ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಜೋಯಿಸ- ಹಾಗಾದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು ಹಿಂಸೆಮಾಡಕೂಡದೊ ? ಮದನ ಕೂಡದು. ಜೋಯಿಸ-ಆ ಪಕ್ಷಕ್ಕೆ, ಒಬ್ಬ ಮನುಷ್ಯನು ಮತ್ತೊಬ್ಬನನ್ನು ಚಾಕರಿಗೆ ಇರಿಸಿಕೊಳ್ಳ ಕೂಡದು ; ಹಾಗೆ ಇರಿಸಿಕೊಂಡರೆ ಅವರಿಗೆ ಹಿಂಸೆಮಾಡಿದಹಾಗಾಯಿತು ; ಆದ್ದರಿಂದ ಇನ್ನು ಮೇಲೆ ಚಾಕರರನ್ನು ಇರಿಸಿಕೊಳ್ಳಲೇಕೂಡದಾಯಿತು. ಮದನ -ಇಲ್ಲ, ಜೋಯಿಸರೆ, ಹಾಗೆ ಹೇಳಕೂಡದು; ಇನ್ನು ಮೇಲೆ ಚಾಕರರಿಗೆ ನಾನು ಹಿಂಸೆ ಮಾಡುವುದಿಲ್ಲ : ಅವರನ್ನು ಬೈದು ಹೊಡೆಯುವುದಿಲ್ಲ. ಜೋಯಿಸ ಹಾಗಾದರೆ ನೀನು ಒಳ್ಳೆ ಹುಡುಗನಾದೆ. ಮುಂದೆ ಕಥೆ ಏನಾಯಿತು, ಕೇಳೋಣ.- ಆ ಅದೃಷ್ಟಹೀನನಾದ ಕಯನು ಸಂಕಟಪಡುತ್ತಾ ಗುಹೆಯಲ್ಲಿ ಸ್ವಲ್ಪ ಹೊತ್ತು ಮಲಗಿದ್ದ, ಅಷ್ಟರಲ್ಲಿಯೇ ಭಯಂಕರವಾದ ಒಂದು ಶಬ್ದ ಕೇಳಿತು. ಆಗ ಕಯನು ಬೆಚ್ಚಿ ಬಿದ್ದು ಗಾಬರಿಯಿಂದ ಎದ್ದು ಯಾವುದೋ ಕಾಡುಮೃಗದ ಆರ್ಭಟವಿರಬಹುದೆಂದು ನಡುಗುತಾ, ಅಲ್ಲಿಂದ ಆಚೆಗೆ ಓಡಿ ಹೋಗಬೇಕೆಂದು ಯೋಚಿಸಿ ಗುಹೆಯ ಬಾಗಿ. ಲಿಗೆ ಹೋಗುವಷ್ಟರಲ್ಲಿಯೇ ಒಂದು ದೊಡ್ಡ ಸಿಂಹವು ಗುಡುಗುಡಾ ಯಿಸಿಕೊಂಡು ಬಂದು ಇವನನ್ನು ಆಚೆಗೆ ಬಿಡದೇ ಹೋಯಿತು, ಜೀತ ಗಾರನು ತನ್ನ ಹಣೇಬರಹ ಅಲ್ಲಿಗೆ ತೀರಿತೆಂದು ತಿಳಿದುಕೊಂಡು ಹಿಂದ ಹಿಂದಕ್ಕೆ ಹೋದನು. ಸಿಂಹವು ಸ್ವಲ್ಪವೂ ಆಗ್ರಹವಿಲ್ಲದೆ ಮೆಲ್ಲ ಮೆಲ್ಲಗೆ ಅವನ ಸಮಿಾಪಕ್ಕೆ ಬರುತಿತ್ತು. ಕಯನ ಮನಸ್ಸು ಸ್ವಭಾವವಾಗಿ ಸ್ವಲ್ಪ ಗಟ್ಟಿ ಮನಸ್ಸು; ಇದರಮೇಲೆ ಧೈರ್ಯವನ್ನು ತಂದುಕೊಂಡನು. ಸಿಂಹವು ಅವನ ಹತ್ತಿರಕ್ಕೆ ಮೆಲ್ಲಗೆ ಕುಂಟುತ್ತಾ ಬರುತಿತ್ತು, ಅದರ ಒಂದು ಕಾಲು ಬಹಳವಾಗಿ ಬಾತುಕೊಂಡಿತ್ತು. ಈ ಮೃಗರಾಜನ ಒಳ್ಳೇತನವನ್ನು ಕಂಡು ಕಯನಿಗೆ ಇನ್ನೂ ಧೈರ್ಯ ಹೆಚ್ಚಿತು. ಆಗ ಅದು ಹತ್ತಿರ ಬಂದು ನಿಂತು ಕುಂಟುಗಾಲನ್ನು ಮೇಲಕ್ಕೆ ಎತ್ತಿ ಯಾತ