ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P ಸುಮತಿ ಮದನಕುಮಾರರ ಚರಿತ [ಅಧ್ಯಾಯ ದರು, ಉಪಾಧ್ಯಾ ಯನು ಒಂದು ಕಥೆಯನ್ನು ಓದು ಎಂದು ಸುಮತಿಗೆ ಹೇಳಲು, ಅವನು ಓದಿದ್ದು ಹೇಗೆಂದರೆ :- ಕಯ, ಸಿಂಹ ಅಸುರಪುರವೆಂಬ ಒಂದು ಗ್ರಾಮದಲ್ಲಿ ಸಕ್ರೂರನೆಂಬ ಒಬ್ಬ ಹಣ ವಂತನಿದ್ದನು. ಇವನಿಗೆ ವಿಶೇಷವಾಗಿ ಭೂಸ್ಥಿತಿ ಇತ್ತು. ಈ ಭೂಮಿ ಗಳನ್ನು ವ್ಯವಸಾಯ ಮಾಡುವುದಕ್ಕಾಗಿ ತನ್ನ ಕೈಕೆಳಗೆ ಅನೇಕ ಜೀತಗಾರರನ್ನು ಇಟ್ಟು ಕೊಂಡಿದ್ದನು. ಈ ಜೀತಗಾರರಿಗೆ ಒಡೆಯನು ಇಲ್ಲದ ಹಿಂಸೆಯನ್ನೆಲ್ಲಾ ಕೊಟ್ಟು ಅವರನ್ನು ಗೋಳು ಹುಯಿದು ಕೊಳ್ಳುತಿದ್ದನು. ಅವರಲ್ಲಿ ಕಯನೆಂಬ ಒಬ್ಬ ಜೀತಗಾರನು ಯಜ ಮಾನನ ಹಿಂಸೆಯನ್ನು ತಡೆಯಲಾರದೆ ತನ್ನ ಮನಸ್ಸಿನಲ್ಲಿ ಇನ್ನು ಈ ಬಾಧೆಯನ್ನು ಸಹಿಸಲಾರೆ. ಕೊನೆಗೆ ಬಂತು, ಇಂಥಾ ಕಷ್ಟದಲ್ಲಿ ಬಾಳು ಬಾಳುವುದಕ್ಕಿಂತಲೂ, ಸಾಯುವುದು ಲೇಸು. ಇಂಥಾ ಒಡೆಯನ ಸೇವೆಯನ್ನು ಬಿಟ್ಟು ಎಲ್ಲಿಯಾದರೂ ಓಡಿಹೋಗಬೇಕು ; ಮತ್ತೆ ಇವನ ಕೈಗೆ ಏನಾದರೂ ನಾನು ಸಿಕ್ಕಿದರೆ ನನ್ನನ್ನು ಜೀವಸಹಿತ ಬಿಡುವುದಿಲ್ಲ. ತಲೆತಪ್ಪಿಸಿಕೊಂಡು ಎಲ್ಲಿಗಾದರೂ ಓಡಿಹೋದರೆ ಕಾಡಿಗೆ ಹೋಗಬೇಕು ; ಅಲ್ಲಿಯೂ ಕೂಡ ಕಾಡು ಮೃಗಗಳ ಕಾಟ, ಆದರೆ ಮನುಷ್ಯರ ಹಿಂಸೆಗಿಂತಲೂ ಕಾಡುಮೃಗಗಳ ಬಾಧೆ ಉತ್ತಮ, ಹಿಂಸೆ ಕೊಡುವ ಇಂಥಾ ಜೀತಕ್ಕಿಂತಲೂ ಮೃಗಗಳ ಬಾಯಿಗಾದರೂ ಹೋಗಿ ಬಿದ್ದೇನು, ಎಂದುಕೊಂಡನು. - ಹೀಗೆ ನಿಶ್ಚಯಮಾಡಿಕೊಂಡು, ಒಂದು ದಿವಸ ಸಮಯವನ್ನು ನೋಡಿ ಒಡೆಯನ ಮನೆಯನ್ನು ಬಿಟ್ಟು ಕಾಡಿಗೆ ಓಡಿಹೋದನು. ಅಲ್ಲಿ ಒಂದು ವಿಧವಾದ ಕಷ್ಟ ಹೋಗಿ ಮತ್ತೊಂದು ವಿಧವಾದ ಕಷ್ಟ ಬಂತು, ಬೇಲಿಗಳಲ್ಲಿಯೂ, ಮುಳ್ಳು ಪೊದೆಗಳಲ್ಲಿಯೂ ನುಸಿದು, ಮೈಯೆಲ್ಲಾ ತರೆದು ಹೋಗಿ ಬಹಳ ರಕ್ತ ಸುರಿಯುತಿತ್ತು. ಹೊತ್ತು ಹೊತ್ತಿಗೆ ಹಸಿವು ಹೆಚ್ಚಿತು, ಕಾಡಿನಲ್ಲಿ ಯಾವ ಆಹಾರವೂ ಸಿಕ್ಕಲಿಲ್ಲ. ಆಯಾಸ ಬಲವಾಯಿತು, ಕೊನೆಗೆ ಕಯನು ಸಾಯಬೇಕೆಂದು ಮನಸ್ಸಿ