ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ | [ಅಧ್ಯಾಯ ಗುಟ್ಟುವುದು, ಆಗ ಒಬ್ಬ ಒಂದು ಈಟಿಯಿಂದ ಒಂದು ಪಕ್ಕೆಯನ್ನು ತಿವಿಯುವನು, ಆ ಕ್ಷಣದಲ್ಲಿಯೇ ಹುಲಿಯು ಗಟ್ಟಿಯಾಗಿ ಕೂಗುತಾ ಅವನ ಮೇಲೆ ಹಾರುವುದು. ಮದನ- ಹಾಗಾದರೆ ಅವನನ್ನು ಹಿಡಿದು ಕೊಂದುಬಿಡುವೆನು. ಸುಮತಿ ಇಲ್ಲ, ತಾಳು. ಅದು ಹಾರಿದ ಕೂಡಲೆ ಅವ ತಪ್ಪಿಸಿ ಕೊಂಡು ಅದರ ಕೈಗೆ ಸಿಕ್ಕದೆ ಪಕ್ಕಕ್ಕೆ ಹಾರುವನು. ಒಡನೆಯೇ ಇನ್ನೊಬ್ಬ ಬೇಟೆಗಾರನು ಅದರ ಇನ್ನೊಂದು ಪಕ್ಕೆ ಮೇಲೆ ಈಟಿಯಿಂದ ತಿವಿಯುವನು. ಅವನ ಮೇಲೆಯೂ ಹೀಗೆಯೇ ಮೃಗ ಹಾರುವುದು. ಅವನೂ ತಪ್ಪಿಸಿಕೊಳ್ಳುವನು. ಆಗ ಇನ್ನೊ ಬ್ಬ ತಿವಿಯುವನು. ಹೀಗೆ ಒಬ್ಬೊಬ್ಬರಾಗಿ ೮-೧೦ ಕಡೆ ತಿವಿಯಲು ಕೊನೆಗೆ ಮೃಗವು ಅರಚಿ ಕೊಂಡು ಕೆಳಕ್ಕೆ ಬಿದ್ದು ಗಾಯದಿಂದ ಪ್ರಾಣಬಿಡುವುದು. ಮದನ-ಈ ನೋಟಾ ನೋಡುವುದಕ್ಕೆ ಬಹು ಚೆನ್ನಾಗಿರ ಬಹುದು, ಮನೆಯಲ್ಲಿ ಕೂತು ಬಾಗಿಲ ಹಾಕಿಕೊಂಡು, ನಮಗೆ ಅದರ ತೊಂದರೆ ಇಲ್ಲದಹಾಗೆ ಕಿಟಕಿಯಿಂದ ಈ ನೋಟವನ್ನು ನೋಡ ಬೇಕೆಂದು ನನಗೆ ಆಶೆ ಇದೆ. ಸುಮತಿ-ನನಗೆ ಅಂಥಾ ಆಶೆ ಇಲ್ಲ. ಹುಲಿ ನೋಡುವುದಕ್ಕೆ ಎಂಥಾ ಸುಂದರವಾದ ಮೃಗ, ಅದು ಮರಣ ಸಂಕಟಪಡುವುದನ್ನು ನಾವು ಯಾಕೆ ನೋಡಬೇಕು ? ಇದು ಹಾಗಿರಲಿ, ಹುಲಿಯಂತೂ ದುಷ್ಟ ಮೃಗ, ಅದನ್ನು ಕೊಲ್ಲುವರು ; ಮೊಲ ಯಾರ ತಂಟೆಗೂ ಬರದ ಬಡ ಜಂತುವಷ್ಟೆ, ಅದನ್ನು ಯಾಕೆ ಕೊಲ್ಲಬೇಕು ? ಹೊಲಗಳಲ್ಲಿ ಸ್ವಲ್ಪ ಕಾಳುಕಡ್ಡಿ ಯನ್ನು ತಿಂದುಕೊಂಡು ಹೋಗಬಹುದು, ಅಷ್ಟು ಮಾತ್ರಕ್ಕೇ ಅದರ ಪ್ರಾಣವನ್ನು ಯಾಕೆ ತೆಗೆಯಬೇಕು ? ಅಗೋ ನೋಡು ಮೊಲ ಈ ಕಡೆಗೆ ಓಡಿಹೋಯಿತು. ಅವರ ಕೈಗೆ ಸಿಕ್ಕದೇ ಇದ್ದರೆ ಆದೀತು. ಅದು ಎತ್ತಲಾಗಿ ಹೋಯಿತೆಂದು ನನ್ನನ್ನು ಯಾರಾದರೂ ಕೇಳಿದರೆ ನಾನು ಬೇರೆ ಹೇಳುವುದಿಲ್ಲ. - ಇವರಿಬ್ಬರೂ ಹೀಗೆ ಮಾತನಾಡುತಿರುವಾಗ ನಾಯಿಗಳು ಮೊಲ ಹೋದ ಕಡೆಯನ್ನು ಕಾಣದೆ ದಿಕ್ಕು ತೋಚದೆ ಬಾಯಿಬಿಟ್ಟು ಕೊಂಡು