ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರಹ್ಮಚಾರಿವ್ರತವೋ, ಗೃಹಸ್ಥಾಶ್ರಮವೋ?

  • // - ೧ ೧ ೧/

- * * * / v / ತಲೆದೋರುತ್ತದೆ; ಮತ್ತೆ ಕೆಲವರ ಮುಖಗಳ ಮೇಲೆ ಸುಪ್ರಸನ್ನ ತೆಯ ಕುಣಿಯುತ್ತಿರುವದು, ಕೆಲವರು ಸಿಟ್ಟಿನಿಂದ ಕಾಲು ಅಪ್ಪಳಿ ಸುತ್ತ ವಸುಂಧರೆಯನ್ನು ಒಳ್ಳ ಬಲದಿಂದ ಒಡೆದು ಆಕೆಗೆ ಶಾಪವ ಸ್ನೇಯುತ್ತಿರುವಂತೆ ತೋರುತ್ತಿತ್ತು, ಬಾಲಕರ ನಿಸರ್ಗ ಸೌಂದ ರ್ಯವೂ ಅವರ ಮಂಜುಳ ಕಿಲಕಿಲಾಟವೂ, ಎತ್ತ ನೋಡಿದತ್ತ ಹಬ್ಬ ಕೂಂಡು ಪ್ರೇಕ್ಷರಿಗೆ ಆನಂದವನ್ನೀಯುತ್ತಿರುವದು, ಆಂಧ ತಂಪು ಹೊತ್ತಿನಲ್ಲಿ ವಾಸರ-ಮಣಿಯು ಸಹಕರಗಳನ್ನು ಚಾಚಿ ಮುಗುಳು ನಗೆಯಿಂದ ವನದೊಳಗಿನವರನ್ನು ಸಾವಕಾಶವಾಗಿ ಬೆನ್ನ ಮೇಲೆ ಬಕಪ್ಪರಿಸಿ ಆನಂದದಿಂದ ರಕ್ತವರ್ಣ ದ ಮುಖವಾಡಿಕೊಂಡು ವನಸ್ಥ ನಾಗರಿಕರನ್ನು ಹೆಚ್ಚಿಗೆ ಆನಂದಗೊಳಿಸುತ್ತಲೇ ತನ್ನ ಇತಃಪರೆ ರಾಜ್ಯವನ್ನು ಆಳಲಿಕ್ಕೆ ಅಪ್ಪಣೆಯನ್ನು ಪಡೆಯುತ್ತಿದ್ದನು. ಇರಲಿ, ಇಂಧ ಮನೋಹರ ಸ್ಥಳದಲ್ಲಿ ಆನಂದರಸವನ್ನು ಸೇವಿಸುವದಕ್ಕೆ ನಮ್ಮ ವಿದ್ಯಾಧರನ ಮಾಧವನ ಬಂದಿದ್ದ ರು. ಇಬ್ಬರು ಮಿತ್ರರು ಅತ್ತಿತ್ತ ತಿರುಗಾಡಿ ಕಡೆಗೆ ಮಲ್ಲಿಗೆಯ ಮಂಟಪ ದೊಳಗೆ ಇಟ್ಟಿದ್ದ ಒಂದು ಬಾಕಿನ ಮೇಲೆ ಕುಳಿತುಕೊಂಡರು, ಇತ್ಯ ಕಡೆಗೆ ಯಾವ ತರದ ಗೊಂದಲವು ಇಲ್ಲದ್ದರಿಂದ ಮಂದಮಾರು ತನು ಮಲ್ಲಿಗೆಯ ಮಂಟಪದೊಳಗೆ ಬಂದು ನಂದನಂದವಾಗಿ ಸುಗಂಧರಸವನ್ನು ಬೀರುತ್ತಿದ್ದನು. ಇಂದು ವಿದ್ಯಾಧರನ ಎಲ್ಲ ವಿಚಾ ರಗಳನ್ನು ಕೇಳಬೇಕೆಂದು ಮಾಧವನ ಮನಸ್ಸಿನಲ್ಲಿ ಬಂದಿತು. ಆತನು ಅದರಂತೆಯೇ ಮಾತು ಮಾತಾಡುವಾಗ ಅಂದದ್ದು '- ಮಾಧವ-ವಿದ್ಯಾಧರಾ, ಇನ್ನು ತುಸು ದಿವಸಗಳಲ್ಲಿಯೇ ಸೂಟಿಯಾಗುವದು, ಆದ್ದರಿಂದ ನೀನು ಎಲ್ಲಿಗೆ ಹೋಗಬೇಕೆಂದು -ನಿಶ್ಚಯಿಸಿರುವಿ?