ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ | - [ಅಧ್ಯಾಯ. ಜೋಯಿಸ-ಎಷ್ಟೋ ಸಂಭವಿಸಿದೆ. ಒಂದಾನೊಂದು ಸಾರಿ ಮಾಳನೆಂಬ ಒಬ್ಬ ಅಂಬಿಗನು, ಹಡಗು ಒಡೆದುಹೋದ ಕಾರಣ, ನಿರ್ಜನವಾದ ನಡುಗೆಡ್ಡೆಗೆ ಹೋಗಿ ಬಿದ್ದನು, ಮದನ-ಇದು ಆಶ್ಚರವಾಗಿದೆ. ಅವನಿಗೆ ಆಹಾರ ಹೇಗೆ ಸಿಕ್ಕಿತು ? ಜೋಯಿಸ-ಅಲ್ಲಿ ಸಿಕ್ಕಿದ ಹಣ್ಣು ಗಳನ್ನೂ ಗೆಡ್ಡೆ ಗೆಣಸುಗಳನ್ನೂ ತಿಂದುಕೊಂಡಿದ್ದನು. ಮದನ-ಹೀಗೆ ಕಷ್ಟ ಪಡಲಾರದೆ ಅವನು ಸತ್ತು ಹೋಗಲಿಲ್ಲವೆ? ಜೋಯಿಸ-ಇಲ್ಲ. ಆಳು ಮೊದಲಿಗಿಂತಲೂ ಇನ್ನೂ ಬಲವಾದ. ಇದು ಹಾಗಿರಲಿ, ಇನ್ನೊಂದು ವಿಚಿತ್ರವಾದ ಕಥೆ ಇದೆ. ಅದನ್ನು ಈ ವಹಿಯಲ್ಲಿ ಬರೆದು ಇದೇನೆ, ನೀನು ಓದಬಹುದು, ನಾಲ್ಕು ಜನ ನಾವಿಕರ ಕಥೆ ಒಂದು ಪಟ್ಟಣದ ಕೆಲವು ಜನರು ಸೇರಿ ದ್ವೀಪಾಂತರದ ವ್ಯಾಪಾರ ಮಾಡಲು ಗೊತ್ತು ಮಾಡಿಕೊಂಡರು ; ಒಂದು ದೊಡ್ಡ ಹಡಗನ್ನು ಕಟ್ಟಿ ಅದರಲ್ಲಿ ಕೂತು ಹೊರಟರು. ಹಡಗು ಅಲ್ಲಲ್ಲಿ ನಿಂತು, ಆಯಾ ರೇವು ಪಟ್ಟಣಗಳಿಂದ ಬೇಕಾದ್ದನ್ನು ತರುತಾ, ತಂದಿದ್ದ ಪದಾರ್ಥವನ್ನು ಅಲ್ಲಿ ಮಾರುತಾ, ಮುಂದಕ್ಕೆ ಹೋಯಿತು. ದೈವಾಧೀನದಿಂದ ಗಾಳಿ ಹೆಚ್ಚಿ ಈ ನಾವೆಯನ್ನು ಉತ್ತರ ಸಮುದ್ರಕ್ಕೆ ತಳ್ಳಿಕೊಂಡು ಹೋಯಿತು. ಹಡಗು ನಡಸತಕ್ಕವರ ಯತ್ನ ಮಾರಿತು, ಯಾವ ದಿಕ್ಕೂ ತೋಚದೆ ಜನರೆಲ್ಲಾ ಗಾಬರಿಯಾದರು. ತುಫಾನು ಸ್ವಲ್ಪ ಕಡಮೆಯಾದ ಕೂಡಲೆ ದೂರದಲ್ಲಿ ಭೂಮಿ ಇದ್ದ ಹಾಗೆ ಕಾಣಿಸಿತು. ಚಳಿಗಾಲವಾ ದ್ದರಿಂದ ಸಮುದ್ರದ ನೀರು ಗಟ್ಟಿಯಾಗಿತ್ತು, ಅದರ ಮೇಲೆ ಹಡಗು ನಡೆಯಲಾರದೆ ಹೋಯಿತು, ಹಡಗಿನಲ್ಲಿ ಇದ್ದ ಸಾಮಾನುಗಳು ಕೆಲವು ಮುಗಿದು ಹೋಗಿದ್ದ ಕಾರಣ ದೂರದಲ್ಲಿ ಕಾಣುವ ದ್ವೀಪದಿಂದ ಆ ಸಾಮಾನನ್ನು ತಂದು ತುಂಬಿಕೊಂಡು ಮುಂದಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸಿದರು. ಅಲ್ಲಿಗೆ ಹೋಗಿ ಬರಲು ಘಟಕ