ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅಪೆಂಡಿಸೈಟಿಸ್
ಜಾರಿಕೊಳ್ಳುವುದರಿಂದಲೂ ಅಪೆಂಡಿಸೈಟಿಸ್ ಗೆ ಪ್ರಚೋದನೆ ದೊರೆಯುತ್ತದೆ .ಕರುಳುಗಳಲ್ಲಿರುವ ಹಲವು ತೆರನ ಜಂತುಹುಳುಗಳೂ ಸಹಾ ಅಪೆಂಡಿಕ್ಸ್ ನ ಒಳಗೆ ದಾಟಿ ಪದೇ ಪದೇ ಅಪೆಂಡಿಸೈಟಿಸ್ ನ ಲಕ್ಷಣಗಳನ್ನು ಪ್ರಕಟಿಸುವುದುಂಟು . ಅಪೆಂಡಿಕ್ಸ್ ನೊಳಗಡೆ ಹಾಲ್ರಸ ಕೋಶಿಕೆಗಳು ಯಥೇಚ್ಛಸುವಾಗಿರುವುದನ್ನು ಮೊದಲೇ ಪ್ರಸ್ತಾಪಿಸಲಾಗಿದೆ .ದೇಹದ ಯಾವುದೇ ಭಾಗದಲ್ಲಿ ರೋಗಾಣು ಸೋಂಕು ಉಂಟಾದಾಗ ,ರಕ್ತಚಲನೆ ಇಲ್ಲವೆ ಹಾಲ್ರಸ ನಾಳಗಳ ಮೂಲಕ ಅವು ಅಪೆಂಡಿಕ್ಸ್ ನ ಕೋಶಿಕೆಗಳಿಗೂ ತಲುಪಿ ಉರಿಯೂತ ಉಂಟುಮಾಡುವುದು ಅಪರೂಪವೇನಲ್ಲ. ತೀವ್ರಗತಿಯ ಅಪೆಂಡಿಸೈಟಿಸ್:(ಚಿತ್ರ ೧೯) ಅಪೆಂಡಿಸೈಟಿಸ್ ಯಾವುದೇ ಕಾರಣದಿಂದ ಶುರುವಾಗ ಬಹುದಾದರು ಅದು ಅತ್ಯಂತ ತೀವ್ರ ಇಲ್ಲವೆ ವಿಳಂಬಗತಿಯಲ್ಲಿ ಪ್ರಕಟವಾಗಬಹುದು. ಸಹಜ ಆರೋಗ್ಯದ ಸ್ಥಿತಿಯ ವ್ಯಕ್ತಿ, ಹಠಾತ್ತನೆ ಉದರ ಬೇನೆ ,ವಾಂತಿ ,ಮತ್ತು ಜ್ವರದಿಂದ ಹಾಸಿಗೆ ಹಿಡಿದು ಒದ್ದಾಡುವಂತಾಗುವುದು ತೀವ್ರಗತಿಯ ಅಪೆಂಡಿಸೈಟಿಸ್ ನ (ಅಕ್ಯೂಟ್ ಅಪೆಂಡಿಸೈಟಿಸ್) ವಿಶೇಷತೆ . ಅಪೆಂಡಿಕ್ಸ್ ನೊಳಗಡೆ ಅತ್ಯಲ್ಟ ಸಮಯದಲ್ಲೇ ಕೀವುಗಟ್ಟಿ ಅದರಲ್ಲೊಂದು "ಬಾವು" ಎದ್ದಂತಾಗುತ್ತದೆ. ಉರಿಯೂತ ಅಪೆಂಡಿಕ್ಸ್ ನ ಕವಚಕ್ಕೆ ಹರಡುತ್ತಿದ್ದಂತೆಯ ಹೊಟ್ಟೆಯೊಳಗಿನ ನೆಣಮಾಲೆ (ಒಮೆಂಟಮ್) ಅದರ ಸಹಾಯಕ್ಕೆ ಧಾವಿಸುತ್ತದೆ. ಅಕ್ಕಪಕ್ಕದಲ್ಲಿನ ಸಣ್ಣ ಕರುಳಿನ ಸುರುಳಿಗಳೂ ಅಪೆಂಡಿಕ್ಸ್ ನ್ನು ಸುತ್ತುವರಿಯುತ್ತವೆ ಅವೆಲ್ಲಾ ಹಾಗೆ ಸುತ್ತುವರಿಯುವುದರಿಂದ ಅಪೆಂಡಿಕ್ಸ್ ನ ಸುತ್ತ "ಮುದ್ದೆ" ಗಟ್ಟುತ್ತದೆ (ಅಪೆಂಡಿಕ್ಯುಲಾರ್ ಮಾಸ್). ಇನ್ನೂ ಮುಂದುವರಿದ ಪರಿಸ್ಥಿತಿಗಳಲ್ಲಿ ಅಲ್ಲಿ ಕೀವು ಶೇಖರಣೆಯಾಗಿ ಅಪೆಂಡಿಕ್ಸ್ ಸುತ್ತ ಬಾವು ಅಥವಾ ಕುರು(ಅಪೆಂಡಿಕ್ಯುಲಾರ್ ಅಬ್ಸೆಸ್) ಉಂಟಾಗುತ್ತದೆ . ಬಲ ಕಿಬ್ಬೊಟ್ಟೆಯನ್ನು ಮೃದುವಾಗಿ ಸ್ಪರ್ಶಿಸುವುದರಿಂದ ಈ ಎರಡೂ ಪರಿಸ್ಥಿತಿಗಳನ್ನು ಗುರುತಿಸಬಹುದು .ಇಲ್ಲಿ ಶೇಖರವಾದ ಕೀವು ಹೊಟ್ಟೆಯ ಇತರ ಭಾಗಗಳಿಗೂ ಪ್ರವಹಿಸಿ ಹೊರಬಿಗಿ ಪೊರೆಯಲ್ಲಿ ತೀವ್ರಗತಿಯ ಉರಿಯೂತ(ಪೆರಿಟೋನೈಟಿಸ್)ವನ್ನುಂಟು ಮಾಡಬಹುದು .ಈ ಹಂತವನ್ನು ತಲುಪಿದ ರೋಗಿಯ ಪರಿಸ್ಥಿತಿ ತೀರ ಉಲ್ಬಣಗೊಡಿಂದೆ ಎಂದೇ ಅರ್ಥ .ತೀವ್ರ ಗತಿಯ ಅಪೆಂಡಿಸೈಟಿಸ್ ಹೊಟ್ಟೆಯೊಳಗಡೆ ಇರುವ ಸಿಡಿಮದ್ದು ಅಥವಾ ಅಗ್ನಿ ಪರ್ವತವೆಂದೇ ಪರಿಗಣಿಸ ಬೇಕಾಗುತ್ತದೆ ;ಅದು ಅವುಗಳಷ್ಟೇ ಅಪಾಯಕಾರಿ ಮಲಬದ್ದತಯಾಗಿದೆಯೆಂದೋ, ಭಟ್ಟಿ ಜಾರಿದೆಯೆಂದೋ ಭೇದಿಯಾಗುವ