಿಲ್ಲ, ತನ್ನ ಯಜಮಾನನಿಗೆ ಸಂತೋಷ ಉಂಟಾ ದ್ದನ್ನು ಕಂಡು ನಾಯಿಗೆ ಬಹು ಪ್ರೋತ್ಸಾಹವಾಯಿತು. ಇದಕ್ಕೆ ಪೂರೈ ದಲ್ಲಿ ಎಷ್ಟು ಅಧ್ಯೆ ರವಿತ್ತೋ ಈಚೆಗೆ ಅಷ್ಟು ಧೈರ ಹೆಚ್ಚಿತು. ಆ ಸುತ್ತಲೂ ಸಂಪಗೆಯ ಹೆಸರು ಎತ್ತಿದರೆ ಕುದ್ರ ಮೃಗಗಳಿಗೆಲ್ಲಾ ಗಡ ಗಡನೆ ನಡುಗುವ ಮಟ್ಟಿಗೆ ಆಯಿತು. - ಅತ್ತ ಮಲ್ಲಿಗೆಯು ಗೌಡನ ಊರಿಗೆ ಹೋಗಿ, ಯಾವಬೇಟೆಯೂ ಇಲ್ಲದೆ ಗೌಡನ ಮನೆಯಲ್ಲಿ ತಿನ್ನುವುದು ಅವನ ಜಗಲೀ ಮೇಲೆ ಮಲ ಗಿರುವುದು, ಇಷ್ಟು ಕೆಲಸದಲ್ಲಿ ಕಾಲವನ್ನು ಕಳೆಯುತಿತ್ತು. ಯಜ ಮಾನನಿಗೆ ಪೂತ್ವದಲ್ಲಿ ಇದು ಮಾಡಿದ ಉಪಕಾರಸ್ಮರಣೆಯಿಂದ ಎಲ್ಲರೂ ಇದನ್ನು ಆದರಿಸಿ ಹೆಚ್ಚಾಗಿ ಉಪಚಾರವನ್ನು ಮಾಡುತಿದ್ದರು. ಸಾಧನೆ ಇಲ್ಲದಿದ್ದರೆ ಎಂಥಾ ಸುಗುಣವಾದರೂ ಮಸಣಿಸಿ ಹೋಗುವುದು, ಸಂಪ ಗೆಗೆ ಪೂರೈದ ಧೈರವೂ ಶಕ್ತಿಯೂ ಕಡಮೆಯಾಯಿತು, ಪಾಲುಮಾರಿಕೆ ಗುಣ ಹೊಸದಾಗಿ ಬಂತು. ಒ೦ದಾನೊಂದು ದಿವಸ ಗೌಡನು ಪುನಃ ತನ್ನ ಭೂಮಿಯನ್ನು ನೋಡಿಕೊಂಡು ಹೋಗಬೇಕೆಂದು ಹಳ್ಳಿಗೆ ಹೋದನು, ಮಲ್ಲಿಗೆಯು ತನ್ನ ರಕ್ಷಣೆಗಾಗಿ ಇರಲೆಂದು ಅದನ್ನು ಕರೆದುಕೊಂಡು ಬಂದನು, ಆ ಗ್ರಾಮದ ಸಮಿಾಪದಲ್ಲಿ ಹೊಸದಾಗಿ ಒಂದು ಕಿರುಬ ಬಂದು ಸೇರಿ ಕೊಂಡು ದನಕರುಗಳಿಗೂ ಕುರಿಗಳಿಗೂ ಬಹುಬಾಧೆಯನ್ನು ಮಾಡು ತಿತ್ತು, ಇದನ್ನು ಕೇಳಿ ಗೌಡನು ಸಂಪಗೆಯನ್ನು ಕರೆದುಕೊಂಡು ಹೋಗಿ ಆ ಕಿರುಬವನ್ನು ಬೇಟೆಯಾಡಲು ಬಿಟ್ಟನು, ಕಿರುಬ ಕೊನೆಗೆ ಸಿಕ್ಕಿತು, ಅದು ಆರ್ಭಟ ಮಾಡಿದ್ದನ್ನು ಕೇಳಿ ಮಲ್ಲಿಗೆ ಹೆದರಿಕೊಂಡು ಗೌಡನ ಹಿಂದುಗಡೆಗೆ ಓಡಿಹೋಯಿತು, ಗ್ರಾಮಸ್ಥರ ಸಂಗಡ ಬಂದಿದ್ದ ಸಂಪಗೆಯು ಕೂಡಲೇ ಹಾರಿ ಹೊದರಿಗೆ ಹೊಕ್ಕು ಆ ಕಿರುಬವನ್ನು ಹಿಡಿದು ಕೊಂದುಹಾಕಿತು. ಗೌಡನಿಗೆ ಸಂಪಗೆಯ ಗುರುತೇ ಸಿಕ್ಕಲಿಲ್ಲ. ಇದು ಯಾವುದು ಎಂದು ಅವನು ಕೇಳಲು ಒಕ್ಕಲಿಗನು ಸಂಪಗೆಯೆಂದು ಹೇಳಿದನು ಅದನ್ನು ಕೇಳಿದ ಕೂಡಲೆ ಗೌಡನಿಗೆ ಆಶ್ಚರ್ಯವುಂಟಾಗಿ,