ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕೊಂಡಿದೇನೆ. ನಾನು ಈಗ ಹುಡುಗನಾಗಿದ್ದಾಗ್ಯೂ ದೊಡ್ಡವರಿಗಿಂತಲೂ ಎಷ್ಟೋ ಬುದ್ದಿವಂತ. ನಮ್ಮ ಅರಮನೆಯಲ್ಲಿ ನೂರಾರು ಜನ ಆಳು ಗಳಿದಾರೆ, ಒಬ್ಬನಿಗಾದರೂ ನನ್ನ ಮಟ್ಟಿಗೆ ಓದುವುದಕ್ಕೆ ಬಾರದು, ಎಂದು ಅಹಂಕಾರ ಪಟ್ಟ ನು, ಈ ಮಾತನ್ನು ಜೋಯಿಸ ಕೇಳಿ ಆ ನಿಮ್ಮ ಆಳುಗಳಿಗೆ ಮಠವನ್ನಿಟ್ಟು ಓದಿಸಿದವರು ಯಾರು ಹೇಳು, ಎಂದನು. ಯಾರೂ ಇಲ್ಲ ಎಂದು ಮದನನು ಉತ್ತರ ಕೊಟ್ಟನು. ಕೂಡಲೆ ಉಪಾ ಧ್ಯಾಯನು ಆ ಬಾಲಕನನ್ನು ದುರಗುಟ್ಟಿ ಕೊಂಡು ನೋಡುತಾ-ಆದ ಕಾರಣ ಅವರು ದಡ್ಡರಾಗಿದ್ದರೆ ಏನು ಆಶ್ಚಯ್ಯ ? ನಿನಗೆ ಏನನ್ನೂ ಹೇಳಿಕೊಡದಿದ್ದರೆ ಬಹುಶಃ ನಿನಗೂ ಏನೂ ಬರುತಿರಲಿಲ್ಲ. ಈಗ ತಾನೆ ನಿನಗೆ ಏನು ಬರುತ್ತೆ ? ಏನೇನೂ ಬಾರದು ಎಂದು ಹೇಳಿ ಮೂದಲಿಸಿದನು. ಈ ರೀತಿಯಲ್ಲಿ ರಾಮಜೋಯಿಸನು ಮದನ ಕುಮಾರನ ವಿದ್ಯಾ ಭ್ಯಾಸವನ್ನು ಮೊದಲು ಮಾಡಿದನು. ಮದನನಾದರೆ ಸಹಜವಾಗಿ ಒಳೋಸ್ವಭಾವ ಉಳ್ಳವನು. ಆದರೆ ಈ ಬಾಲಕನಿಗೆ ದುಸ್ವಭಾವಗಳನ್ನು ಕಲಿಸಿದ್ದರು. ಇದರಿಂದ ಅವನ ಸುಗುಣಗಳು ಈಚೆಗೆ ಒಂದೂ ಪ್ರಕಾ ಶಿಸದ ಹಾಗೆ ಅಡ್ಡಿಯಾಗಿತ್ತು. ಈ ಹುಡುಗನಿಗೆ ಯಾವಾಗಲೂ ಸ್ವಲ್ಪ ಮಾತಿಗೆಲ್ಲಾ ಅತಿಯಾಗಿ ಕೋಪಬರುತಿತ್ತು ; ತನ್ನಂತೆ ಡಂಭವಾಗಿ ಬಟ್ಟೆ ಯನ್ನು ಹಾಕಿಕೊಳ್ಳದೆ ಮಾಸಲ ಬಟ್ಟೆ ಯನ್ನು ಹಾಕಿಕೊಂಡಿದ್ದವ ರೆಲ್ಲಾ ತನ್ನ ಚಾಕರರೆಂದು ತಿಳಿದುಕೊಂಡಿದ್ದನು. ಆಗ ಒಂದಾನೊಂದು ಸಂಗತಿ ನಡೆಯಿತು. ಮದನನು ಒಂದು ದಿನ ಚೆಂಡನ್ನೂ ದಾಂಡನ್ನೂ ತೆಗೆದುಕೊಂಡು ಆಡುತಾ ಇರಲು, ಆ ಚೆಂಡು ಬೇಲಿಯಮೇಲೆ ಹಾರಿ ಒಂದು ತೋಟದೊಳಕ್ಕೆ ಬಿತ್ತು. ಮದನನು ಆ ತೋಟದಲ್ಲಿ ಒಂದು ಹರಕು ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಗಿಡಗಳಿಗೆ ನೀರು ಹಾಕುತ್ತಿದ್ದ ಒಬ್ಬ ಒಕ್ಕಲಿಗರ ಹುಡುಗ ನನ್ನು ನೋಡಿ, ಮದನ-ಎಲಾ ಆ ಚಂಡನ್ನು ತೆಗೆದುಕೊಂಡು ಬಾರೆಲಾ. ಆ ಚಿಕ್ಕ ಹುಡುಗನು ಇವ ಹೇಳಿದ ಮಾತನ್ನು ಕಿವಿಯ ಮೇಲೆ