ಜೀರ್ಣಿಕ ಹುಣ್ಣು OOS “ಒಮೆಪ್ರೊಜೋಲ್" ಎಂಬ ಔಷಧವೊಂದು ಬಳಕೆಗೆ ಬರುತ್ತಿದ್ದು ಹುಣ್ಣುಗಳನ್ನು ಅವಕ್ಕಿಂತಲೂ ಶೀಘ್ರಗತಿಯಲ್ಲಿ ವಾಸಿಮಾಡುವ ವರದಿಗಳಿವೆ. ಈ ತನಕ ವಿವರಿಸಿದ ಸಾಂಪ್ರದಾಯಿಕ ಹಾಗೂ ಸಂರಕ್ಷಕ ಮದ್ದುಗಳ ಸೇವನೆ ಮತ್ತು ಕಟ್ಟುನಿಟ್ಟಾದ ಪಥ್ಯಾಹಾರಗಳಿಂದ ೨-೩ ತಿಂಗಳಲ್ಲಿ ಜೀರ್ಣಿಕ ಹುಣ್ಣುಗಳು ವಾಸಿಯಾಗುವ ಲಕ್ಷಣಗಳು ಕಂಡುಬರದಿದ್ದಲ್ಲಿ ಶಸ್ತ್ರಚಿಕಿತ್ಸಾ ವಿಧಾನವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಹುಣ್ಣುಗಳ ಚಿಹ್ನೆಗಳು ಪದೇ ಪದೇ ಮರುಕಳಿಸುವುದು, ತೊಡಕುಗಳ ಉದ್ಭವ, ಕ್ಯಾನ್ಸರ್ ಪರಿವರ್ತನೆಯ ಅನುಮಾನ, ಹಾಗೂ ಹುಣ್ಣಿನ ಬೇನೆಯಿಂದ ರೋಗಿಯ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆಯಾಗುವಂತಹ ಅಂಶಗಳು ಶಸ್ತ್ರ ಚಿಕಿತ್ಸೆಯ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಸ್ತ್ರ ಚಿಕಿತ್ಸಾ ವಿಧಾನಗಳು (ಚಿತ್ರ ೧೭) ಹುಣ್ಣುಗಳು ಇರುವ ಜಾಗ ಮತ್ತು ಜಠರದಲ್ಲಿ ಆಮ್ಲ ಉತ್ಪಾದನೆಯಾಗುವ ಜೀವಕೋಶಗಳಿರುವ ಬಹುಪಾಲನ್ನು ಕತ್ತರಿಸಿ ತೆಗೆಯುವುದೇ, ಜೀರ್ಣಿಕ ಹುಣ್ಣುಗಳ ಸೂಕ್ತ ಚಿಕಿತ್ಸೆ ಎಂಬ ನಂಬಿಕೆ ಬಹಳ ಕಾಲದಿಂದಲೂ ಇತ್ತು. ಜಠರದ ಮುಕ್ಕಾಲು ಭಾಗವನ್ನು ಕತ್ತರಿಸಿ ತೆಗೆಯುವ “ಆಂಶಿಕ ಗ್ಯಾಸ್ಟೆಮಿ" (Partial Gastrectory) ಒಂದು ಕಾಲದಲ್ಲಿ ವ್ಯಾಪಕವಾಗಿ ಜರುಗುತ್ತಿತ್ತು. ಆದರೆ ಈ ಚಿಕಿತ್ಸೆಯ ನಂತರದ ತೊಡುಕುಗಳ ಪರಿಣಾಮ ಹುಣ್ಣುಗಳ ತೊಂದರೆಗಳಿಗಿಂತಲೂ ಅಧಿಕವಾಗುತ್ತವೆಂಬುದರ ಅರಿವು ಉಂಟಾದ ಮೇಲೆ ಅದನ್ನೀಗ ಹೆಚ್ಚಾಗಿ ಅನುಸರಿಸುತ್ತಿಲ್ಲ. ಈಗ ಕೆಲವು ತೆರನ ಜಠರದ ಹುಣ್ಣು ಮತ್ತು ಜಠರದ ಕ್ಯಾನ್ಸರ್ ಇದ್ದವರಿಗೆ ಮಾತ್ರ ಜರುಗಿಸಲಾಗುತ್ತದೆ. ಜಠರದಲ್ಲಿನ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಲು ವೇಗಸ್ ನರಗಳನ್ನು ವಿವಿಧ ಮಟ್ಟಗಳಲ್ಲಿ ಕತ್ತರಿಸುವ ಶಸ್ತ್ರ ಚಿಕಿತ್ಸಾ - ವಿಧಾನಗಳು ಈಗ ಹೆಚ್ಚು ಪ್ರಚಾರದಲ್ಲಿವೆ. ಅನ್ನನಾಳದ ಹೊರಮೈಯಲ್ಲಿ ಹರಿದು ಜಠರಕ್ಕೆ ಇಳಿಯುವ ಎರಡು ವೇಗಸ್ ನರಗಳ ಬುಡಗಳನ್ನು ಕತ್ತರಿಸುವ ವಿಧಾನ ೧೯೪೩ರಲ್ಲಿ ಜಾರಿಗೆ ಬಂತು. ಜಠರದ ಸ್ನಾಯುಗಳ ಚಲನೆಯಲ್ಲೂ ಈ ನರಗಳ ಪ್ರಚೋದನೆಯ ಪ್ರಭಾವಕ್ಕೊಳಗಾಗಿರುವುದರಿಂದ, ಆಮ್ಲದ ಪ್ರಮಾಣ ಕಡಿಮೆಯಾಗಿ, ನೋವು ಶಮನವಾದರೂ, ಜಠರದಲ್ಲಿ ಶೇಖರವಾದ ಆಹಾರ ವಸ್ತುಗಳ ಚಲನೆ ಸ್ಥಗಿತವಾಗಲಾರಂಭಿಸಿತು. ಈ ತೊಡಕನ್ನು ಹೋಗಲಾಡಿಸಲು ಜಠರಾಶಯ
ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೭
ಗೋಚರ