ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಸುಮತಿ ಸ್ವಲ್ಪ ಚೇತರಿಸಿಕೊಂಡು-ಆ ಬಡಜಂತುವನ್ನು ಇವರಿಗೆ ಒಪ್ಪಿಸಿ ಕೊಲ್ಲಿಸುವುದಕ್ಕೆ ನನಗೆ ಇಷ್ಟವಿಲ್ಲ. ದಾರಿಯವನು-ಈ ಹುಡುಗನ ಬುದ್ದಿ ಏನು ಅದ್ಭುತವಾಗಿದೆ ? ಹೆಗ್ಗಡೆಗಳೆ, ಈ ಬಾಲಕನ ಬುದ್ದಿಗೆ ಸಮವಾಗಿ ಅವನ ವಯಸ್ಕೂ ದೇಹಶಕ್ತಿಯೂ ಇಲ್ಲದೆ ಇರುವುದು ನಿಮ್ಮ ಪುಣ್ಯವೆಂದು ತಿಳಿಯಿರಿ. ನೀವು ಯಾವಾಗಲೂ ಅತಿ ಕೋಪಿಷ್ಠರು. ಹೀಗೆ ಮಾತನಾಡುತಿರುವಾಗ ಮೊಲ ಹೋದ ದಾರಿಯ ವಾಸನೆ ಯನ್ನು ತಿಳಿದು ನಾಯಿಗಳು ಆ ಕಡೆಗೆ ಓಡಲು ಮೊದಲುಮಾಡಿದುವು. ಅದನ್ನು ಕಂಡು ಹೆಗ್ಗಡೆಯು ಕುದುರೆಯನ್ನು ಏರಿ, ತನ್ನ ಜೊತೆಯಲ್ಲಿದ್ದ ಬೇಟೆಗಾರರನ್ನು ಕರೆದುಕೊಂಡು ಹೊರಟುಹೋದನು. ದೂರದಲ್ಲಿ ನಿಂತು ಇವೆಲ್ಲವನ್ನೂ ನೋಡಿ ಅಳುತಿದ್ದ ಮದನನು ಸುಮತಿಯ ಹತ್ತಿರಕ್ಕೆ ಬಂದು, ಹೇಗೆ ಇದ್ದೀಯೇ ? ಎಂದು ಕೇಳಲಾಗಿ ಸುಮತಿ ಯು-ಮೈಯೆಲ್ಲಾ ಬಾಸುಂಡೆಯಾಯಿತು. ಒಂದೆರಡು ಕಡೆ ರಕ್ತವೂ ಬಂತು, ಏನಮಾಡುವುದು ? ಅನುಭವಿಸಬೇಕು. ಮದನ-ನನ್ನ ಕೈಲಿ ಒಂದು ಕೋವಿ ಇರಬೇಕಾಗಿತ್ತು ; ತಿಳಿಯುತಿತ್ತು. ಸುಮತಿ- ಏನಮಾಡುತಿದ್ದೆ ? ಮದನ-ನಿನ್ನ ನ್ನು ಅನ್ಯಾಯವಾಗಿ ಹೊಡೆದ ಆ ನೀಚನನ್ನು ಕೊಂದು ಹಾಕುತಿದ್ದೆ. ಸುಮತಿ-ಹಾಗೆ ನೀನು ಮಾಡಿದ್ದರೆ, ಅದು ದೊಡ್ಡ ಅಪರಾಧ ವಾಗುತಿತ್ತು, ಯಾಕೆಂದರೆ ಅವನು ನನ್ನ ನ್ನು ಕೊಲ್ಲಬೇಕೆಂದು ಬರಲಿಲ್ಲ. ನಾನು ದೊಡ್ಡವನಾಗಿದ್ದರೆ ಅವನು ನನ್ನ ತಂಟೆಗೆ ಬರುತಿರ ಲಿಲ್ಲ. ಇನ್ನೆನು ? ಅದೆಲ್ಲಾ ಮುಗಿದು ಹೋಯಿತಲ್ಲ, ಹೋಗಲಿ. ನಮ್ಮ ಶತ್ರುಗಳ ಅಪರಾಧವನ್ನು ಕ್ಷಮಿಸಿಬಿಡೋಣ. ಹಾಗೆ ನಾವು ಕ್ಷಮಿಸಿದರೆ, ಅವರೆಲ್ಲಾ ನಮಗೆ ಮಿತ್ರರಾಗುತ್ತಾರೆ. ಈ ಮಾತನ್ನು ನಮ್ಮ ಜೋಯಿಸರು ಹೇಳಿದಾರೆ. ಮದನ-ಅವ ಅಷ್ಟು ಹೊಡೆದರೂ ನೀನು ಅಳಲಿಲ್ಲವಲ್ಲ. ನನಗೆ ಹೆಚ್ಚಾಗಿ ಅಳು ಬಂತು.