ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೬೧ ನಾಲಗೆಯನ್ನು ಅಲ್ಲಾಡಿಸುತಾ ಏದುತಾ ನಿಂತುಕೊಂಡುವು. ಅವುಗಳ ಹಿಂದೆ ಕುದುರೆಯನ್ನು ಹತ್ತಿಕೊಂಡು ಒಬ್ಬ ಮನುಷ್ಯ ಬಂದು, ಸುಮತಿ ಯನ್ನು ನೋಡಿ-ಮೊಲ ಎಲ್ಲಿ ಹೋಯಿತೆಲಾ ? ಎಂದು ಕೇಳಿದನು. ಸುಮತಿ ಮಾತನಾಡದಿರಲು-ಮೊಲ ಎಲ್ಲಿ, ಜಾಗ್ರತೆಯಾಗಿ ಹೇಳು, ಎಂದು ಗದರಿಸಿದನು, ಸುಮತಿಯು ಅದು ಇ೦ಥಾಕಡೆಗೆ ಹೋಯಿ ತಂದು ನಾನು ಹೇಳುವುದಿಲ್ಲ, ಎಂದು ನಿಧಾನವಾಗಿ ಹೇಳಿದನು. ಆಗ ಆ ಕುದುರೆ ಸವಾರನು-ನೀನು ಹೇಳದಿದ್ದರೆ ನಾನು ಬಿಟ್ಟೇನೆ ? ಎಂದು ಕುದುರೆಯನ್ನು ಇಳಿದು, ಕೈಲಿದ್ದ ಚಾವಟಿಯಿಂದ ಸುಮತಿ ಯನ್ನು ಹೊಡೆಯಲು ಮೊದಲುಮಾಡಿದನು. ತರುವಾಯ ಈಗ ಲಾದರೂ ಹೇಳೀಯ ? ಎಂದು ಅವ ಕೇಳಲು, ಸುಮತಿ ಯು-ಇಷ್ಟಾ ದರೂ ನಾನು ಹೇಳಲಿಲ್ಲವಂತೆ ; ಇನ್ನು ಯಾಕೆ ಹೇಳಿಯೇನು ? ನೀನು ನನ್ನ ಪ್ರಾಣತೆಗೆದರೂ ಹೇಳುವುದಿಲ್ಲ ಎಂದನು. ಇದೆಲ್ಲವನ್ನೂ ಕಂಡು ಮದನನು ದೊಡ್ಡ ದಾಗಿ ಅಳುವುದಕ್ಕೆ ಆರಂಭಿಸಿದನು, ಈ ಹುಡುಗನ ಗೋಳಾಗಲಿ ಆ ಹುಡುಗನ ಧೈರ್ಯವಾಗಲಿ ಆ ನೀಚನ ಕಲ್ಲು ಮನ ಸ್ಸನ್ನು ಬೇರೆ ಕರಗಿಸಲಿಲ್ಲ, ಇಷ್ಟರೊಳಗೆ ಅದೇ ದಾರಿಯಲ್ಲಿ ಮತ್ತೊ ಬ್ರನು ಕುದುರೇಮೇಲೆ ಏರಿಕೊಂಡು ಬಂದು ಅಲ್ಲಿ ನಿಂತು, ಆ ನೀಚ ನನ್ನು ಕುರಿತು ಯಾಕೆ ಹೆಗ್ಗಡೆಗಳೆ, ಆ ಹುಡುಗನನ್ನು ಹಾಗೆ ಹೊಡೆಯುತೀರಿ ? ಎಂದನು. ಆ ಮಾತಿಗೆ ಮಂಜೈ ಯಹೆಗ್ಗ ಡೆಯುಅವನನ್ನು ಸೀಳಿ ತೋರಣಾ ಕಟ್ಟು ತೇನೆ ; ನನ್ನ ಮೊಲ ಹೋದ್ದನ್ನು ಕಂಡಿದಾನೆ, ಎತ್ತಲಾಗಿ ಹೋಯಿತೆಂದರೆ ಹೇಳುವುದಿಲ್ಲವಲ್ಲ ! ಎಂದು ಗರ್ಜಿಸಿದನು. ಆಗ ದಾರಿಮನುಷ್ಯ-ನೋಡಿಕೊಳ್ಳಿ ಹೆಗ್ಗಡೆಗಳೆ, ತಾವು ಮಾಡುವ ಕೆಲಸವನ್ನು ಯೋಚಿಸಿಕೊಂಡು ಮಾಡಿ ; ಇಗೋ ನೋಡಿ ಹತ್ತಿರ ನಿಂತಿರುವ ಬಾಲಕ ದೊರೆನಗ ; ಅನಂಗರಾಜರ ಕುಮಾರ ; ಆತನ ಗೋಜಿಗೆ ಎಲ್ಲಿಯಾದರೂ ಹೋಗಿ ಇಲ್ಲದ ಆ ಪತ್ತನ್ನು ತಂದು ಕೊಂಡೀರಿ, (ಸುಮತಿಯನ್ನು ನೋಡಿ) ಎಲೋ ಮಗು, ಆ ಮೊಲ ಯಾವ ದಿಕ್ಕಿಗೆ ಹೋಯಿತು ? ನೀನು ಅದನ್ನು ಯಾಕೆ ಹೇಳಬಾರದು ? ಯಾಕೆ ಏಟತಿನ್ನು ತೀಯೆ, ಪ್ರಾಣಿ !