ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಸಮಾಜರಹಸ್ಯ. ಮಾತ್ರ ಏನೂ ಕ್ರಮವಾಗದಂತೆ ತೋರುತ್ತದೆ ವಾಚಕರೇ, ಅತ್ತ ಕಡೆಗೆ ನೋಡಿರಿ ! ಒಂದು ನೌಕೆಯು ಮತ್ತೊಂದು ನೌಕೆಯ ಹತ್ತರ ಹೋಗಿ ತಬ್ಬಿ ಆನೆಗಳು ಜಲಕ್ರೀಡೆಯನ್ನು ಮಾಡುವಂತೆ ಹೇಗೆ ಉಲ್ಲಾಸವೃತ್ತಿಯಿಂದ ಜಿಗಿದಾಡುತ್ತಿರುವವು, ಈ ಜಲಕ್ರೀಡೆಯನ್ನು ನೋಡುವದಕ್ಕಾಗಿಯೂ ಎಷ್ಟೋ ಜನರು ನೆರೆದಿರುವರು, ತರುಣರೂ ತರುಣಿಯರೂ ಏನೋ ಹುಡುಕಾಡುತ್ತಿರುವಂತೆ ವನದಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಿರುವರು ಅವರಲ್ಲಿ ಕೆಲವರು ಹುಡು ಕುವ ವಸ್ತುವು ಲಭಿಸಿತೆಂದು ಆನಂದದಿಂದ ನಕ್ಕು ತಮ್ಮ ಮಿತ್ರರಿಗೂ ಅದನ್ನು ತೋರಿಸುತ್ತಿರುವರು. ಕೆಲವರು ಅಪಜಯದಿಂದ ಕೋಧ ಗೋಂಡು ಒಮ್ಮೆ ನೌಕೆಯನ್ನೂ ಮತ್ತೊಮ್ಮೆ ನೀರಿನ ಹಾರಾಟವನ್ನೂ ನೋಡುತ್ತ ಹೇಗಾದರೂ ಮಾಡಿ ಕಾಲ್ಪನಿಕ ಮನರಂಜನೆಯನ್ನು ಮಾಡಿಕೊಳ್ಳುತ್ತಿರುವರು ವಾಚಕರೇ, ಮತ್ತೊಂದು ಕಡೆಗೆ ನೋಡಿ ದಿರೇನು ? ನೋಡಿರಿ! ಅಲ್ಲಿ ಹೇಗೆ ಸಣ್ಣ ಬಾಲಕರು ವನದೊ ಳಗೆ ಅಲ್ಲಲ್ಲಿ ಮಾಡಿಟ್ಟಿದ್ದ ಕಲ್ಲಿನ ಹುಲಿನಿಂಹಗಳ ಮೇಲೆ ಜಿಗಿಜಿಗಿದು ಕುಳಿತು ತಮ್ಮ ಅಳಲ ಧೈರ್ಯವನ್ನೂ, ಪರಾಕ್ರಮವನ್ನೂ, ಹುಲಿ ಯ ಅಪೌರುಸತ್ಯವನ್ನೂ ತಮ್ಮ ತಾಯಿಗೆ ಹೇಳಿ ಉರಳಾಡಿ ನಗು ತಿರುವವು ಮತ್ತೆ ಕೆಲ ಬಾಲಕರು ಅಂಜಿಕೆಯಿಲ್ಲದೆ ಹುಲಿಯ ಬಾ ಯಲ್ಲಿ ತಮ್ಮ ಕೋಮಲವಾದ ಕರಗಳನ್ನು ಹಾಕುತ್ತಿರುವರು, ಸಣ್ಣ ಹುಡುಗರನ್ನು ನೋಯ್ಕೆಸಬಾರದೆಂಬ ವಿಚಾರವನ್ನು ಮಾಡಿಯೇ ಹುಲಿಯು ಸುಮ್ಮನೆ ಕುಳಿತು ಈ ಚೇವೆಗಳನ್ನು ತಡಕೊಳ್ಳುವದು ! ಪ್ರತಿದಿನ ಸಂಜೆಯಲ್ಲಿಯೂ ಇದೇ ತರದ ಗೊಂದಲವಾದರೂ ವನವು ದೊಡ್ಡದಿದ್ದದರಿಂದ ವನದಲ್ಲಿ ಏಕಾಂತ ಸ್ಥಳಗಳನ್ನು ಬಹಳವಾಗಿ ಕಾಣಬಹುದಾಗಿದೆ. ಈ ಸ್ಥಳದಲ್ಲಿ ಸಂಜೆಗೆ ಅಸ್ಕೃರಸಗಳನ್ನು ಕಾಣಬಹುದೆಂದು ಹೇಳುತ್ತಾರೆ, ಯಾರ ಮುಖದ ಮೇಲೆ ಆನಂದವು ಹೊಳೆಯುತ್ತಿದ್ದು, ಮತ್ತೆ ಯಾರ ಮುಖದ ಮೇಲೆ ಗಾಂಭೀರ್ಯವು