ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ಸುಮತಿ ಮದನಕುಮಾರರ ಚರಿತ್ರೆ ೭೩ ಸುಮತಿ-ಅತ್ತುದರಿಂದ ಪ್ರಯೋಜನವೇನು ? ಬಂದ ಕಷ್ಟ ವನ್ನು ಅನುಭವಿಸಿಯೇ ತೀರಬೇಕು. - ಈ ಹುಡುಗರು ಇಬ್ಬರೂ ಈ ರೀತಿಯಲ್ಲಿ ಮಾತನಾಡಿಕೊಳ್ಳುತಾ ಜವಳೀ ಅಂಗಡಿ ಇರುವ ಗ್ರಾಮಕ್ಕೆ ಹೋಗಿ ಅಂಗಡಿಯ ಮುಂದೆ ನಿಂತು, ಬಡ ಜನರು ಹೊದ್ದು ಕೊಳ್ಳುವಂಥಾ ಬಟ್ಟೆ ಗಳನ್ನು ತೆಗಿ ದಾರಣೇಮಾಡಿ, ಆ ಬಡ ಒಕ್ಕಲಿಗರ ಹುಡುಗನಿಗೂ ಅವನ ಸಹೋದರ ಸಹೋದರಿಯರಿಗೂ ಆಗುವಂತೆ ಬಟ್ಟೆ ಗಳನ್ನು ಕೊಂಡುಕೊಂಡರು. ಮದನನು ತನ್ನ ಅಂಗಿ ಜೇಬಿನಲ್ಲಿದ್ದ ಹಣವನ್ನು ತೆಗೆದು ಅಂಗಡಿ ಯವನಿಗೆ ಬಟ್ಟೆ ಕ್ರಯಕ್ಕಾಗಿ ಕೊಟ್ಟನು. ಆ ಜವಳಿಯನ್ನು ಗಂಟು ಕಟ್ಟಿಸಿ ಸುಮತಿಯನ್ನು ಕುರಿತು-ಸುಮತಿ ಈ ಗಂಟನ್ನು ಹೊತ್ತು ಕೋಳ್ಳು ತೀಯ ? ಎಂದನು. ಸುಮತಿ-ಮದನ, ಇದನ್ನು ನಾನೇನೋ ಅಗತ್ಯವಾಗಿ ಹೊತ್ತು ಕೊಳ್ಳು ತೇನೆ, ಆದರೆ ನೀನೇ ಯಾಕೆ ಹೊತ್ತು ಕೊಳ್ಳಕೂಡದು ? ಹೇಳು. ಮದನ-ನಾವು ದೊಡ್ಡವರ ಮಕ್ಕಳಾಗಿ ಮೂಟೇ 'ಹೊತ್ತು ಕೊಳ್ಳು ವುದು ಸಮನಲ್ಲ. ಸುಮತಿ - ಯಾಕೆ ಹೊತ್ತು ಕೊಳ್ಳ ಕೂಡದು ? ಅದರಿಂದ ದೊಡ್ಡ ವರ ಮಕ್ಕಳಿಗೆ ಯಾವ ತೊಂದರೆತಾನೆ ಉಂಟಾಗುವುದು ? ದೇಹ ದಾರ್ಥ್ಯವೇನೋ ಇರಬೇಕು. ಮದನ-ಮೂಟೇ ಹೊತ್ತುಕೊಂಡರೆ ಸಾಧಾರಣ ಬಡಜನರ ಹಾಗೆ ಕಾಣಿಸುತೇವೆ. ಸುಮತಿ-ಹಾಗಾದರೆ ದೊಡ್ಡವರ ಮಕ್ಕಳಿಗೆ ಕೈಕಾಲು, ಕಣ್ಣು ಮೂಗು, ಕಿವಿ, ಬಾಯಿ ಯಾವುದೂ ಇರಕೂಡದು ; ಯಾಕೆಂದರೆ ಬಡ ವರಿಗೆ ಈ ಅಂಗಗಳೆಲ್ಲಾ ಇವೆಯಷ್ಟೆ. ಮದನ-ಓ, ಈ ಅಂಗಗಳೆಲ್ಲಾ ಇದ್ದೇ ತೀರಬೇಕು, ಅವು €ಗಳೆಲ್ಲಾ ಉಪಯೋಗವಾಗಿವೆ. ಸುಮತಿ-ನಂನಮ್ಮ ಕೆಲಸವನ್ನು ನಾವು ನಾವೇ ಮಾಡಿಕೊಳ್ಳು ವುದು ಉಪಯೋಗವಲ್ಲವೊ ?