ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೬೧ ಆದರೆ ನನ್ನ ಗೋಜಿಗೆ ನೀನು ಬಂದ ಕಾರಣ, ಆ ಬಡಜಂತುವಿನ ತಂಟೆಗೆ ಹೋಗುವುದಿಲ್ಲವೆಂದು ಮಾತುಕೊಡುವತನಕ ನಾನು ಬೇರೇ ನಿನ್ನ ನ್ನು ಬಿಡುವುದಿಲ್ಲ, ಎಂದೆ. ಆಗ ಕೂಡಲೆ ಅದರ ತಂಟೆಗೆ ತಾನು ಹೋಗುವು ದಿಲ್ಲವೆಂದು ಮಾತಕೊಟ್ಟ ; ನಾನು ಅವನನ್ನು ಬಿಟ್ಟು ಬಿಟ್ಟೆ. ಅವನು ಎದ್ದು ಹೊರಟುಹೋದ. ಜೋಯಿಸ-ನೀನು ಒಳ್ಳೆ ಕೆಲಸ ಮಾಡಿದೆ. ಮೊನ್ನೆ ಈ ಮದನ ಆ ಬಡಹುಡುಗನನ್ನು ಹೊಡೆಯುವುದಕ್ಕೆ ಹೋಗಿ ಹಳ್ಳಕ್ಕೆ ಉರುಟಿಕೊಂಡಾಗ, ಆ ಬಡಹುಡುಗ ಇವನನ್ನು ಎತ್ತಲು, ಮದನನಿಗೆ ಎಷ್ಟು ಹೀನಾಯವಾಗಿ ತೋರಿ ಅವಮಾನವಾಯಿತೊ, ಹಾಗೆಯೇ ಈ ಹುಡುಗನಿಗೂ ಅವಮಾನವಾಗಿರಬಹುದು. ಮದನ-ಜೋಯಿಸರೆ, ನಾನು ಬಡಹುಡುಗನನ್ನು ಹೊಡೆಯು ವುದಕ್ಕೆ ಹೋಗುತಿರಲಿಲ್ಲ ; ಅವ ನನ್ನ ಚಂಡನ್ನು ತಂದುಕೊಡಲಿಲ್ಲ, ಅದರಿಂದ ಅವನನ್ನು ನಾನು ಹೊಡೆಯಹೋದೆ. ಜೋಯಿಸ-ನಿನ್ನ ಚಂಡನ್ನು ಅವ ತಂದು ಕೊಡಬೇಕೆಂದು ಅವನಿಗೇನು ಅಗತ್ಯ? ಅದನ್ನು ತಂದು ಕೊಡೆಂದು ಅವನನ್ನು ಕೇಳು ವುದಕ್ಕೆ ನಿನಗೇನು ಅಧಿಕಾರ ? ಮದನ-ಯಾಕೆ ಎಂದರೆ, ಅವನು ಚಿಂದಿಹುಡುಗ, ನಾನು ದೊರೆಮಗ. ಜೋಯಿಸ- ಹಾಗಾದರೆ ಚಿಕ್ಕ ಹುಡುಗರು ಚಿಂದಿಯನ್ನು ಹಾಕಿ ಕೊಂಡು ಬಡವರಾಗಿದ್ದ ಮಾತ್ರಕ್ಕೆ, ಬೇಕಾದವರು ಅವರಿಗೆ ಚಾಕರಿ ಹೇಳ ಬಹುದೊ ? ಮದನ-ಹೇಳಬಹುದು, ಜೋಯಿಸ-ನಿನ್ನ ಬಟ್ಟೆ ಯೆಲ್ಲಾ ಹರಿದು ಹೋಗಿ ಆ ಚಿಂದಿ ಯನ್ನು ನೀನು ಹಾಕಿಕೊಂಡಿದ್ದರೆ, ಬೇಕಾದವರು ನಿನಗೆ ಕೆಲಸ ಮಾಡೆಂದು ಆಜ್ಞಾಪಿಸಬಹುದಷ್ಟೆ ? ಮದನನು ಪೆಚ್ಚು ಮುಖವನ್ನು ಹಾಕಿಕೊಂಡು-ಬೇಲಿಯ ಆಚೇ ಕಡೆ ಅವ ಇದ್ದದರಿಂದ, ಚೆಂಡನ್ನು ಈಚೇಕಡೆಗೆ ಹಾಕಬಹುದಾಗಿತ್ತು.