ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ 54 ಇವನು ಸ್ವಭಾವವಾಗಿ ಒಳ್ಳೆಯವನಾದಕಾರಣ, ತಾನು ಆ ಬಡಹುಡುಗ ನನ್ನು ಎಲ್ಲಿಯಾದರೂ ಕಂಡರೆ, ಅವನಿಗೆ ಏನಾದರೂ ಕೊಡಬೇಕೆಂದು ಮನಸ್ಸಿನಲ್ಲಿ ಮಾಡಿಕೊಂಡನು. ಇದಕ್ಕೆ ಸಮಯವೂ ದೊರೆಯಿತು. ಆ ದಿನವೇ ಹೊತ್ತು ಮುಳುಗುವ ಸಮಯದಲ್ಲಿ ಮದನನು ಮನೆಯನ್ನು ಬಿಟ್ಟು ಒಂದು ಬೇಲೀ ಸವಿಾಪದಲ್ಲಿ ಹೋಗುತಿರುವಾಗ, ಆ ದಿನ ಸಿಕ್ಕಿದ್ದ ಬಡ ಹುಡುಗ ಬೇಲೀ ಹತ್ತಿರ ಕುಡುಗಲೇ ಹಣ್ಣನ್ನು ಆರಿಸಿ ಕೊಂಡು ತಿನ್ನು ತಿದ್ದನು, ಕೂಡಲೆ ಮದನನು ಅವನನ್ನು ಕುರಿತು ಎಲಪ್ಪ ಹುಡುಗ, ಯಾಕೆ ಇಂಥಾ ಚಿಂದಿಯನ್ನು ಹಾಕಿಕೊಂಡಿ ದೀಯೆ ? ಒಂದು ಕಾಸಿನ ಅಗಲ ಕೂಡ ಗಟ್ಟಿಯಾಗಿಲ್ಲವಲ್ಲ ! ನಿನಗೆ ಬೇರೇ ಬಟ್ಟೆಗೆ ಗತಿಯಿಲ್ಲವೆ ? ಎಂದನು. ಹುಡುಗ-ಇಲ್ಲ, ನನಗೆ ಎಲ್ಲಿಂದ ಬಂದೀತು ; ನನ್ನ ಒಡಹುಟ್ಟ ದವರು ೫ ಜನ ಅಕ್ಕ ತಂಗಿಯರು, ೬ ಜನ ಅಣ್ಣ ತಂಮಂದಿರು, ಅವರೆ ಲ್ಲರೂ ನನ್ನ ಹಾಗೆಯೇ ಒಂದು ಚೂರು ಬಟ್ಟೆಗೂ ಗತಿ ಇಲ್ಲದೇ ಇದಾರೆ. ಇದು ಹೋಗಲಿ, ಬಟ್ಟೆ ಇಲ್ಲದಿದ್ದರೆ ಬೇಡ ; ಒಬ್ಬೊತ್ತಾದರೂ ನಮಗೆ ಹೊಟ್ಟೆ ತುಂಬಾ ಹಿಟ್ಟು ಸಿಕ್ಕಿದರೆ ಸಾಕು ; ಅದಕ್ಕೂ ಗತಿ ಇಲ್ಲವಾಗಿದೆ. ಮದನ-ಯಾಕೆ ಒಬ್ಬೊತ್ತು ಕೂಡ ನಿಮಗೆ ಹಿಟ್ಟಿಗೆ ಗತಿ ಇಲ್ಲ ? ಹುಡುಗ-ಯಾಕೆಂದರೆ ನಮ್ಮಪ್ಪನಿಗೆ ಜ್ವರ ಬರುತಿದೆ. ತಲೇ ಎತ್ತದೆ ಮಲಗಿದಾನೆ, ಈಗ ಕಣಮನೇ ದಿನ ; ನಮ್ಮವ್ವ ಒಬ್ಬೊಂಟಿ ಗಳು, ಆರಂಬದ ಕೆಲಸವನ್ನು ಮಾಡುವರಿಲ್ಲದೆ ಪೈರೆಲ್ಲಾ ಹಾಳಾಯಿತು. ಅದರಿಂದ-ನೀವೆಲ್ಲಾ ಅನ್ನ ವಿಲ್ಲದೆ ಸಾಯುವ ಹೊತ್ತು ಬಂದಿತಲ್ಲಾ ? ನಿಮ್ಮನ್ನು ದೇವರೇ ರಕ್ಷಿಸಬೇಕು, ಎಂದು ನಮ್ಮವ್ವ ಹೇಳಿದಳು. ' ಈ ಮಾತನ್ನು ಕೇಳಿ ಮದನಕುಮಾರನು ಏನೂ ಹೇಳದೆ ಸುಮ್ಮನೆ ಜೋಯಿಸರ ಮನೆಗೆ ಜಾಗ್ರತೆಯಿಂದ ಓಡಿ ಹೋಗಿ, ಮಾಡಿದ್ದ ಅನ್ನ ವನ್ನೂ ಇತರ ತಿಂಡಿಗಳನ್ನೂ ಈಸುಕೊಂಡು, ತನ್ನ ಹಳೇ ಅಂಗಿ ಗಳೆರಡನ್ನೂ ಒಂದೆರಡು ಪಂಚೆಗಳನ್ನೂ ತೆಗೆದುಕೊಂಡು ಬಂದು, ಆ ಒಕ್ಕಲಿಗರ ಬಡಹುಡುಗನನ್ನು ನೋಡಿ-ಎಲ ಹುಡುಗ, ನೀನು ನನಗೆ ಉಪಕಾರಮಾಡಿದೆ ; ಅದರಿಂದ ಇದೆಲ್ಲವನ್ನೂ ನಿನಗೆ ಕೊಡುತೇನೆ,