ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜಸೇವಕಮಂಡಲ. ”””/ # /* */ + / •vvv * * * * * *

ಹೇಳಿಕೊಟ್ಟರೆ ತನ್ನ ಮೇಲೆ ಸಿಟ್ಟಾಗದೆ ಚಂಚಲ ಮನಸ್ಸಿಗಾಗಿ ತನ್ನನ್ನೇ ದೂಷ್ಟಿಸಿಕೊಂಡು ಸಮಯೋಚಿತ ಉಪಕಾರಕ್ಕಾಗಿ ತನ್ನನ್ನು ಮನ್ನಿಸದೆ ಇರಲಾರನೆಂದು ಆತನು ತಿಳಕೊಂಡಿದ್ದನ್ನು ವಿದ್ಯಾಧರನು ಸುಶಿಕ್ಷಿತ ತರುಣನಿದ್ದು ಕೇವಲ ನಿರ್ಮಲ ಅಂತಃಕರುಣದವನು. ಆತನಲ್ಲಿ ಕಪಟನಾಟಕವು ಎಳ್ಳಪ್ಲಾದರೂ ಇರಲಾರದೆಂಬದಾಗಿ ಮಾಧವನು ಪೂರ್ಣಮನಗಂಡಿದ್ದನು, ಆಂಧ ಉತ್ತಮೋತ್ತಮ ಗುಣಗಳುಳ್ಳ ವಿದ್ಯಾಧರನ ಸ್ನೇಹವನ್ನು ಸಂಪಾದಿಸಿ ಮಾಧವನು ಧನ್ಯ ನಾಗಿದ್ದನು. ವಿದ್ಯಾಧರನು ಎದ್ದು ಕುಳಿತಿದ್ದನ್ನು ಕಂಡು ಮಾಧವನು ಸಾವ ಕಾಶವಾಗಿ ಅಂದದ್ದು “ ವಿದ್ಯಾಧರಾ, ನನ್ನ ಮೇಲೆ ಸಿಟ್ಟಿಗೆದ್ದೇನು ? ನಾನು ನಿನ್ನ ಹಿತಕ್ಕಾಗಿಯೇ ಹಾಗೆ ಹೇಳಿದೆನು, ನಿನ್ನ ಅಹಿತವನ್ನು ನಾನು ಜನ್ಮ ಜನ್ಮಾಂತರದಲ್ಲಿಯೂ ಕೂಡ ಬಯಸದೆ ಯಾವಾಗಲೂ ನಿನ್ನ ಸಖ್ಯವನ್ನು ದಯಪಾಲಿಸೆಂದು ಅನನ್ಯಭಾವದಿಂದ ದೇವರಿಗೆ ಬೇಡಿಕೊಳ್ಳುತ್ತಿರುವೆನು ಇಂದು ಹೀಗೆ ಮಾಡುವದರಲ್ಲಿ ನನ್ನ ಹೇತು ವ್ಯಾವದೆಂದು ನೀನು ಕೇಳಬಹುದು; ಆದರೆ ಅದನ್ನು ಮಾತ್ರ ನಾನು ಈಗ ನಿನಗೆ ಹೇಳಲಾರನು. ನನ್ನ ಮಾತಿನ ಅನುಭವ ಬಂದ ಮೇಲೆ ನಿನಗೆ ನನ್ನ ಈ ಆಕಸ್ಮಿಕ ವರ್ತನದ ಕಾರಣವು ತಿಳಿಯಬಹುದು. ಏಳು; ಹೀಗೆ ಸುಮ್ಮನೆ ಏನಾದರೊಂದು ತಿಳಿದುಕೊಂಡು ಅಸಮಾ ಧಾನ ಹೊಂದುವದು ಹಿತಕರವಲ್ಲ. ನನ್ನ ಮಾತಿನ ಸತ್ಯತೆಯು ನಿನಗೆ ಇನ್ನು ತುಸು ದಿವಸಗಳಲ್ಲಿಯೇ ತಿಳಿದೀತು. ” ಹೀಗೆ ಮಾಧವನು. ತಾನಾಗಿಯೇ ಮಾತಾಡಿದ್ದನ್ನು ಕಂಡು ವಿದ್ಯಾಧರನ ಮನಸ್ಸಿಗೆ ಆನಂ ದವಾಯಿತು, ಇದಕ್ಕಾಗಿ ಇನ್ನು ಹೆಚ್ಚಿಗೇನೂ ಕೇಳದೆ ಮತ್ತೆ ಹೊತ್ತು ಸಾಧಿಸಿದಾಗ ಅದನ್ನೆಲ್ಲ ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಸುಮ್ಮ ನಾದನು. ತಾನು ಮಾತಾಡದಿದ್ದರೆ ಮಾಧವನು ಮನಸ್ಸಿಗೆ ಕಡಕೆನಿಸ