ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಾರಂಭಕ್ಕೆ ಎರಡು ಶಬ್ದಗಳು. .ಅಶಿ ಸುಶಿಕ್ಷಿತ ಕೆಲ ಸ್ತ್ರೀ-ಪುರುಷರು ಹಿಂದುಳಿದ ಅಂಧು-ಭಗಿನಿಯರನ್ನು ತಿದ್ದು ವದರಲ್ಲಿ ಸ್ವಾರ್ಧತ್ಯಾಗಿಗಳಾಗಿ ತಮ್ಮ ತನ-ಮನ-ಧನಸರ್ವಸ್ವವನ್ನರ್ಪಿಸಿ ಎಡೆಬಿಡದೆ ಯತ್ನಿ ಸುವದೇ ನಿಜ ಸಮಾಜ-ಸೇವಾಧರ್ಮವು. ಇದೇ ಅವರ ಆದ್ಯ ಕರ್ತವ್ಯವು ಬರೇ ಪುರುಷರಿಂದಲೇ ಹೇಗೆ ಸಮಾಜವಾಗುವದಿಲ್ಲವೋ ಹಾಗೆಯೇ ಬರೆ ಪುರುಷರನ್ನ ಷ್ಟು ಸುಶಿಕ್ಷಿತರನ್ನಾಗಿ ಮಾಡಿದರೆ ಸಮಾಜೋನ್ನ ತಿಯ ಇದರಿಂದಲೇ ಆಗುವ ದೇಶೋನ್ನ ತಿಯ ಎಂದಿಗೂ ಆಗಲಾರವೂ. ಸ್ತ್ರೀಯರೂ ಕೂಡ ಸುಶಿಕ್ಷಿತರೂ ಸುಸಂಸ್ಕೃತರೂ ಆಗಿ ಸಮಾಜಕ್ಕೆ ತಾವು ಮಾಡಬಹುದಾದ ಕಾರ್ಯವನ್ನು ಯಧಾಶಕ್ತಿಯಿಂದಲೂ ಯಥಾಸಾಂಗವಾ ಗಿಯ ಮಾಡಲೇ ಬೇಕು ಅದಕ್ಕಾಗಿ ಅವರು ಚಲೋ ಸಂಸ್ಕೃತಿಯನ್ನು ಪಡೆಯಲೇ ಬೇಕು, ಇದೇ ಸಮಾಜೋನ್ನತಿಯ-ಹಾಗೆಯೇ ದೇಶೋನ್ನ ತಿಯ ರಹಸ್ಯವು ವಾಚಕಮಹಾಶಯ ! " ನಾವು ಯಾರು ನಮ್ಮ ಸಮಾಜಸ್ಥಿತಿಯು ಈಗ ಹೇಗಿರುವದೆ'೦ಬದನ್ನು ಕರ್ನಾಟಕಸ್ಥರಾದ ನಾವು ವಿಚಖರವಾಡಿದರೆ ನಮಗೆ ಏನು ಕಂಡುಬರಬಹುದು ? ನಿಜವಾಗಿ ಪ್ರಾಂಜಲಬುದ್ಧಿಯಿಂದ ಏಚಾರ ಮಾಡಿದರೆ ಐವತ್ತು ವರ್ಷಗಳ ಹಿಂದಿನ ಮಹಾರಾಷ್ಟ್ರ-ಸಮಾಜ ಸ್ಥಿತಿಯ ಚಿತ್ರವೇ ನಮ್ಮ ಈಗಿನ ಸ್ಥಿತಿಯನ್ನು ಯಥಾಸಾಂಗವಾಗಿ ಸಾರಿ ದೂರಿ ಹೇಳುತ್ತದೆ, ಹೀಗೆ ಐವತ್ತು ಐವತ್ತು ವರ್ಷಗಳ ಹಿಂದಿನಿಂದಲೇ ಹೆಜ್ಜೆಯನ್ನಿಡುತ್ತ ನಡೆದರೆ, ನಮ್ಮ ಸಮಾಜವು ಪೂರ್ಣವಾಗಿ ಸುಧಾರಿಸ ಬೇಕಾದರೆ ಇನ್ನು ಯಾವ ಯುಗವು ಬರುವದೋ ಯಾರು ಹೇಳುವರು? ಸಮಾಜ ಸುಧಾರಣೆಯಾಗಬೇಕಾದರೆ ಸ್ವಾರ್ಧತ್ಯಾಗಿಗಳಾದ ಸುಶಿಕ್ಷಿತ ದಂಪ ತಿಗಳೇ ಮುಂದಾಗಬೇಕು, ಇಂಥವರಲ್ಲಿಯೇ ನಮ್ಮ ಸಮಾಜೋನ್ನತಿಯ ಎಲ್ಲ ರಹಸ್ಯವು ಹರಡಿಕೊಂಡಿರುವದು, ಇಂಧವರು ಸಿದ್ಧರಾಗಿ ನಮ್ಮ ಕರ್ನಾ ಟಕವನ್ನು ಉದ್ಧರಿಸಿ ಹರಿಸು ಮುಂದೆ ಬರಬೇಕೆಂದು ಅನನ್ಯಭಾವದಿಂದ ಬೇಡಿಕೊಳ್ಳುವದಕ್ಕಾಗಿಯೇ ನಮ್ಮ ಸಮಾಜ-ರಹಸ್ಯ'ವನ್ನು ಅಸ್ಥಿತ್ವದಲ್ಲಿ