ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ಹವುದು. ಜೋಯಿಸ-ಹಾಗಾದರೆ ಸಂಬಳವನ್ನು ಕೊಡತಕ್ಕವರು ಚಾಕ ರರನ್ನು ಹೊಡೆಯಬಹುದು, ಒದೆಯಬಹುದು ತಮ್ಮ ಮನಸ್ಸು ಬಂದ ಹಾಗೆ ಮಾಡಬಹುದಷ್ಟೆ ? ಮದನ-ಬೇಕಾದ್ದನ್ನು ಮಾಡಬಹುದು. ಜೋಯಿಸ-ಸೂರ್ಯಭಟ್ಟರ ಮನೆಯಲ್ಲಿ ನೀನು ಚಾಕರಿಗೆ ಇದ್ದರೆ, ಅವರು ನಿನ್ನ ನ್ನು ಬೇಕಾದ ಹಾಗೆ ಹಿಂಸಿಸಬಹುದಷ್ಟೆ ? ಮದನ-ಅವರು ನನ್ನನ್ನು ಚಾಕರಿಗೆ ಇರಿಸಿಕೊಳ್ಳುವುದಕ್ಕೆ ಕಾರಣವಿಲ್ಲ; ಅಥವಾ ಇರಿಸಿಕೊಂಡಾಗ್ಯೂ ಹಿಂಸೆ ಮಾಡುವುದಕ್ಕೆ ಕಾರಣವಿಲ್ಲ. ಜೋಯಿಸ-ಹಾಗಾದರೆ ಸಂಬಳಕ್ಕೆ ಆಳುಗಳನ್ನು ಇರಿಸಿಕೊಂಡ ಮಾತ್ರಕ್ಕೇ ಅವರನ್ನು ಹಿಂಸಿಸಲು ಕಾರಣವಿಲ್ಲವಷ್ಟೆ ? ಆ ಪಕ್ಷಕ್ಕೆ ನಿಮ್ಮ ತಂದೆ ಆ ಜೀತಗಾರನನ್ನು ಚಾಕರಿಗೆ ಇರಿಸಿಕೊಳ್ಳಲು ಕಾರಣ ವೇನು ? ಮದನ-ಅವರೆಲ್ಲಾ ಬಡವರು, ಅವರಿಗೆ ಏನೂ ಗತಿ ಇಲ್ಲ. ನಾವು ದೊರೆಗಳು, ಐಶ್ವರ್ಯವಂತರು. ಜೋಯಿಸ~ ಐಶ್ವರ್ಯವಂತರು ಎಂದರೇನು ? ಮದನ-ಹಾಗೆಂದರೆ, ನಮ್ಮ ಅಪ್ಪಾಜಿಯ ಹತ್ತರ ಗಾಡಿಯಿದೆ, ಕುದುರೆ ಇದೆ, ಬೇಕಾದಷ್ಟು ಹಣ, ಒಡವೆ, ಇದೆಲ್ಲಾ ಇದೆ ; ಒಳ್ಳೆ ಅರಮನೆ ಇದೆ, ಜೋಯಿಸ-ಇದೆಲ್ಲವನ್ನೂ ಯಾರಾದರೂ ಕಿತ್ತುಕೊಂಡು ಹೋಗಿ, ನೀನೂ ಬಡವನಾದರೆ, ಆಗ ನಿನ್ನ ನ್ನು ಯಾರಾದರೂ ಚಾಕ ರಿಗೆ ಇರಿಸಿಕೊಂಡು, ನಿನ್ನನ್ನು ಬೈದು, ಹೊಡೆದು, ಬೇಕಾದ ಹಿಂಸೆ ಯನ್ನೆಲ್ಲಾ ಮಾಡಬಹುದಷ್ಟೆ ? ಮದನ-ಇತರರು ನನ್ನನ್ನು ಹಿಂಸೆಮಾಡಕೂಡದು; ಅದು ಸರಿಯಲ್ಲ.