ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಹೀಗಿ”v , v• - * - - * * * * * * * * ಸಮಾಜರಹಸ್ಯ. ಹೇಳಿರುವೆವು, ಮುಂದೆ ವೈದ್ಯರು ಔಷಧವನ್ನು ಕೊಟ್ಟು ಶ್ರೀನಿವಾಸ ರಾಯರ ಮನೆಯನ್ನು ಬಿಟ್ಟವರೇ ಅಚ್ಯತರಾಯನ ಹತ್ತಿರ ಬಂದರು. ತನ್ನ ಪ್ರತಿಸ್ವರ್ಧೆಯನ್ನು ಪೃಥ್ವಿಯ ಮೇಲೆ ಇರಗೊಡದಿರುವದಕ್ಕೆ ಇದು ಒಳ್ಳೆ ಸಮಯವೆಂದು ತಿಳಿದು ಔಷಧದಲ್ಲಿ ವಿಷವನ್ನು ಕೂಡಿಸಿ ತೀವ್ರವೇ ಮರಣಕ್ಕೆ ಗುರಿಯಾಗುವ ಹಾಗೆ ಮಾಡಬೇಕೆಂದು ಅತ್ಯುತ ರಾಯನು ವೈದ್ಯರಿಗೆ ಹೇಳಿ ಮತ್ತೆ ೫೦೦ ರೂಪಾಯಿಗಳನ್ನು ಕೊಟ್ಟು ಅವರ ಮನೆಯಲ್ಲಿ ಯಾರು ಯಾರು ಇದ್ದರೆಂದು ಕೇಳಿಕೊಂಡು ವೈದ್ಯರಿಗೆ ಹೋಗಲು ಅಪ್ಪಣೆಯನ್ನಿತ್ತನು, ಮುಂದೆ ಆ ದಿಸ್ಪಧವು ಹೇಗೆ ಸರಸ್ವತಿಗೆ ಗೊತ್ತಾಯಿತಂಬದೂ, ವೈದ್ಯರು ದಸದ ಕೊಟ್ಟು ಮನೆಗೆ ಹೋಗುತ್ತಿರಲು ಅವರ ಮುಖಚರ್ಯದಲ್ಲಿ ಆದ ವ್ಯತ್ಯಯವನ್ನು ನೋಡಿ ಸಂಶಯಪಟ್ಟಿ ಸರಸ್ವತಿಯು ಆ ಓಸಧವನ್ನು ಬೆಕ್ಕಿನ ಮೇಲೆ ಹೇಗೆ ಪ್ರಯೋಗಿಸಿ ನೋಡಿದಳೆಂಬದು ನಮಗೆ ಈ ಮೊದಲೇ ಗೊತ್ತಿ ರುವದು. ಇರಲಿ, ಇತ್ತ ಮಾಧವನು ಬಂದ ತುಸು ಹೆ ಇತ್ತಿನಲ್ಲಿಯೇ ಶ್ರೀನಿವಾಸರಾಯರಿಗೆ ಬಹಳ ಜ್ವರ ಬಂದು, ತಲೆನೋವು ತಾಳಲಾರದೆ ಅವರು ಒದರಹತ್ತಿದರು, ಮಾಧವನು ತಾಯಿಯನ್ನು ಎಚ್ಚರಿಸಿ, ತಂದೆಯ ಹತ್ತಿರ ಹೋಗಿ ಕುಳಿತು “ ಅಪ್ಪಾ ನಿಮಗೇನಾಗುವದು ? " ಎಂದು ಕೇಳಿದನು. ಶ್ರೀನಿವಾಸರಾಯರು ತಾವು ಇನ್ನು ಈ ಅಂತ ರ್ವೇದಗಳೊಳಗಿಂದಲೂ, ತಲೆ ನೋವಿನೊಳಗಿಂದಲೂ ಜೀವದಿಂದ ಉಳಿಯುವದಿಲ್ಲೆಂದು ಕಂಡು ಆದ ಸುದ್ದಿಯನ್ನೆಲ್ಲ ತಮ್ಮ ಕುಟುಂಬಕ್ಕೆ ಹೇಳಿ ಎಲ್ಲರ ಕ್ಷಮೆಯನ್ನು ಬೇಡಿಕೊಂಡು, ಎಲ್ಲರಿಂದಲೂ ತಮ್ಮ ಕಡೆಯ ಅಪ್ಪಣೆಯನ್ನು ತೆಗೆದುಕೊಳ್ಳಬೇಕೆಂದೂ ಮಾತಾಡಲಿಕ್ಕೆ ಯತ್ನಿಸಹತ್ತಿದರು. “ ಇನ್ನು ಉಳಿದವರನ್ನಾದರೂ ಸುಖಿಯಾಗಿಡು” ಎಂದು ಪರಮೇಶ್ವರನಿಗೆ ಹೇಳುವದಕ್ಕೆ ತಮ್ಮ ಕೈಯ್ಯಗಳನ್ನು ಎತ್ತಿ ಊರ್ಧ್ವದೃಶ್ಮಿಯಿಂದ ಒಮ್ಮೆ ಆಕಾಶದ ಕಡೆಗೆ ನೋಡಿ ಇಹಲೋ ಕದ ಯಾತ್ರೆಯನ್ನು ಮುಗಿಸಬೇಕಂತಲೇ ಎಲ್ಲರನ್ನು ತಮ್ಮ ಹತ್ತರ