ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೭೭ ಮದನ-ಹವುದು, ನೋಡಿದೇನೆ, ಅದೆಯೋ ಉಳುವುದು ? - ಸುಮತಿ-ಹಾಗೆ ಉದ್ದವಾದ ಮರದ ತುಂಡಿಗೆ ನೇಗಿಲೆಂದು ಹೆಸರು, ನೇಗಿಲಿನ ಹಿಂಭಾಗದಲ್ಲಿ ಕೆಳಗಡೆ ಮೊನೆಯಾಗಿರುವ ಕಬ್ಬಿ ಣದ ಗುಳ ಪೆಟ್ಟಿರುವುದು, ಅದಕ್ಕೆ ಮೇಲುಭಾಗದಲ್ಲಿ ಉದ್ದ ವಾದ ಒಂದು ಗೂಟವಿರುವುದು, ಮನುಷ್ಯನು ಆ ಗೂಟವನ್ನು ಬಲವಾಗಿ ಒತ್ತಿ ಹಿಡಿದುಕೊಂಡು ಎತ್ತುಗಳನ್ನು ಮುಂದಕ್ಕೆ ಹೊಡೆದರೆ, ನೆಲವು ಉದ್ದಕ್ಕೂ ಅಗೆದಹಾಗೆ ಆಗುವುದು, ಅದೇ ಉಳುವುದು, ಮೊದಲು. ಉತ್ರ ಸ್ಥಳದ ಹತ್ತಿರಲೇ ಮತ್ತೆ ಉಳಬೇಕು, ಹೀಗೆ ಭೂಮಿಯನ್ನೆಲ್ಲಾ ಉತ್ತು, ಮಣ್ಣು ತಳಮೇಲನಾದ ತರುವಾಯ ಬೀಜವನ್ನು ಚೆಲ್ಲುವರು. ಆ ಮೇಲೆ ಹರತೇ ಹೊಡೆಯುವರು, ಸ್ವಲ್ಪ ದಿವಸದಲ್ಲಿ ಮೊಳಕೆ ಹೊರಟು ಗಿಡವಾಗುವುದು. ಮದನ- ಹಾಗಾದರೆ ಬಹು ಆಶ್ಚರ್ಯಕರವಾಗಿದೆ. ನಾನೂ ಸ್ವಲ್ಪ ಬೀಜವನ್ನು ಹಾಕಿ ಅದು ಹೇಗೆ ಗಿಡವಾಗುವುದೊ, ನೋಡಬೇಕು. ಸುಮತಿ-ಹವುದು ಆಶ್ಚರ್ಯಕರವೇ ಸರಿ, ನೀನು ನಾಳೆ ಭೂಮಿಯನ್ನು ಅಗೆದು ಹಸನುಮಾಡಿಕೊಂಡಿದ್ದರೆ ನಾನು ಬೀಜವನ್ನು ತಂದುಕೊಡುತ್ತೇನೆ. ಅದನ್ನು ಹಾಕಿ ನೀನು ನೋಡುವೆಯಂತೆ,- ಹೀಗೆ ಮಾತನಾಡಿಕೊಂಡು ಇಬ್ಬರು ಹುಡುಗರೂ ಮನೆಗೆ ಹೋದರು. ಮಾರನೇದಿನ ಪ್ರಾತಃಕಾಲದಲ್ಲಿ ಮದನನು ಎದ್ದು ಹೊಲಕ್ಕೆ. ಹೋಗಿ ಸ್ವಲ್ಪ ಭೂಮಿಯನ್ನು ಕಷ್ಟ ಪಟ್ಟು ಅಗೆದು, ಮಧ್ಯಾನ್ನದವರೆಗೂ ಶ್ರಮಪಟ್ಟು, ಮನೆಗೆ ಬಂದು, ಜೋಯಿಸನನ್ನು ಕಂಡು- ಜೋಯಿಸರೆ, ಧಾನ್ಯ ಬೆಳೆಯಬೇಕೆಂದು ಹೋಲದಲ್ಲಿ ಇದುವರೆಗೂ ನಾನು ಕೆಲಸ. ಮಾಡಿದೆ, ಆದ್ದರಿಂದ ನಾನು ಒಳ್ಳೆ ಹುಡುಗನಲ್ಲವೆ? ಎಂದು ಕೇಳಿದನು. ಜೋಯಿಸ-ಅದು ಹಾಗಿರಲಿ, ನೀನು ಬೆಳೆದ ಧಾನ್ಯವನ್ನು ಹೇಗೆ ಉಪಯೋಗಿಸುತೀಯೋ ಅದರ ಮೇಲೆ ನೀನು ಒಳ್ಳೆಯವನು ಕೆಟ್ಟವನು ಎಂಬ ಸಂಗತಿಯನ್ನು ತೀರಾನಿಸಬೇಕಾಗಿದೆ, ಅದನ್ನು ನೀನು ಏನಮಾಡಬೇಕೆಂದು ಯೋಚಿಸಿದ್ದೀಯೆ ? ಮದನ-ಇದರಲ್ಲಿ ಬತ್ತವನ್ನು ಬೆಳೆದು ಅನ್ನವನ್ನು ಮಾಡಿ. ತಿನ್ನ ಬೇಕೆಂದು ಯೋಚಿಸಿದೇನೆ.