ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಸುಮತಿ ಮದನಕುಮಾ [ಅಧ್ಯಾಯ ಹಿಡಿ, ನಾನು ದೊರೆನಗ, ನನಗೆ ಬೇಕಾದಷ್ಟಿದೆ ಎಂದು ಅದೆಲ್ಲ ವನ್ನೂ ಕೊಟ್ಟೆನು. ಆಗ ಆ ಬಡ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲದೇ ಹೋಯಿತು, ತಾನು ಉಪಕಾರವನ್ನು ಮಾಡಿ ಔದಾರ್ಯ ವನ್ನು ಮೊಟ್ಟ ಮೊದಲು ತೋರಿಸಿದೆನಲ್ಲಾ, ಎಂದು ಮದನನಿಗೆ ಉಂಟಾದ ಸಂತೋಷವು ಆ ಒಕ್ಕಲಿಗರ ಹುಡುಗನ ಸಂತೋಷಕ್ಕೆ ಸನ ವಾಗಿತ್ತು. ಮದನನಿಗೆ ಇದರಿಂದ ಸ್ವಲ್ಪ ಅಹಂಕಾರ ಉಂಟಾಯಿತು. ಇವ ಕೊಟ್ಟದ್ದನ್ನು ತೆಗೆದುಕೊಂಡ ಆ ಹುಡುಗ ಒಂದೆರಡು ಮಾತನಾಡಲು ಬಾಯಿ ಬಿಟ್ಟನೋ ಇಲ್ಲವೋ ಎನ್ನುವಷ್ಟರೊಳಗೆ, ಮದನನು ಬಹು ಅಟ್ಟಹಾಸದಿಂದ ಹೋಗಿ, ಮನೆಗೆ ಬರುತಿದ್ದ ಜೋಯಿಸನನ್ನು ಕಂಡು, ಹಿಗ್ತಾ ಡುತಾ ತಾನು ಮಾಡಿದ ಕೆಲಸವನ್ನು ಆತನ ಸಂಗಡ ಹೇಳಿದನು. ಜೋಯಿಸನು ಆತುರಪಡದೆ ನಿಧಾನವಾಗಿ ಬಟ್ಟೆ ಯನ್ನು ಆ ಹುಡುಗ ನಿಗೆ ನೀನು ಕೊಟ್ಟದ್ದು ಒಳ್ಳೆದಾಯಿತು, ಯಾಕೆಂದರೆ, ಅಂಗಿ ಪಂಚೆಗಳೇನೋ ನಿನ್ನ ದು. ಅದು ಹಾಗಿರಲಿ, ನನ್ನನ್ನು ಕೇಳದೆ ನನ್ನ ಮನೆಯಿಂದ ತಿ೦ಡೀ ಸಾಮಾನುಗಳನ್ನು ನೀನು ತಂದುಕೊಡುವುದಕ್ಕೆ ಕಾರಣವೇನು ? ಎಂದನು. ಮದನ- ಆ ಹುಡುಗ ತನಗೆ ಬಹು ಹಸಿವು ಆಗುತ್ತಿದೆ ; ತನಗೆ ಅಣ್ಣ ತಮ್ಮಂದಿರೂ ಅಕ್ಕ ತಂಗಿಯರೂ ಬಹುವಾಗಿದಾರೆ. ತನ್ನ ತಂದೇ ಮೈಗೆ ಸ್ವಷ್ಟವಿಲ್ಲ, ಬೆಳಸನ್ನು ರೂಢಿಸುವುದಕ್ಕೆ ಮತ್ತೆ ಯಾರೂ ಗತಿ ಇಲ್ಲ ಎಂದು ಹೇಳಿದ, ಅದಕ್ಕಾಗಿ ಅವನಿಗೆ ಕೊಟ್ಟೆ. ಜೋಯಿಸ-ನಿನ್ನ ಪದಾರ್ಥವನ್ನು ನೀನು ಕೊಟ್ಟು ಬಿಡುವುದಕ್ಕೆ ನೀನು ಹೇಳಿದ್ದೇನೋ ಸರಿಯಾದ ಕಾರಣವೇ ಹೊರತು, ಇತರರದನ್ನು ಕೊಟ್ಟು ಬಿಡುವುದಕ್ಕಲ್ಲ, ನಿನ್ನನ್ನು ಕೇಳದೆ ನಿನ್ನ ಬಟ್ಟೆ ಯನ್ನೆಲ್ಲಾ ತೆಗೆದು ಇನ್ನು ಯಾರಿಗಾದರೂ ಸಮತಿ ಕೊಟ್ಟು ಬಿಟ್ಟರೆ ನೀನು ಏನೆನ್ನು ತೀಯೆ ಮದನ-ಹಾಗೆ ಕೊಟ್ಟು ಬಿಟ್ಟರೆ ನಾನು ಸಹಿಸಲಾರೆ. ತಪ್ಪಾ ಯಿತು, ತಮ್ಮ ಅಪ್ಪಣೆ ಇಲ್ಲದೆ ತಮ್ಮ ಪದಾರ್ಥಗಳನ್ನು ಯಾರಿಗೂ ಇನ್ನು? ಮೇಲೆ ನಾನು ಕೊಡುವುದಿಲ್ಲ.