ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಜೋಯಿಸ-ವಿನಯವಾಗಿ ಅವನನ್ನು ನೀನು ಕೇಳಿಕೊಂಡಿ ದ್ದರೆ, ಚಂಡನ್ನ ವ ಈಚೆ ಕಡೆಗೆ ಎಸೆಯುತಿದ್ದರೂ ಎಸೆಯುತಿದ್ದ, ಅಹಂ ಕಾರದಿಂದ ಮಾತನಾಡತಕ್ಕವನಿಗೆ ಯಾರು ತಾನೆ ಉಪಕಾರ ಮಾಡು ತಾರೆ ? ಆ ಹುಡುಗ ಬಡವನಾಗಿ ಹರಕಲು ಬಟ್ಟೆಯನ್ನು ಹಾಕಿಕೊಂಡು ಇದ್ದ ಕಾರಣ, ನಿನ್ನ ಚಂಡನ್ನು ತಂದುಕೊಡುವುದಕ್ಕಾಗಿ ಅವನಿಗೆ ಏನಾದರೂ ದುಡ್ಡು ಕೊಟ್ಟೆ ಯ ? ಮದನ-ಇಲ್ಲ, ನಾನು ಅವನಿಗೆ ಕಾಸು ಕೊಡಲಿಲ್ಲ ಕೊಡುತೇ ನೆಂದು ಹೋಗಲೂ ಇಲ್ಲ. ಜೋಯಿಸ-ಹಾಗಾದರೆ ನಿನ್ನ ಹತ್ತಿರ ಕಾಸು ಏನೂ ಇರಲಿಲ್ಲ ವೇನೊ ! (ಕೆಲವು ಹಣಗಳನ್ನು ತೆಗೆದು ತೋರಿಸುತ್ತಾ). ಜೋಯಿಸ-ಹಾಗಾದರೆ ಆ ಹುಡುಗ ನಿನ್ನ ಹಾಗೆಯೇ ಹಣಗಾರ .ನಾಗಿದ್ದನೋ ಏನೋ ಮದನ-ಇಲ್ಲ ಉಪಾಧ್ಯಾಯರೆ, ಶುದ್ದವಾಗಿ ತಿರುಕೆಯವನಾ ಗಿದ್ದ, ಅವ ಕಟ್ಟಿ ಕೊಂಡಿದ್ದ ಕಚ್ಚೆಪಾವಡೆ ಸಹಿತ ಹರಿದು ಹೋಗಿತ್ತು. ಜೋಯಿಸ-ಓಹೋ ! ದೊಡ್ಡ ಮನುಷ್ಯರು, ದೊರೆ ಮಕ್ಕಳು, ಎಂದರೆ ಈಗ ನನಗೆ ಅರ್ಥವಾಯಿತು. ತಮಗೆ ಬೇಕಾದ ಐಶ್ವರ್ಯ ವಿದ್ದರೆ ಅದೆಲ್ಲವನ್ನೂ ತಾವೇ ಇರಿಸಿಕೊಂಡು ಅನುಭವಿಸಬಹುದು ; ಬಡವರು ತಮಗೆ ಬಿಟ್ಟ ಕೆಲಸವನ್ನು ಮಾಡಿಕೊಡದೇ ಇದ್ದರೆ ಅವ ರನ್ನು ಹಿಡಿದು ಹೊಡೆಯುವುದು ; ಈ ಬಡವರು ಹೆದರಿಕೊಂಡು ಮಾಡಿದರೂ, ಅವರಿಗೆ ಕೊಂಚವೂ ಪ್ರತ್ಯುಪಕಾರವನ್ನು ಮಾಡದೇ ಇರುವುದು ; ಇಂಥಾ ಕೆಲಸಗಳನ್ನು ಮಾಡತಕ್ಕವರೇ, “ ದೊರೆ ಮಕ್ಕಳು, ” “ ಜಹಗೀರದಾರರು, ” “ ದೊಡ್ಡ ಮನುಷ್ಯರು, ” “ ಐಶ್ವಠ್ಯವಂತರು, ” “ ಭಾಗ್ಯವಂತರು, ” ಎಂಬ ವಿಧ ವಿಧವಾದ ಹೆಸರುಗಳನ್ನು ಇವರು ! ಈಗ ತಿಳಿಯಿತು, ಹಾಗಾದರೆ, ಆ ಬಡ ಜೀತ ಗಾರನಿಗೆ ಉಪಕಾರ ಮಾಡಿದ ಸಿಂಹವೇನೋ ದೊಡ್ಡ ಮನುಷ್ಯನಲ್ಲ. ಈ ಪ್ರಕಾರ ಜೋಯಿಸನು ಮೂದಲಿಸಿ ಹಂಗಿಸುತಾ ಆಡಿದ ರಾತುಗಳನ್ನು ಕೇಳಿ ಮದನನ ಕಣ್ಣಿನಲ್ಲಿ ಗುಳಗುಳನೆ ನೀರು ಬಂತು.