ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪

                                      ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಸಂಬಂಧವಿರುವಂತಿದೆ. ಅವನಿಗೆ ಲಜ್ಜೆಯಾದಾಗ ಜಠರ ಕೆಂಪಡರುತ್ತದೆ; ರೋಷ ಉಂಟಾದಾಗ ಬಿಳುಚುತ್ತದೆ ; ಕೋಪಗೊಂಡಾಗ ಸಿಡಿಮಿಡಿಗೊಳ್ಳುತ್ತದೆ ; ಭಯವುಂಟಾದಾಗ ಅದು ಪೆಡಸಾಗುತ್ತದೆ. ಅಡ್ರೀನಲ್ ಗ್ರಂಥಿಗಳಿಂದ ಸ್ರವಿಸುವ ಕಾರ್ಟಿಸೋನ್ ಗುಂಪಿನ ಚೋದನಿಗಳ ಬಿಡುಗಡೆಯಿಂದ ಈ ಪ್ರಭಾವಗಳುಂಟಾಗುತ್ತವೆ. ಆವು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲು ಮಾನಸಿಕ ಉದ್ವೇಗಗಳೇ ಕಾರಣ.

    ಮೇದೋಜೀರಕ ಗ್ರಂಥಿಯ ಊತಗಳಲ್ಲಿ ಆಲ್ಛಾ ಜೀವಕೋಶಗಳೆಂಬ ಕೋಶಗಳೂ ಇರುತ್ತವೆ. ಕೆಲಸಾರಿ ಅವುಗಳಲ್ಲಿ ಒಂದು ಬಗೆಯ ಗೆಡ್ಡೆಗಳ (ಟ್ಯೂಮರ್) ಬೆಳವಣಿಗೆ ಆಗುವುದರಿಂದ ಜಠರಾಂಶದಂಥ ಚೋದನಿ ಬಿಡುಗಡೆಯಾಗುತ್ತದೆ. ಪರಿಣಾಮ : ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆ ನೂರ್ಮಡಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಭೀಕರ ಸ್ವರೂಪದ ಹುಣ್ಣುಗಳು ಮುಂಗರುಳಿನಲ್ಲಿ ಪದೇ ಪದೇ ಉದ್ಭವವಾಗುತ್ತಿರುತ್ತವೆ. ಸೂಕ್ತ ಚಿಕಿತ್ಸೆ ಮಾಡಿದರೂ ಪದೇ ಪದೇ ಮರುಕಳಿಸುವ ಈ ಪರಿಸ್ಥಿತಿಗೆ ಜೋಲಿಂಗರ್-ಎಲಿಸನ್ ಲಕ್ಷಣಾವಳಿ ಎನ್ನಲಾಗುತ್ತದೆ.
     ವ್ಯಕ್ತಿಯಲ್ಲಿ ಜೀವಸತ್ವಗಳ ಕೊರತೆ, ನ್ಯೂನಪೋಷಣೆ, ಮದ್ಯಸಾರತೆ ಮುಂತಾದ ಕಾರಣಗಳಿಂದ ಜಠರದ ಒಳಪೊರೆ ಶಿಥಿಲಗೊಂಡಾಗಲೂ ಆಮ್ಲದ ತೀವ್ರತೆಯಿಂದ ಅವರಲ್ಲಿ ಬಹುಬೇಗ ಜೀರ್ಣಿಕ ಹುಣ್ಣುಗಳುಂಟಾಗುತ್ತವೆ. ನಗರವಾಸಿ ಉದ್ಯೋಗ ನಿರತರ ಹುಣ್ಣುಗಳಿಗೆ ಮಾನಸಿಕ ಒತ್ತಡಗಳು ಕಾರಣವಾದರೆ ಹಳ್ಳಿಗಾಡಿನ ಬಡರೈತರಲ್ಲಿ ನ್ಯೂನ ಪೋಷಣೆಯೇ ಕಾರಣವೆಂಬುದು ಮೆಕ್ ಕ್ಯಾರಿಸನ್ ರ ಅಭಿಪ್ರಾಯ. ಖಾರ ಮತ್ತು ಮಸಾಲೆ, ಸಾಂಬಾರ ಪದಾರ್ಥಗಳ ಅತಿಯಾದ ಸೇವನೆಯೇ ದಾಕ್ಷಿಣಾತ್ಯರಲ್ಲಿ ಈ ಹುಣ್ಣುಗಳ ಹೆಚ್ಚಿನ ಉಪಟಳಕ್ಕೆ ಕಾರಣವೆನ್ನಲಾಗಿದೆ. ಅತಿಯಾದ ಧೂಮಪಾನ ಮದ್ಯಪಾನಗಳು ಜಠರದ ಒಳಪೊರೆಯಲ್ಲಿ ಕೆರಳಿಕೆಯುಂಟು ಮಾಡಿ ಹುಣ್ಣುಗಳ ಸೃಷ್ಟಿಗೆ ನಾಂದಿಯಾಗಬಹುದು. ಕೆಲವು ತೆರನ ರೋಗಾಣುಗಳ ಸೋಂಕು ಸಹಾ ಜೀರ್ಣಿಕ ಹುಣ್ಣುಗಳನ್ನುಂಟು ಮಾಡುತ್ತವೆಂದು ನಂಬಲಾಗಿದೆ. ಕ್ಯಾಂಪೈಲೋ ಬ್ಯಾಕ್ಟೀರಿಯ ಪೈಲೋರೈ ಎಂಬ ರೋಗಾಣುಗಳು ಅನ್ನಾಶಯ ಮತ್ತು ಮುಂಗರುಳಿನ ಹುಣ್ಣಿಗೆ ಕಾರಣವಾಗುತ್ತವೆಂಬ ವಿಷಯ ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಮೈ ಮೇಲೆ ವ್ಯಾಪಕವಾದ ಸುಟ್ಟ ಗಾಯಗಳಾಗಿರುವುದು, ಕಾರ್ಟಿಸೋನ್, ಫೀನೈಲ್ ಬೂಟಾಸೋನ್, ಆಸ್ಟಿರಿನ್, ಕೆಲವು ತೆರನ ನೋವು ನಿವಾರಕ ಗುಳಿಗೆಗಳ