ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ – ಹವುದು, ಆದರೆ ಭಾಗ್ಯವಂತರ ಮನೆಯಲ್ಲಿ ಇಂಥಾ। ಕೆಲಸವನ್ನು ಮಾಡುವುದಕ್ಕೆ ಆಳುಗಳು ಇರುತ್ತಾರೆ, ಅವರು ಅದನ್ನು ಮಾಡುತಾರೆ. ಸುಮತಿ-ಹಾಗಾದರೆ ಭಾಗ್ಯವಂತರಾಗಿರುವುದು ಒಳ್ಳೆಯದಲ್ಲ ; ಯಾಕೆಂದರೆ, ಎಲ್ಲರೂ ಭಾಗ್ಯವಂತರಾಗಿದ್ದಲ್ಲಿ ಚಾಕರಿ ಮಾಡುವುದಕ್ಕೆ ಯಾರೂ ಇಲ್ಲದೇ ಹೋಗುವರು. ಆಗ ನಾವೆಲ್ಲಾ ಉಪವಾಸ ಸಾಯ ಬೇಕಾಗುವುದು. ಮದನ- ಉಪವಾಸ ಸಾಯಬೇಕೆ ? ಸುಮತಿ-ಹವುದು ಅನ್ನವನ್ನು ತಿನ್ನದಿದ್ದರೆ ನೀನು ಜೀವಿಸಿ. ಕೊಂಡಿರುವುದಕ್ಕಾದೀತೆ ? ಮದನ-ಆಗುವುದಿಲ್ಲ ; ಅಷ್ಟು ಬಲ್ಲೆ. ಸುಮತಿ-ಅ೦ಥಾ ಅನ್ನ ವು ಅಕ್ಕಿಯಿಂದಾಗುವುದು, ಅಕ್ಕಿ ಬತ್ತ ದಿಂದ ಸಿಕ್ಕುವುದು. ಬತ್ತ ಗದ್ದೆಯಲ್ಲಿ ಬೆಳೆಯುವುದು. ಮದನ-ಗದ್ದೆಯಲ್ಲಿ ಬತ್ತದ ಕಾಳುಗಳನ್ನು ಆರಿಸಿ ತಿನ್ನು ತೇನೆ. ಸುಮತಿ-ಆಗಲೂ ನೀನು ಕೆಲಸವನ್ನು ಮಾಡಿದಹಾಗಾಯಿತು. ಬತ್ತವನ್ನು ಕುಟ್ಟಿ ಅಕ್ಕಿಯನ್ನು ತೆಗೆಯಬೇಕು, ಅದರಲ್ಲಿ ಅನ್ನ ವನ್ನು ಮಾಡಿ ತಿನ್ನ ಬೇಕು. - ಇವರಿಬ್ಬರೂ ಹೀಗೆ ಮಾತನಾಡಿಕೊಳ್ಳುತ್ತಾ ಹೋಗುತಿರುವಾಗ ಸಮಿಾಪದಲ್ಲಿ ಬಹಳ ಶಬ್ದವಾಯಿತು. ಅದೇನೆಂದು ಹಿಂತಿರುಗಿ ನೋಡಲು ಒಂದು ಕುದುರೆ ಓಡಿಹೋಗುತಿತ್ತು. ಅದರ ಸವಾರನು ಕೆಳಗೆ ಬಿದ್ದು ಅವನ ಕಾಲು ರಿಕಾಸಿಗೆ ಸಿಕ್ಕಿಕೊಂಡಿತ್ತು, ಆ ಕುದುರೆ ಅವನನ್ನು ಎಳೆದುಕೊಂಡು ಹೋಗುತಿತ್ತು. ದೈವಾಧೀನದಿಂದ ಕೆಳ ಗೆಲ್ಲಾ ಒತ್ತಾಗಿ ಹುಲ್ಲು ಬೆಳೆದಿದ್ದ ಕಾರಣ, ಈ ಸವಾರನಿಗೆ ವಿಶೇಷವಾಗಿ ಪೆಟ್ಟಾಗಲಿಲ್ಲ. ಸುಮತಿಯು ತನಗೆ ಅಪಾಯವಾದೀತೆಂದು ಭಯ ಪಡದೆ ಇತರರಿಗೆ ಉಪಕಾರಮಾಡುವುದರಲ್ಲಿ ಯಾವಾಗ್ಯೂ ಮನಸ್ಸುಳ್ಳ ವನಾಗಿದ್ದನು. ಆದಕಾರಣ ಕುದುರೆಯು ಇಕ್ಕಟ್ಟಾದ ಒಂದು ಸಂದಿ. ನಲ್ಲಿ ನುಗ್ಗಿದ್ದನ್ನು ಕಂಡು, ಸುಮತಿಯು ತನ್ನ ಕೈಯಲಿದ್ದ ಗಂಟನ್ನು.