ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೮೧ ಬೋಯಿಯು ಸುತ್ತ ಮುತ್ತ ನೋಡಿ ಭೂಗುಣ ಅಲ್ಲಿ ಚೆನ್ನಾಗಿದೆ ಎಂದು ತಿಳಿದು, ಮಾರನನ್ನು ಕುರಿತು ತಮಾ, ಇನ್ನು ನಾನು ಮುಂದಕ್ಕೆ ಬರಲಾರೆ, ನನ್ನ ಸಾಮಾನುಗಳನ್ನು 'ಈಚೆಗೆ ತೆಗೆದು ಕೊಟ್ಟು ನೀವು ಮುಂದಕ್ಕೆ ಪ್ರಯಾಣಮಾಡಿ, ಚಿನ್ನ ಸಿಕ್ಕುವ ಕಸವರ ಗುಡ್ಡ ಇನ್ನೂ ಹತ್ತು ಗಾವುದದ ಮೇಲಿದೆ. ನೀವೆಲ್ಲಾ ಹೋಗಿಬರುವ ತನಕ, ನಾನು ಇಲ್ಲಿಯೇ ಇರುತೇನೆ, ಎಂಬದಾಗಿ ಹೇಳಿ ತನ್ನ ಸಾಮಾನುಗಳನ್ನು ಈಚೆಗೆ ತೆಗೆದುಕೊಂಡು, ಹಿಂದೆ ನಿಂತನು ; ತಮ್ಮ ಎಷ್ಟು ಹೇಳಿದರೂ ಕೇಳಲಿಲ್ಲ; ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ ಇಡಲಿಲ್ಲ. ಆಗ, ಮಾರಾಬೋಯಿಯು ಅಣ್ಣನನ್ನ ಹೆಚ್ಚಾಗಿ ಬಲವಂತ ಮಾಡಲಾರದೆ ಮನಸ್ಸಂಕೋಚಮಾಡಿಕೊಂಡು, ತನ್ನ ಸಾಮಾನು ಗಳನ್ನೂ, ಜನರನ್ನೂ ಮುಂದಕ್ಕೆ ಸಾಗಿಸಿಕೊಂಡು ಹೋಗುತಾ ಅವ ರಲ್ಲಿ ಒಬ್ಬನನ್ನು ಕುರಿತು ನಮ್ಮಣ್ಣನಲ್ಲಿ ನನಗೆ ಎಷ್ಟೋ ಮರ್ಯಾದೆ ಇತ್ತು. ಈಗ ಆತನ ನಡತೆಯನ್ನು ಕಂಡು ಮನಸ್ಸಿಗೆ ಬಹು ಅಸಮಾ ಧಾನವಾಗಿದೆ. ನಾವು ಮಾಡತಕ್ಕ ಮಹಾ ಪ್ರಯತ್ನಕ್ಕೆ ತಾನು ಸಹಾಯ ಮಾಡಿ ಐಶ್ವರ್ಯನ್ನು ಸಂಪಾದಿಸಿ ಸುಖವಾಗಿರುವದನ್ನು ಬಿಟ್ಟು, ಹೆಂಗಸರಹಾಗೆ ಹಠವನ್ನು ಮಾಡಿ ಹಿಂದೆ ನಿಂತುಕೊಂಡು ಇದಾನೆ. ಇದು ಯಾವ ಕಾರ್ಯವನ್ನು ಸಾಧನೆಮಾಡುವುದಕ್ಕೋ ಗೊತ್ತಾಗ ಲಿಲ್ಲ. ಆತನ ಮನಸ್ಸಿಗೆ ಬಂದಹಾಗೆ ಮಾಡಲಿ, ನಾವು ಯತ್ನಿಸಿದ ಕಾರ್ಯವನ್ನು ಸಾಧಿಸಿ, ಸಾಹಸಮಲ್ಲರೆನಿಸಿಕೊಳ್ಳೋಣ, ಹಿಂತೆಗೆಯ ಬಾರದು, ಎಂದು ಜೊತೆಗಾರರಿಗೆ ಪ್ರೋತ್ಸಾಹಿಸುತ್ತಾ ಮುಂದಕ್ಕೆ ಹೊರಟನು, ಹೋಗು ಹೋಗುತಾ ಗಾಡಿ ಹೋಗುವುದಕ್ಕೆ ದಾರಿಯೇ ಇರಲಿಲ್ಲ. ಅನೇಕ ಜಾತಿ ಮರಗಳು ಹೆಜ್ಜೆ ಹೆಜ್ಜೆಗೂ ಬೆಳೆದು ಗಗನಕ್ಕೆ ಹೋಗಿದ್ದವು. ಕೆಳಗೆಲ್ಲಾ ಕಾಲಿಡುವುದಕ್ಕೆ ಜಾಗವಿಲ್ಲದೆ ಮುಳ್ಳು ಪೊದೆಗಳು ಬೆಳೆದಿದ್ದವು. ಇವುಗಳನ್ನು ಕಡಿದು ಅಲ್ಲಲ್ಲಿ ದಾರಿಯನ್ನು ಸಮಮಾಡಿಕೊಂಡು ಮುಂದಕ್ಕೆ ಹೊರಟರೆ, ಕಾಡೆಮ್ಮೆ ಮುಳ್ಳ ಹಂದಿ ಮುಂತಾದ ಕೆಟ್ಟ ಮೃಗಗಳು ಅಲ್ಲಲ್ಲಿ ಇವರ ಗಾಡೀ ಎತ್ತುಗಳನ್ನು