ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರ 83 ಮುಸಂಡಿಯಾಗಿ ಇದ್ದ ಕಡೆಯಲ್ಲಿಯೇ ಇರತಕ್ಕವನಿಗೆ ಇದ್ದ ಧೈರ್ಯವೂ ಹೋಗುವುದು ; ಗುಣವಿದ್ದರೇನು ? ಅದಕ್ಕೆ ತಕ್ಕ ಸಾಧನೆ ಇರಬೇಕು, ಎಂದು ನುಡಿದನು. ೫ನೆ ಅಧ್ಯಾಯ ಮೇಲೆ ಕಂಡ ರೀತಿಯಲ್ಲಿ ಕಥೆ ಮುಗಿಯಿತು, ಆಗ ರಾಮ ಜೋಯಿಸನು ಹೇಳಿದ್ದೇನಂದರೆ--ಮದನ ಕುಮಾರನು ಓದುವ ಮಟ್ಟಿಗೆ ಪಾಂಡಿತ್ಯವನ್ನು ಸಂಪಾದಿಸಿದ್ದನ್ನು ನೋಡಿ ನಾನು ಸಂತೋಷ ಪಟ್ಟಿ. ಈಗ ಓದುವ ವಿಷಯದಲ್ಲಿ ಅವನಿಗೆ ಸಹಾಯಬೇಡ, ಎಲ್ಲಿ ಯಾದರೂ ಸರಿಯೆ ಕೂತುಕೊಂಡು ಗ್ರಂಥವನ್ನು ಓದಿ ಸಂತೋಷಪಡ ಬಲ್ಲ, ನಮ್ಮ ಭಾಷೆಯಲ್ಲಿರತಕ್ಕ ಸಮಸ್ತ್ರ ಗ್ರಂಥಗಳೂ ಇಲ್ಲಿಂದ ಮುಂದಕ್ಕೆ ಅವನಿಗೆ ಸ್ವಾಧೀನವಾಗುವುವು. ಈ ದಿನ ನಾವು ಓದಿಸಿ ದಂಥಾ ಚಿಕ್ಕ ಕಥೆಗಳಾದರೂ ಸರಿಯೆ, ಮಹಾತ್ಮರ ಚರಿತ್ರೆಯಾದರೂ ಸರಿಯೆ, ದೇಶಾಂತರಗಳಲ್ಲಿ ಸಿಕ್ಕುವ ಪಶು ಪಕ್ಷಿ ಮೃಗಾದಿಗಳ ಸ್ವಭಾವ ವನ್ನು ಕುರಿತು ಬರೆದಿರುವ ಲೇಖನಗಳಾದರೂ ಸರಿಯೆ, ಯಾವುದಾ ದರೂ ಇತಃಪರ ಆತ ಓದಬಹುದು ಮುಖ್ಯವಾಗಿ ಇನ್ನು ಮುಂದಕ್ಕೆ ಅವನ ಕೈಲಾಗದೇ ಇರತಕ್ಕದ್ದು ಇಂಥಾದ್ದು ಎಂದು ಹೇಳುವುದಕ್ಕೆ ಯಾವುದೂ ತೋರಲಿಲ್ಲ. ಈತನು ಮುಂದಕ್ಕೆ ತಾನೂ ದೊಡ್ಡ ಪಂಡಿತ ನಾಗಿ ಇತರರಿಗೂ ಪಾಂಡಿತ್ಯವನ್ನು ಉಂಟುಮಾಡಲು ಶಕ್ತಿಯುಳ್ಳವ ನಾಗಬಹುದೆಂದು ನನಗೆ ಕೋರಿಕೆ ಇದೆ, ಎಂದನು. ಹೀಗೆ ಜೋಯಿಸನು ಸ್ತೋತ್ರ ಮಾಡಿದ್ದನ್ನು ಕೇಳಿ ಮದನ ಕುಮಾರನು ಉಬ್ಬಿ ಹೋಗಿ ನುಡಿದದ್ದೇನೆಂದರೆ, ನಾನು ಪಾಂಡಿತ್ಯ ದಲ್ಲಿ ಯಾರಿಗೂ ಕಡಮೆಯಲ್ಲವೆನ್ನಿಸಿಕೊಳ್ಳಬೇಕೆಂದು ಖಂಡಿತಮಾಡಿ