ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27 2] ಸುಮತಿ ಮದನಕುಮಾರರ ಚರಿತ್ರೆ ಇಬ್ಬರು ಅಣ್ಣತಮ್ಮಂದಿರು ಹಿಸ್ಪವೆಂಬ ಪಟ್ಟಣದಲ್ಲಿ ಅಣ್ಣತಮ್ಮಂದಿರಾದ ಇಬ್ಬರು ಒಡ್ಕರಿ ದ್ದರು. ಅಣ್ಣನ ಹೆಸರು ಬೀರಾಬೋಯಿ, ತಮ್ಮನ ಹೆಸರು ಮಾರಾ ಬೋಯಿ, ಇವರಿದ್ದ ಊರಿಗೆ ೫೦ ಗಾವುದ ದೂರದಲ್ಲಿ ಒಂದು ಕಾಡಿತ್ತು. ಆ ಕಾಡಿನಲ್ಲಿ ಚಿನ್ನ ಸಿಕ್ಕುವುದೆಂತಲೂ ಅಲ್ಲಿಗೆ ಹೋಗಿ ಚಿನ್ನವನ್ನು ಅಗೆದು ತಂದು ಅನೇಕರು ಐಶ್ವರ್ಯವಂತರಾದರೆಂತಲೂ ವದಂತಿ ಹರಡಿಕೊಂಡಿತ್ತು, ಇದನ್ನು ಕೇಳಿ ತಮ್ಮನಾದ ಮಾರಾಬೋಯಿಗೆ ಆಶೆ ಹುಟ್ಟಿ ತು, ತಾನೂ ಆ ಕಾಡಿಗೆ ಹೋಗಿ ಚಿನ್ನವನ್ನು ಅಗೆದು ತಂದು ಐಶ್ವರ್ಯವನ್ನು ಪಡೆಯಬೇಕೆಂದು ಮಾರನು ನಿಶ್ಲೇಸಿ ಕೊಂಡನು. ಈ ಅಣ್ಣ ತಮ್ಮಂದಿರಿಬ್ಬರಿಗೂ ಪರಸ್ಪರ ವಿಶೇಷವಾಗಿ ಪ್ರೇಮವಿದ್ದ ಕಾರಣ, ಒಬ್ಬನು ಇನ್ನೊಬ್ಬನಿಗೆ ಹೇಳದೇ ಯಾವ ಕೆಲಸ ವನ್ನೂ ಮಾಡುತಿರಲಿಲ್ಲ. ಅದೇ ಪ್ರಕಾರ ತಮ್ಮನು ಒಂದು ದಿನ ಅಣ್ಣ ನನ್ನು ಕುರಿತು-ಅಣ್ಣ, ನಾವು ಎಷ್ಟು ಕೆಲಸವನ್ನು ಮಾಡಿದರೂ ಬರುವ ಕೂಲಿ ಹಿಟ್ಟಿಗೆ ಆದರೆ ಬಟ್ಟೆಗೆ ಇಲ್ಲ, ಬಟ್ಟೆಗೆ ಆದರೆ ಹಿಟ್ಟಿಗೆ ಇಲ್ಲಎನ್ನು ವಹಾಗೆ ಇದೆಯೇ ಹೊರತು, ಕೈಕಾಲು ಮೆತ್ತಗಾಗಿ ಎರಡು ದಿನ ಮನೆಯಲ್ಲಿ ಮಲಗಿಕೊಂಡರೆ, ಮುರಿಸಿಕೊಂಡು ತಿನ್ನುವುದಕ್ಕೆ ಮೂರುದುಡ್ಡಿಗೂ ಮಾರ್ಗವಿಲ್ಲ. ಇಂಥಾ ಬಡತನವನ್ನು ನಾವು ಎಷ್ಟು ದಿವಸ ಅನುಭವಿಸಿದರೂ ಅದು ಸಮೆಯುವುದಿಲ್ಲ. ಆದಕಾರಣ ನಮ್ಮ ದಾರಿದ್ರವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ನಾನು ಒಂದು ಉಪಾಯ ವನ್ನು ಹುಡುಕಿದೇನೆ. ನಾನು ೮-೧೦ ಜನ ಆಳುಗಳನ್ನು ಜೊತೆ ಮಾಡಿಕೊಂಡು ಕಸವರ ಗುಡ್ಡದ ಕಾಡಿಗೆ ಹೋಗಿ ಅಲ್ಲಿ ಚಿನ್ನದ ಗಣಿ ಯನ್ನು ಅಗೆದು ತೆಗೆದುಕೊಂಡು ಬಂದು ಹಣವಂತನಾಗಬೇಕೆಂದು ಯೋಚಿಸಿಕೊಂಡಿದೇನೆ, ಆದರೆ ಈ ದೊಡ್ಡ ಕೆಲಸಕ್ಕೆ ಅನುಭವಶಾಲಿ ಯಾದ ನಿನ್ನ ಸಹಾಯವಾಗಬೇಕು. ನೀನು ಏನಹೇಳುತೀಯೆ ? ಎಂದು ಕೇಳಿದನು. ಅಣ್ಣನಾದ ಬೀರಾಬೋಯಿಯು ವಿಶೇಷ ಆಶೆಪಾತಕನಲ್ಲದೆ, ದೇವರು ಕೊಟ್ಟದ್ದರಲ್ಲಿ ತೃಪ್ತಿ ಪಟ್ಟು ಕೊಂಡು ಇರತಕ್ಕೆ ಸ್ವಭಾವವುಳ್ಳ