ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ? ಸುಮತಿ ಮದನಕುಮಾರರ ಚರಿತ್ರೆ | [ಅಧ್ಯಾಯ ಬಟ್ಟೆ ಗಳಿಂದ ನನಗೆ ಇಂಥಾ ಗತಿ ಬಂತು, ನಾನು ಎಲ್ಲೆಲ್ಲಿ ಹೊಕ್ಕರೂ ಆ ಹುಡುಗರು ನನ್ನನ್ನು ಬಿಡದೆ ಲೇವಡಿಮಾಡುತಾ ಹುಯಿಲುಹಾಕುತಾ ಬಂದರು. ಆದ್ದರಿಂದ ಈ ಬುದ್ದಿ ಯವರ ಬಟ್ಟೆಗಳನ್ನು ಅವರಿಗೆ ಒಪ್ಪಿ ಸೋಣವೆಂದು ತಂದೆನು, ಹೀಗೆಂದು ಅವರಿಗೆ ಹೇಳಿದನು. - ಜೋಯಿಸ-ಅಯ್ಯೋ ಪಾಪ, ನಿಮ್ಮ ಮನೆ ಎಲ್ಲಿದೆ ? ಹುಡುಗ-ಸ್ವಾಮಿ, ನಮ್ಮ ಮನೆ ಈ ಕಾನಿನ ಆಚೆ ಒಂದು. ಕೊಂಬಿನ ಕೂಗು. ಜೋಯಿಸ-ಸುಮತಿ, ಅಡಿಗೆಯಾದ ಕೂಡಲೆ ಇವನ ತಂದೆಗೆ ಸ್ವಲ್ಪ ಅನ್ನವನ್ನು ತೆಗೆದುಕೊಂಡು ಹೋಗಿ ಕೊಟ್ಟು ಬರುತೀಯಾ ? ಸುಮತಿ-ಅವರ ಮನೆ ಒಂದಕ್ಕೆ ನಾಲ್ಕರಷ್ಟು ದೂರವಿದ್ದರೂ ಚಿಂತೆ ಇಲ್ಲ, ಅಗತ್ಯವಾಗಿ ಕೊಟ್ಟು ಬರುತೇನೆ. ಈ ಮಾತನ್ನು ಕೇಳಿ ಜೋಯಿಸನು ಮನೆಯೊಳಕ್ಕೆ ಹೋದನು. ೭ ನೆ ಅಧ್ಯಾಯ ಈ ಮಧ್ಯೆ ಮದನನು ಆ ಒಕ್ಕಲಿಗರ ಹುಡುಗನನ್ನು ಸುಮ್ಮನೆ ದುರುಗುಟ್ಟಿಕೊಂಡು ನೋಡುತ್ತಾ, ಆ ಹುಡುಗನನ್ನು ಕುರಿತು ಅಯ್ಯೋ ಹುಡುಗಾ, ನಾನು ಈ ಹಾಳುಬಟ್ಟೆಗಳನ್ನು ನಿನಗೆ ಕೊಟ್ಟಿದ್ದ ರಿಂದ ನಿನಗೆ ಇಂಥಾ ಪೆಟ್ಟಾಯಿತು. ಹುಡುಗ-ಬುದ್ದಿ, ತಾವೇನಮಾಡೀರಿ ? ನನಗೆ ಕೆಟ್ಟ ದನ್ನು ಮಾಡಬೇಕೆಂದು ತಾವು ಬಟ್ಟೆ ಯನ್ನು ಕೊಡಲಿಲ್ಲ. ಏನಮಾಡುವುದು ? ಯತ್ನ ವಿಲ್ಲ. ಈ ಪೆಟ್ಟನ್ನು ನಾನು ಲಕ್ಷ ಮಾಡುವುದಿಲ್ಲ. ಹೀಗೆಂದು ಹೇಳಿ ಹೊರಟುಹೋದನು. ತರುವಾಯ ಮದನನು-ಸುಮತಿ, ಆ ಹುಡುಗ ಒಳ್ಳೆಯವನಾಗಿ ಕಾಣುತಾನೆ ; ಅವ ಹಾಕಿಕೊಳ್ಳುವಂಥಾ. ಬಟ್ಟೆ ನನ್ನ ಹತ್ತಿರ ಇದ್ದರೆ ಕೊಡಬಹುದಾಗಿತ್ತು. ಸುಮತಿ -ಅ೦ಥಾ ಬಟ್ಟೆ ಸಿಕ್ಕುವುದೇನೂ ಕಷ್ಟವಲ್ಲ. ಅಗೋ