ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ 1೬ ಯೋಚಿಸಿಕೊಂಡು, ಅದೇನು ಸಂಗತಿ ? ಎಂದು ಕೇಳಿದನು. ಅದಕ್ಕೆ ಆ ಶೂದ್ರರ ಹುಡುಗನು--ಸ್ವಾಮಿ ನಾನು ಹೊಲದ ಇದ್ದೆ, ಈ ಬುದ್ದಿ ಯವರು ಚಂಡಾಡುತಾ ಬಂದರು, ಚಂಡು ಬೇಲಿ ಯೋಳಕ್ಕೆ ಬಿತ್ತು, ಅದನ್ನು ಈಚೆಗೆ ತೆಗೆದು ಎಸೆ ಎಂದು ನನಗೆ ಹೇಳಿ ದರು, ನಾನು ಎಸೆಯಲಿಲ್ಲ. ಅದಕ್ಕಾಗಿ ನನ್ನನ್ನು ಹೊಡೆಯುವುದಕ್ಕೆ ಬಂದರು, ನಾನೇನೂ ಇವರ ಚಾಕರನಲ್ಲ ; ಇವರ ಸಂಸ್ಥಾಪನಕ್ಕೆ ಸೇರಿದವನಲ್ಲ. ತಮ್ಮ ಹಳೇಪೈಕದವರನ್ನು ಕಂಡಹಾಗೆ ನನ್ನ ಮೇಲೆ ರೇಗಿಕೊಂಡು ಬಂದರು. ಓಡಿಬರುತಾ ದಾರಿಯಲ್ಲಿ ಬಿದ್ದರು, ನಾನು ಎತ್ತಿ ನಿಲ್ಲಿಸಿದೆ, ತರುವಾಯ ಅ೦ಗಿ ಪಂಚೆಗಳನ್ನು ತಂದು ಇನಾ ಮಾಗಿ ಕೊಟ್ಟರು, ಅಂಗಿಯು ದಿವ್ಯವಾದ್ದು, ವಲ್ಲಿ ಉತ್ತಮವಾದ್ದು, ಕಲಾಸತ್ತು ಬೂಟೆ ದಾರೀದು.* ಅಂಗಿಯನ್ನು ನಾನು ಕೂಡಲೆ ತೊಟ್ಟು ವಲ್ಲಿಯನ್ನು ಹೊದ್ದು ಆಚೆಗೆ ಹೊರಟೆ. ನನ್ನ ಜೊತೆಗಾರರಾದ ಹುಡುಗರೆಲ್ಲಾ ನನ್ನ ನ್ನು ನೋಡಿ ಆಶ್ಚರ್ಯ ಪಡುತಾ-ಎಲೆ ಹೈದಾ, ಎಲೋ ಮಲ್ಲಾ, ಏನೆಲೆ ಮದುವೆ ಗಂಡಿನಹಾಗೆ ಸಿಂಗರಿಸಿಕೊಂಡು ಹೊರಟೆ ? ಎಂದು ಹಾಸ್ಯ ಮಾಡುತ್ತಾ, “ ಎಲೆ ಮದುವೆಗಂಡು ” ಎಂದು ಒಬ್ಬ ಕೂಗುವುದು, “ ಎಲೋ ದೊರೆ ಮಗ ” ಎಂದು ಮತ್ತೊಬ್ಬ ಕೂಗುವುದು, ಉಳಿದವರು ನನ್ನ ಮೇಲೆ ಮಣ್ಣು ಎರೆಚುವುದು, ಸಗಣಿ ಯನ್ನು ಎಸೆಯುವುದು, ಕಲ್ಲಿನಿಂದ ಹೊಡೆಯುವುದು, ಚಪ್ಪಾಳೆ ಹಾಕಿ ಕೊಂಡು ನಗುತಾ ನನ್ನ ಮುಂದೆ ಬಂದು ಕುಣಿಯುವುದು, ಕೆಲವರು ನನ್ನ ಅಂಗಿಯನ್ನು ಎಳೆದು ಓಡಿ ಹೋವುದು, “ಎಲೆ ಆಟಗಾರರ ಹೈದಾ” ಎಂದು ಕೂಗುವುದು ಹೀಗೆಲ್ಲಾ ಲೇವಡಿ ಮಾಡಿದರು. ಅವರಲ್ಲಿ ಒಬ್ಬ ದೊಡ್ಡ ಹುಡುಗ ಬಂದು ನನ್ನನ್ನು ಕೆಳಕ್ಕೆ ನೂಕಿ ಬಿಟ್ಟು ಓಡಿ ಹೋ ದನು. ನಾನು ಜೋಕು ತಿಂದು ಮುಂದಕ್ಕೆ ಮುಗ್ಗರಿಸಿ ಬಿದ್ದೆ. ಮಂಡಿ ಮೊಳಕ್ಕೆ ಎಲ್ಲಾ ಕಿತ್ತು ಹೋಗಿ ರಕ್ತ ಬಂತು ; ಎದೆ ತರೆದು ಹೋಯಿತು. ರಕ್ತ ಬಂದದ್ದನ್ನು ಕಂಡು ಕೆಲವರು ಹೆದರಿಕೊಂಡು ಓಡಿದರು. ಈ ಹಾಳು

  • ಬುಟ್ಟ ದಾರದ್ದು,