ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಈ4 ಹಾಕಿಕೊಳ್ಳದೆ ತನ್ನ ಕೆಲಸವನ್ನು ತಾನು ನೋಡುತಿದ್ದನು, ಅರಸು ಮಗನಿಗೆ ಆಗ್ರಹಬಂತು. ಮದನ-ಏನೋ, ನಾನು ಹೇಳಿದ್ದು ನಿನ್ನ ಕಿವಿಗೆ ಬೀಳಲಿಲ್ಲ ವೇನೆಲಾ ? ಹುಡುಗ-ನಾನೇನೂ ಕಿವಡನಲ್ಲ, ನೀನು ಹೇಳಿದ್ದು ಕೇಳಿತು. ಮದನ-ಹಾಗಾದರೆ ಚಂಡನ್ನು ಎತ್ತಿಕೊಂಡುಬಾ. ಹುಡುಗ- ನಾನು ಅದನ್ನು ತರಬೇಕೆಂದು ನನಗೆ ಅಗತ್ಯವಿಲ್ಲ. ಮದನ ನಿನಗೆ ಅಗತ್ಯ ಉಂಟಾಗುವ ಹಾಗೆ ಮಾಡಲೋ ? ಎರಡು ಬಿಸಿಬಿಸಿಯಾಗಿ ಬೇಕೊ ? ಹುಡುಗ-ನೀನು ಬಡಪಾಯಿ, ನಿನ್ನ ಕೈಲೇನಾದೀತೆಲೆ ? ಹೀಗೆಂದು ತಿರಸ್ಕರಿಸಿ ಅವ ಆಡಿದ ಮಾತನ್ನು ಕೇಳಿ ರಾಜಪುತ್ರನಿಗೆ ರೇಗಿಹೋಯಿತು; ಕೂಡಲೆ ಆ ಬಡ ಹುಡುಗನನ್ನು ಹಿಡಿದು ಹೊಡೆಯ ಬೇಕೆಂದು ಮದನ ಬೇಲಿಯನ್ನು ಹಾದು ಹೋಗಲು, ಕಾಲು ಜಾರಿ ಬಿದ್ದನು, ಒಂದೆರಡು ಮುಳ್ಳು ಮೈಗೆ ಬಲಿದುಕೊಂಡಿತು ; ತೊಟ್ಟಿದ್ದ ಮಖಮಲ್ಲಿನ ಅಂಗಿ ಹರಿದು ಹೋಯಿತು ; ಮೈಯೆಲ್ಲಾ ಮಣ್ಣಾಯಿತು. ಮಂಡಿ ತರೆದು ಹೋಯಿತು, ಅಲ್ಲಿದ್ದ ಒಂದು ಹೆಗ್ಗಣದ ಡೊಗರಿಗೆ ಕಾಲು ದೊಸಕೊಂಡು ಹೋದ್ದರಿಂದ, ಮೇಲಕ್ಕೆ ಏಳಲಾರದೆ ಹೋದನು. ಇವನ ಸ್ಥಿತಿಯನ್ನು ನೋಡಿ ಆ ಬಡ ಹುಡುಗನು ಪರಿತಾಪದಿಂದ ಮದನನನ್ನು ಮೇಲಕ್ಕೆ ಎತ್ತಿ ನಿಲಿಸಿ, ಚುಚ್ಚಿ ಕೊಂಡಿದ್ದ ಮುಳ್ಳನ್ನು ಕಿತ್ತು ಮಣ್ಣನ್ನು ಕೊಡವಿದನು, ಮದನನಿಗೆ ಬಹು ನಾಚಿಕೆಯಾಯಿತು; ಒಂದು ಮಾತನ್ನೂ ಆಡದೆ ಮನೆಗೆ ಓಡಿಹೋದನು, ರಾಮಜೋಯಿ ಸನು ಇವನ ರೀತಿಯನ್ನು ಕಂಡು ರಾಜಪುತ್ರನಿಗೆ ಏನೋ ದೊಡ್ಡ ಪೆಟ್ಟಾಯಿತೆಂದು ತಿಳಿದು, ಹತ್ತಿರಕ್ಕೆ ಬಂದು ನೋಡಿ, ನಡೆದ ಸಂಗತಿ ಯನ್ನೆಲ್ಲಾ ಕೇಳಿ ನಗುತ್ತಾ, ಬಡ ಹುಡುಗರನ್ನು ಹಾಗೆ ಹೊಡೆಯುವು ದಕ್ಕೆ ಇನ್ನು ಮೇಲೆ ಹೋಗಬೇಡವೆಂದು ಮದನನಿಗೆ ಬುದ್ದಿ ಹೇಳಿದನು. ಮಾರನೇ ದಿನ ರಾಮಜೋಯಿಸ, ಸುಮತಿ, ಮದನಕುಮಾರ ಈ ಮೂರು ಮಂದಿಯೂ, ಎಂದಿನಂತೆ ತೋಟದ ಗುಡಿಸಿಲಿನಲ್ಲಿ ಸೇರಿ