ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ { 4 ? ಆ ಗುಡಿ ಕಾಣುವ ಗ್ರಾಮದಲ್ಲಿ ಒಂದು ಜವಳಿ ಅಂಗಡಿ ಇದೆ. ಅಲ್ಲಿ ಬಡವರು ಹಾಕಿಕೊಳ್ಳುವಂಥಾ ಬಟ್ಟೆಗಳನ್ನು ಮಾರುತ್ತಾರೆ, ಬೇಕಾದರೆ ನೀನು ಕೊಂಡುಕೊಳ್ಳಬಹುದು. ಮಾರನೇ ದಿನ ಬೆಳಗ್ಗೆ ಸುಮತಿ ಮದನ ಇಬ್ಬರೂ ಹೊತ್ತಿಗೆ ಮುಂಚೆ ಎದ್ದು ಜವಳಿ ಅಂಗಡಿ ಇರುವ ಗ್ರಾಮಕ್ಕೆ ಹೊರಟರು. ಇವರು ಅರ್ಧದಾರಿಗೆ ಹೋದ ಕೂಡಲೆ ನಾಯಿ ಬೊಗಳುವ ಶಬ್ಬ ಕೇಳಿತು, ತರುವಾಯ ಕಾಲು ನಿಮಿಷಕ್ಕೆ ೮-೧೦ ಸೀಳುನಾಯಿಗಳು ಭರನೆ ಓಡಿಹೋದವು. ಇದನ್ನು ಕಂಡು ಮದನನು ಇದೇನೆಂದು ಸುಮತಿಯನ್ನು ಕೇಳಿದನು, ಸುಮತಿ-ಇದು ದೊಡ್ಡ ಮನೇ ಮ೦ಜೈ ಯ ಹೆಗ್ಗಡೆಯ ಹಾವು ೪. ಇವು ಅವನ ಬೇಟೇನಾಯಿಗಳು ; ಒಂದು ಮೊಲವನ್ನು ಹರಿಸಿಕೊಂಡು ಹೋಗುತಿವೆ, ಯಾಕೆ ಅಂಥಾ ನಿರಪರಾಧಿಯಾದ ಪ್ರಾಣಿಗಳನ್ನು ಕೊಲ್ಲುತಾರೆಯೋ ನಾನರಿಯೆ ! ಹಾಗೆ ಬೇಟೆಯಾಡಬೇಕೆಂಬ ಆಶ ಇದ್ದರೆ, ಹುಲಿ, ಕಿರುಬ, ಕಾಡಹಂದಿ ಮೊದಲಾದ ದುಷ್ಟ ಮೃಗಗಳಿಲ್ಲವೆ ? ಅವುಗಳನ್ನು ಯಾಕೆ ಹೊಡೆಯಬಾರದು ? ಮದನ-ಅಯ್ಯೋ ! ಅಂಥಾ ಮೃಗಗಳ ಗೋಜಿಗೆ ಹೋಗು ವುದು ಅಪಾಯಕರ. ಸುಮತಿ-ಅಪಾಯವೂ ಇಲ್ಲ, ಏನೂ ಇಲ್ಲ. ಹಳ್ಳಿಗಾಡುಗಳಲ್ಲಿ ಹುಲಿ, ಕಿರುಬ ಬಂದು ದನಗಳನ್ನೂ ಕುರಿಗಳನ್ನೂ ಕಚ್ಚಿಕೊಂಡು ಹೋಗುವವು. ಆದ್ದರಿಂದ ಇವುಗಳನ್ನು ಕೊಲ್ಲಬೇಕೆಂದು ಆರೇಳು ಜನ ದುಂಡಾಳುಗಳು ಈಟಗಳನೂ ಕರ್ಣಾಟಕ ಕೋವಿಗಳನ್ನೂ ತೆಗೆದು ಕೊಂಡು ಬೆಳಗಿನಜಾವದಲ್ಲಿ ಹೊರಡುತ್ತಾರೆ. ಇವರ ಮೈಮೇಲೆ ಬಟ್ಟೆ ವಿಶೇಷವಾಗಿ ಇರುವುದಿಲ್ಲ ; ದಟ್ಟಿ ಯನ್ನು ಮಾತ್ರ ಕಟ್ಟಿ ಕೊಂಡಿರು ತಾರೆ, ಒಬ್ಬೊಬ್ಬ ಒಂದೊಂದು ಈಟಿಯನ್ನು ಹಿಡಿದುಕೊಂಡು ಬೇಟೆ ಇರುವ ಹೊದರು, ಕೊರಕಲು, ಗುಹೆ ಇಲ್ಲೆ ಲ್ಲಾ ಹುಡುಕುತಾ ಗದ್ದಲ ಮಾಡುತಾರೆ, ಮೃಗವು ಇದನ್ನು ತಡೆಯಲಾರದೆ ಬಾಲವನ್ನು ಅಲ್ಲಾ ಡಿಸುತಾ ತಲೆಯನ್ನು ಕೊಡವಿಕೊಂಡು ನಿಂತು ಇವರನ್ನು ಕಂಡು ಗುರು