ಪುಟ:ಸಮತಿ ಮದನಕುಮಾರರ ಚರಿತ್ರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೭ಜ. ಕೆಳಕ್ಕೆ ಎಸೆದು, ಕುದುರೇ ಎದುರಿಗೆ ತಾನು ಹೋಗಿ ನಿಂತು ಅಡ್ಡ ಹಾಕಿ ದನು ; ಅದು ನಿಂತುಕೊಂಡಿತು, ಕೂಡಲೇ ಈ ಹುಡುಗನು ಅದರ ಲಗಾಮನ್ನು ಹಿಡಿದುಕೊಂಡನು. ಸ್ವಲ್ಪ ಹೊತ್ತಿಗೆ ಇಬ್ಬರು ಮೂರು. ಜನ ಆಳುಗಳೂ ಮತ್ತೊಬ್ಬ ಸವಾರನೂ ಅಲ್ಲಿಗೆ ಬಂದರು ; ಕೂಡಲೆ ಕುದುರೇ ಮೇಲಿನಿಂದ ಬಿದ್ದು ರಿಕಾಸಿಗೆ ಕಾಲು ಸಿಕ್ಕಿಕೊಂಡು ಎಳಿಸಿ. ಕೊಂಡು ಹೋಗುತ್ತಿದ್ದ ಮನುಷ್ಯನ ಕಾಲ ತೊಡಕನ್ನು ಬಿಡಿಸಿ, ಮೆಲ್ಲಗೆ. ಎತ್ತಿ ಕೂರಿಸಿ, ಉಪಚಾರಮಾಡಿದರು. ಅವನೇ ಮಂಜ್ಜೆ ಯ ಹೆಗ್ಗಡೆ. ಚೆನ್ನಾಗಿ ಪ್ರಜ್ಞೆ ಬರಲು, ಸುತ್ತಲೂ ತಿರುಗಿ ನೋಡಿ ಹೆಗ್ಗಡೆಯುಈ ಹಾಳಕುದುರೆಯನ್ನು ನಿಲ್ಲಿಸಿದವರು ಯಾರು ? ಎಂದು ಕೇಳಿದನು. ಸಮಿಾಪದಲ್ಲಿದ್ದ ಅವನ ಸ್ನೇಹಿತನು-ಹೆಗ್ಗಡೆಗಳೆ, ಈ ದಿನ ಬೆಳಗ್ಗೆ ನೀವು ಯಾರನ್ನು ಚಾವಟಿಯಿಂದ ಬಾಯಿಗೆ ನೀರಕೇಳುವ ಮಟ್ಟಿಗೆ ಹೊಡೆದರೋ ಅದೇ ಹುಡುಗನೇ ಕುದುರೆಯನ್ನು ನಿಲ್ಲಿಸಿದವನು ; ಇಗೋ ಈ ಸುಮತಿ. ಅವನ ಧೈರ್ಯವೂ ಚಮತ್ಕಾರವೂ ನಿಮ್ಮ ಪುಣ್ಯಕ್ಕೆ ಒದಗಿ ಬರದಿದ್ದರೆ, ನಿಮ್ಮ ಆಶೆ ಇಲ್ಲಿಗೆ ತೀರುತಿತ್ತು, ಎಂದನು. ಆಗ ಖಳನಾದ ಆ ಹೆಗ್ಗಡೆಯ ಮುಖದಲ್ಲಿ ದುಷ್ಟತನದ ಕೌರವೂ, ಅಹಂಕಾರವೂ, ಹೀನಾಯದಿಂದ ಉಂಟಾದ ನಾಚಿಕೆಯೂ, ಕಾಣಿಸುತಿದ್ದವು. ತರುವಾಯ ಹೆಗ್ಗಡೆಯು ತನ್ನ ಉಡಿದಾರದ ತಾಯ. ತಿಯ ತಿರುಪನ್ನು ತಿರುಗಿಸಿ ಎರಡು ಚಿನ್ನದ ಹಣವನ್ನು ತೆಗೆದು ಸುಮತಿ ಯನ್ನು ನೋಡಿ-ಎಲೋ ಹುಡುಗ, ಹಿಂದೆ ನಡೆದದ್ದು ಹೋಗಲಿ, ನೀನು ಕುದುರೇ ನಿಲ್ಲಿಸಿದ್ದಕ್ಕಾಗಿ ಈ ಇನಾಮನ್ನು ಹಿಡಿ, ಎಂದು ಅದನ್ನು ಅವ. ನಿಗೆ ಕೊಡುವುದಕ್ಕೆ ಹೋದನು. ಸುಮತಿಯು ಇದನ್ನು ನೋಡಿ ಅತ್ಯಂತ ತಿರಸ್ಕಾರಭಾವದಿಂದ ಆ ಕಡೆಗೆ ತಿರುಗಿಕೊಂಡು ಯಾವ ಮಾತನ್ನೂ ಆಡದೆ, ಕೆಳಗೆ ಬಿದ್ದಿದ್ದ ಬಟ್ಟೆಗಂಟನ್ನು ಹೊತ್ತು ಕೊಂಡು ಮದನನನ್ನೂ ಒಡಗೂಡಿ ಹೊರಟು ಹೋದನು. ಈ ಇಬ್ಬರು ಹುಡುಗರೂ ಮೊದಲು ಚಿಂದೀ ಹಾಕಿಕೊಂಡು ಬಂದಿದ್ದ ಆ ಬಡ ಹುಡುಗನ ಮೊಟ್ಟೇಮನೆಗೆ ಹೋದರು. ಆ ಹುಡು ಗನ ತಂದೆಗೆ ಜ್ವರ ಸ್ವಲ್ಪ ಕಡಮೆಯಾಗಿತ್ತು, ಇವರಿಬ್ಬರೂ ಬರುವುದಕ್ಕೆ A. ?