ಭಟ್ಟಿ ಜಾರಿಕೆ ೧೫೩ ಭದ್ರ ಬತ್ತಿಗಳಿರುವ ಸೀಮಿತ ಆವರಣದ ಉದರಕೋಶದಲ್ಲಿ ಜೀರ್ಣಾಂಗಗಳು ಕಿಕ್ಕಿರಿದು ತುಂಬಿರುತ್ತದೆ. ಅವೆಲ್ಲಾ ಹೊಟ್ಟೆಯ ಹಿಂದುಗಡೆಯ ಬಿತ್ತಿಗೆ ಕರುಳ್ನಡು ಪರೆಗಳಂತಹ ರಚಗಟ್ಟುಗಳಿಂದ ಭದ್ರವಾಗಿ ಅಂಟಿಕೊಂಡಿರುತ್ತವೆ. ಜಠರ, ಕರುಳುಗಳಿಗೆ ಸ್ವಲ್ಪ ಮಟ್ಟಿನ ಸೀಮಿತ ಚಲನ-ವಲನದ ಸಾಧ್ಯತೆ ಇರುವುದಾದರೂ ಅವು ಸಾಮಾನ್ಯವಾಗಿ ಸ್ಥಾನ ಪಲ್ಲಟವಾಗುವುದಿಲ್ಲ. ಕೆಲ ಸಾರಿ ಅಂಡವಾಯುಗಳ ಛಿದ್ರಗಳ ಮೂಲಕ ಕರುಳಿನ ಸುರುಳಿಗಳು ನುಸುಳಿಕೊಂಡು ತೊಡಕು ಉಂಟು ಮಾಡಬಹುದು. ಸುರುಳ್ಗರುಳು, ಕರುಳು ಒಳ್ತೂರಿಕೆಯೆಂಥ ಪ್ರಕರಣಗಳಲ್ಲಿ ಕರುಳಿನ ಸುರುಳಿಗಳು ತಿರುಚಿಕೊಂಡಂತಾಗ ಬಹುದಾದರೂ ಅವು ತಮ್ಮ ಜಾಗದಿಂದ "ಜಾರಿ ಹೋಗಿವೆ" ಎನ್ನಲಾಗದು. ದೊಂಬರಾಟದವರ ಹಾಗು ಸರ್ಕಸ್ನವರ ವಿವಿಧ ಬಂಗಿಗಳಿಗೆ ಹೀಗಾಗುವುದಿಲ್ಲ. ಬಹಳ ಸಮಯ ತಲೆಕೆಳಗಾಗಿ ಶೀರ್ಷಾಸನ ಹಾಕಿ ನಿಲ್ಲುವವರಲ್ಲೂ ಹೊಟ್ಟೆಯ ಆವಯವಗಳ ಜಾರಿ ಸ್ಥಾನ ಪಲ್ಲಟವಾದ ನಿದರ್ಶನಗಳಿದ್ದಂತಿಲ್ಲ. ಅಂದರೆ ಭಟ್ಟಿ ಜಾರಿಕೆ ಎಂಬ ಪರಿಸ್ಥಿತಿಯಲ್ಲಿ ಅವಯವಗಳು ಜಾರಿಕೊಳ್ಳುತ್ತವೆಂಬುದು ಕೇವಲ ಊಹಾಪೋಹವೆ ಸರಿ. ಜಠರ, ಕರುಳು, ಯಕೃತ ಇತ್ಯಾದಿ ಅವಯವಗಳು ಮೂಳೆಗಳಂತೆ ಗಡುಸಾದ ಅವಯಗಳಲ್ಲ. ಯಕೃತ್ತು, ಗುಲ್ಮಗಳು ಮೆದುವಾಗಿದ್ದರೆ, ಜಠರ ಕರುಳುಗಳು ವಾಯು ಮತ್ತು ದ್ರವ ತುಂಬಿದ ಬಲೂನಿನಂಥ ಟೊಳ್ಳಾದ.
ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೭೭
ಗೋಚರ