ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ0 ಸುಮತಿ ಮದನಕುಮಾರತಿ - [ಅಧ್ಯಾಯ ವನು, ಇವನು ಮಾರಾಬೋಯಿಯ ಮಾತನ್ನು ಕೇಳಿ, ತನ್ನ ಮನಸ್ಸಿ ನಲ್ಲಿ ಸ್ವಲ್ಪ ಹೊತ್ತು ಯೋಚಿಸಿಕೊಂಡು, ತರುವಾಯ ಮಾರನನ್ನು ಕುರಿತು ಅವನ ಪ್ರಯತ್ನ ಸಾಗುವುದಕ್ಕೆ ಇರತಕ್ಕ ಕಷ್ಟಗಳನ್ನು ಹೇಳಿ ದನು. ಎಷ್ಟೆಷ್ಟು ಬಗೆಯಲ್ಲಿ ಹೇಳಿದರೂ ತಮ್ಮ ಒಪ್ಪದೆ ಮುರಾಡ ಹಾಕಿಕೊಂಡು ಕೂತನು. ಆಗ ಬೀರನು-ತಮ್ಮ ! ಎಷ್ಟು ಹೇಳಿದರೂ ನೀನು ಕೇಳುವುದಿಲ್ಲ. ಚಿಂತೆ ಇಲ್ಲ; ನೀನು ಹೇಳಿದ ಪ್ರಕಾರವೇ ನಡೆಯಲಿ ; ನಿನ್ನ ಮನಸ್ಸು ಸಮಾಧಾನವಾಗಿರುವುದಕ್ಕಾಗಿ ನಿನ್ನ ಸಂಗಡ ನಾನೂ ಬರುತೇನೆ, ಆದರೆ ನೀನೂ ನಿನ್ನ ಕಡೇ ಜನರೂ ಅಗೆದು ತೆಗೆದ ಚಿನ್ನ ದಲ್ಲಿ ನನಗೆ ರವೆಯಷ್ಟೂ ಬೇಡ. ನನ್ನ ಸಂಪಾದನೆ ನಿನಗೆ ಬೇಡ, ಹೇಗಿದ್ದರೂ ನಿನ್ನ ಸಾಮಾನುಗಳನ್ನು ಹೇರಿಕೊಂಡು ಹೋಗು ವುದಕ್ಕೆ ೩-೪ ಗಾಡಿಗಳನ್ನು ನೀನು ಮಾಡಿಕೊಂಡು ಹೋಗಬೇಕಷ್ಟೆ. ಅದರ ಮೇಲೆ ನನ್ನ ಕೆಲವು ಸಾಮಾನುಗಳನ್ನೂ ಹೇರಿಕೊಂಡು ಹೋಗುವಹಾಗೆ ನೀನು ಮಾಡಿಸಿಕೊಟ್ಟರೆ ಸಾಕು, ಎಂದು ನುಡಿದನು. ಅಣ್ಣ ತಮ್ಮಂದಿರಿಬ್ಬರೂ ಇದಕ್ಕೆ ಒಪ್ಪಿದರು. ಮಾರನು ತನ್ನ ಮನೆಯಲ್ಲಿದ್ದ ಕುಡಿಕೆ ಮಡಕೆಗಳ ಸಹಿತವಾಗಿ ಮಾರಿ, ಮೊನೆಗುದ್ದಲಿ, ಎಲೆಗುದ್ದಲಿ, ಕಲ್ಲುಳಿ, ಚಮ್ಮಟಿಗೆ, ಕುಕ್ಕೆಗಳು, ಹಗ್ಗ, ಮಚ್ಚು ಕತ್ತಿ, ಕೊಡಲಿ, ಕುಡಗೋಲು, ಮೊದಲಾದ ಆಯುಧಗಳನ್ನು ಸಜ್ಜು ಮಾಡಿ ಕೊಂಡು ನಾಲ್ಕು ಗಾಡಿಯನ್ನು ಮಾಡಿ ಸಾಮಾನೆಲ್ಲವನ್ನೂ ಅವುಗಳ ಮೇಲೆ ಹಾಕಿಕೊಂಡು ಹತ್ತು ಜನ ಆಳುಗಳನ್ನು ಕರೆದುಕೊಂಡು ಹೊರಟನು. ಬೀರನಾದರೋ ಗುದ್ದಲಿ, ನೇಗಿಲು, ಕಳೆಕೊಕ್ಕೆ ಮೊದ ಲಾದ ವ್ಯವಸಾಯಕ್ಕೆ ಅನುಕೂಲವಾದ ಆಯುಧಗಳನ್ನೂ ನಾಲ್ಕಾರು ಕಾಲುನಡೆಗಳನ್ನೂ ತರಹೇವಾರಿ ಬೀಜಗಳನ್ನೂ ತೆಗೆದುಕೊಂಡು ಹೊರಟನು. ತಮ್ಮನಾದ ಮಾರನು ಮುಂಚಿತವಾಗಿಯೇ ಒಪ್ಪಿಕೊಂಡಿ ದ್ದಂತೆ ಅಣ್ಣನ ಸಾಮಾನುಗಳನ್ನು ತನ್ನ ಗಾಡಿಯ ಮೇಲೆ ಹಾಕಿ ಕೊಂಡು ಪ್ರಯಾಣ ಮಾಡಿದನು. ಕಸವರಗುಡ್ಡದ ಕಾಡು ಸಮಿಾಪಿ ಸಿತು, ಅದರ ಹತ್ತಿರ ಹತ್ತಿರಕ್ಕೆ ಹೋದಹಾಗೆಲ್ಲಾ ಮಾರನ ಆಶೆಯೂ ಕುತೂಹಲವೂ ಹೆಚ್ಚಾದವು, ಈ ವನ ಪ್ರದೇಶವಾದ ಕೂಡಲೆ ಬೀರಾ