ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ನೆ ಅಧ್ಯಾಯ ರಾಮಾ ಜೋಯಿಸನು ಈ ಕಥೆಯನ್ನು ಮುಗಿಸಿದ ಕೂಡಲೆ, ಮದನನು-ಜೋಯಿಸರೆ, ಬೀರಾಬೋಯಿ ಬುದ್ಧಿವಂತನಾಗಿ ತೋರು ತಾನೆ, ಇವನು ಇಲ್ಲದೇ ಇದ್ದರೆ ಮಾರನೂ ಅವನ ಸಂಗಡ ಇದ್ದವರೂ ಹೊಟ್ಟೆಗೆ ಇಲ್ಲದೆ ಪ್ರಾಣವನ್ನು ಬಿಡಬೇಕಾಗಿತ್ತು. ಅದೇನೊ ಸರಿಯೆ, ಆದರೆ ಅವರು ಕಾಡಿನಲ್ಲಿ ಇದ್ದ ಕಾರಣ ಅವರಿಗೆ ಇಂಥಾ ಕಷ್ಟ ಪ್ರಾಪ್ತ ವಾಯಿತು, ಮಾರ ಮೊದಲಾದವರು ದೊಡ್ಡ ಪಟ್ಟಣದಲ್ಲಿದ್ದರೆ, ಅವರಿಗೆ ಬೇಕಾದಷ್ಟು ಧಾನ್ಯವೂ ಆಹಾರವೂ ದೊರೆಯುವುದಕ್ಕೆ ಸಂದೇಹವಿರ ಲಿಲ್ಲ. ಜೋಯಿಸ- ಧಾನ್ಯ ಮೊದಲಾದ ಆಹಾರಗಳು ಎಲ್ಲಿ ದೊರೆಯು ನವೋ ಅಂಥಾ ಕಡೆಯಲ್ಲಿಯೇ ಎಲ್ಲರೂ ಇರುವುದಕ್ಕೆ ಆದೀತೆ ? ಮದನ-ನಾನು ಹಾಗೆಯೇ ತಿಳಿದುಕೊಂಡು ಇದೇನೆ. ಜೋಯಿಸನಿರ್ಜನವಾಗಿ ಯಾವ ಧಾನ್ಯವೂ ಬೆಳೆಯದೇ ಇರತಕ್ಕ ದೇಶಗಳು ಈ ಪ್ರಪಂಚದಲ್ಲಿ ಇಲ್ಲವೊ ? ಮದನ-ಅಂಥಾ ದೇಶ ಉಂಟು, ಬೀರಮಾರರಿಬ್ಬರೂ ಹೋಗಿದ್ದ ಪ್ರಾಂತ್ಯ ಅ೦ಥಾದ್ದು. ಜೋಯಿಸ- ಪ್ರಪಂಚದಲ್ಲಿ ಇನ್ನೂ ಅಂಥಾ ದೇಶಗಳು ಎಷ್ಟೋ ಇವೆ. ಮದನ-ಜನರು ಅಂಥಾ ದೇಶಗಳಿಗೆ ಯಾಕೆ ಹೋಗಬೇಕು ? ತಮ್ಮ ಸ್ವದೇಶದಲ್ಲಿಯೇ ಇರುವುದುತಾನೆ. ಜೋಯಿಸ-ಹಾಗಾದರೆ ಸಮುದ್ರದಮೇಲೆ ಜನರು ಹೋಗ ಕೂಡದೆಂದಹಾಗಾಯಿತು; ಯಾಕೆಂದರೆ ಹಡಗು ಸಮುದ್ರದ ಮಧ್ಯದಲ್ಲಿ ಒಡೆದು ಹೋಗಬಹುದು, ನಿರ್ಜನವಾಗಿರತಕ್ಕೆ ಒಂದು ದ್ವೀಪ ಅಲ್ಲಿಗೆ ಹತ್ತಿರವಾಗಿರಬಹುದು, ಹೀಗಾದರೆ ಮನುಷ್ಯನು ಮೆಲ್ಲಗೆ ಈಜಿಕೊಂಡು ಆ ದ್ವೀಪಕ್ಕೆ ಹೋದರೂ ಹೋದಾನು, ಆಹಾರಕ್ಕೆ ಏನಮಾಡಬೇಕು ? ಮದನ-ಇಂಥಾ ಅಪಾಯಗಳು ಯಾವಾಗಲಾದರೂ ಸಂಭವಿ ಸಿದೆಯೆ ?