# # # ಸಮಾಜರಹಸ್ಯ. ದಿರಾ ! ಈಶ್ವರೇಚ್ಛೆಯನ್ನು ಯಾರು ಮೀರಲಾಪರು ? ದಿವಾಕರಪಲತರ ಮಿತ್ರರು ಅವರ ಈ ದುಃಸಿ ತಿಯನ್ನು ಕಂಡು ವಿದ್ಯಾಧರನನ್ನಾದರೂ ಕರೆಕಳುಹಿಸಬೇಕೆಂದು ಗೊತ್ತು ಮಾಡಿ ಆತನಿಗೆ ತಾರು ಮಾಡಿದರು. ವಿಮಲೆಯ ಸಹಾಯಕ್ಕಾಗಿ ತಾವೇ ಬಂದು ದಂಪತಿಗಳ ಕಂಪ್ಯೂವೆ ಯನ್ನು ಮಾಡಹತ್ತಿದರು, ಒಂದು ದಿವಸಾಯಿತು, ಇನ್ನೂ ವಿದ್ಯಾಧ ರನು ಬರಲಿಲ್ಲೆಂದು ಕಂಡು ವಿಮಲೆಯು ಹತಾಶಳಾದಳು ಆದರೂ ಧೈರ್ಯಗುಂದದೆ ಮಾತಾಪಿತೃಗಳ ಸೇವೆಯಲ್ಲಿ ಹಗಲಿರುಳೆನ್ನದೆ, ನಿದ್ದೆ ನೀರಡಿಕೆಯಿಲ್ಲದೆ, ತಕ್ಷರಳಾದಳ, ಆದರೆ ದೇವರು ಆಕೆಯ ಈ ಸೇವೆಗೆ ತಕ್ಕ ಪ್ರತಿಫಲವನ್ನು ಕೊಡುವಂತೆ ಆತೆ ಉಳಿಸಿದ್ದಿಲ್ಲ ಣ ಇತ್ತ ಮೂರನೇ ದಿವಸ ಮಾಧವನು ಮುಂಜಾವಿನಲ್ಲಿ ಕಣ್ಣು ಒರಿಸಿಕೊಳ್ಳುತ್ತ ಹೊರಗೆ ಬರಲು ಸಿಪಾಯಿಯು ಆತನ ಕೈಯ್ಯಲ್ಲಿ ಒಂದು ತಾರು ತಂದು ಕೆಟ್ಟ ನು. ಕಡಲೆ ಲಗುಬಗೆಯಿಂದ ಹರಿದು ಓದಿ ಗಾಬರಿಯಾಗಿ ಒಳಗೆ ಹೋಗಿ ವಿದ್ಯಾಧರನಿಗೆ ಅದನ್ನು ಕೊಟ್ಟನು ವಿದ್ಯಾಧರನು ಅ೦ಜುಂಜುತ್ತಲೆ ಎದಹತ್ತಿದನು. ಮುಂದೆ ಮುಂದೆ ಓದಹತ್ತಿದಹಾಗೆ ಆತನ ಮುಖತೇಜವು ಇಳಿಯುತ್ತ ಹೋಯಿತು. ಆತನು ಬಹಳ ಸಂಕಟದಲ್ಲಿ ಬಿದ್ದನು. ಮಗನಂತೆ ಪ್ರೀತಿಸಿ ಪಾಲಿಸಿದ ತನ್ನ ದಿವಾಕರಸಂತರೂ ಆತನ ಹೆಂಡತಿಯೂ ಹೀಗೆ ಮರಣೆ ನ್ಮುಖರಾಗಿರುವರೆಂದು ಕಂಡು ಆತನಿಗೆ ಅಸಹ್ಯತರವಾದ ದುಃಖವಾ ಯಿತು, ಕೂಡಲೆ ಆತನು ಎದ್ದು ಅಂಗಿಯನ್ನು ಹಾಕಿಕೊಂಡು ಮಾಧ ವನ ಸಂಗಡ ವಿದ್ಯಾರ್ಥಿಗಳ ಮೇಲ್ವಿಚಾರಕರ ಕಡೆಗೆ ಹೋದನು, ಅವರ ಕೈಯ್ಯಲ್ಲಿ ತಾರು ಕೊಟ್ಟು ಇಬ್ಬರೂ ಸುಮ್ಮನೆ ನಿಂತರು. ಮೇಲ್ವಿಚಾರಕರು ತಾರು ಓದಿಕೊಂಡು “ ಒಳ್ಳೇದು ಹೋಗಿರಿ, ನಾನು ರಜೆಯನ್ನು ಕೊಟ್ಟಿದ್ದೇನೆ” ಎಂದು ಹೇಳಿದರು, ವಿದ್ಯಾಧರನ ಆತ್ಯಾ ಗ್ರಹದಿಂದ ಆತನಿಗೆ ಸಹಾಯಮಾಡುವದಕ್ಕಾಗಿ ಮಾಧವನೂ ಎಡೂರ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೪೭
ಗೋಚರ