ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧. MMMMI IMMMMovvv ” * * * * * * ••••w , W • // \* ಬ್ರಮ್ಮ ಚಾರಿತವೋ, ಗೃಹಸ್ಥಾಶ್ರಮವೋ? ೧೩ ಒಂದಾದರೂ ಪ್ರಸಂಗವನ್ನು ಮಾಧವನು ವ್ಯರ್ಥವಾಗಿ ಹೋಗಗೊಡು ತಿದ್ದಿಲ್ಲ, ಇದನ್ನೆಲ್ಲ ಕಂಡು ವಿದ್ಯಾಧರನು ಸರಸ್ವತಿಯನ್ನು ಆಕೆಯ ಕೇವಲ ನಿರ್ಮಲಾಂತಃಕರುಣಕ್ಕಾಗಿ ಪ್ರೀತಿಸುವನೆಂದೂ, ಈ ಪ್ರೇ ಮವು ಪ್ರಣಯಪ್ರೇಮವಲ್ಲೆಂದೂ ಮಾಧವನು ತಿಳಿದಿದ್ದನು. ಆದರೆ ಇತ್ತ ನಮ್ಮ ವಿದ್ಯಾಧರನ ವಿಚಾರ ಬೇರೆ ಸರಸ್ವತಿಯ ಗುಣಗಳನ್ನು ಕಂಡು ಆಕೆಯು ನಿಜವಾಗಿ ಸರಸ್ವತೀ ದೇವಿಯಂತೆ ವಿದ್ಯಾಧರನಿಗೆ ತರುತ್ತಿದ್ದಳು, ಇಂಧವಳನ್ನು ಮದುವೆಯಾಗುವದು ತನ್ನಂಥವನಿಗೆ ಶಕ್ಯವಿಲ್ಲೆಂದು ಕಂಡು ಮೊದಲು ಮೊದಲು ನಿರ್ಮಲ ಅಂತಃಕರುಣದಿಂದ ಪ್ರೀತಿಸುತ್ತಿದ್ದನು, ಆದರೆ ಬರಬರುತ್ತ ಇದೆಲ್ಲ ಹೊಯಿ: ತು. ಆತನಿಗೆ ಸರಸ್ವತಿಯ ರಮ್ಯವಾದ ಮೂರ್ತಿಯ ಮೇಲಿಂದಮೇಲೆ ನೆನಪಾಗಹತ್ತಿತು, ಸರಸ್ವತಿಯ ಪತ್ರಗಳನ್ನು ಓದಿ ಮನಸ್ಸಿನಲ್ಲಿಯೇ ಆನಂದಪಡುತ್ತಿದ್ದನು ಸರಸ್ವತಿಯ ಗುಣಾನುವರ್ಣ ನವನ್ನು ಕೇಳುತ್ತ ಕೂಡುವದರಲ್ಲಿ ಆತನು ಸಂತೋಷಪಡಹತ್ತಿದನು. ಆದರೆ ಇವೆಲ್ಲ ವಿಚಾರಗಳ ಕಾಲಾಂತರದಿಂದ ಮಾಧವನ ದೃಪೆ ತೃತಿಗೆ ಬೀಳದೆ ಉಳಿಯಲಿಲ್ಲ. ವಿದ್ಯಾಧರನು ತಾನು ಸರಸ್ವತಿಯನ್ನು ಪ್ರೀತಿಸುತ್ತೇನೆಂದು ಮಾಧವನಿಗೆ ಇನ್ನೂ ಹೇಳಿದ್ದಿಲ್ಲ ಮಾಧವನಾ ದರೂ ಯಾವ ಕಾರಣದಿಂದಲೋ ಏನೋ ಸರಸ್ವತಿಯನ್ನು ಮದುವೆ ಹಾಗೆಂದು ವಿದ್ಯಾಧರನನ್ನು ಇನ್ನೂ ಕೇಳಿದ್ದಿಲ್ಲ. ವಿವಾಹದ ವಿಸ ಯಕ್ಕೆ ವಿದ್ಯಾಧರನ ವಿಚಾರಗಳೇನೋ ಅಪಕ್ವವಿರುವವೆಂದು ಆತನಿಗೆ ಗೊತ್ತಿತ್ತು, ಸಮಾಜಸೇವೆಗಾಗಿ ಆಜನ್ಮವೂ ಬ್ರಮ್ಮಚಾರಿವ್ರತವನ್ನು ಕೈಕೊಳ್ಳಬೇಕೆಂದು ಯಾರು ಆತನಿಗೆ ಹೇಳಿದ್ದರೋ ಏನೋ ! ಇದ ಕ್ಯಾಗಿ ಆತನ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಮ್ಮೆ ಕೇಳಿ ಕೂಳ್ಳಬೇಕೆಂದು ಆತನು ಮಾಡಿದನು. ಅದರಂತ ಹೊತ್ತು ಸಾಧಿಸಿ ದಾಗ ಲಕ್ಷಗೊಟ್ಟು ಆತನಿಗೆ ಎಲ್ಲ ವಿಚಾರಗಳನ್ನು ಚನ್ನಾಗಿ ತಿಳಿಸಿ