೧೭೧
ಗುಣವಿರುವ ಕೆಲವು ರಾಸಾಯನಿಕಗಳನ್ನು ಮೊಳೆ ಶುರುವಾದ ಪ್ರದೇಶದ ಲೋಳ್ವರೆಯ ಅಡಿಯಲ್ಲ ಇಂಜಕ್ಷನ್ ಮಾಡಿ ತುರುಕಿಸಿಡಲಾಗುತ್ತ ; ಆ ಜಾಗದಲ್ಲಿ ಜಡ್ದುಗಟ್ಟಿ ಪೆಡಸುಂಟಾಗುತ್ತದೆ. ಇಂದರಿಂದಾಗಿ ಮೊಳೆಯ ರಕ್ತನಾಳಗಳಿಗೆ ರಕ್ತ ಸರಬರಾಜು ಸ್ಥಗಿತವಾಗಿ ಅವು ಒಣಗಿ ಚರಟುತ್ತದೆ. ಶೇ.೫ರ ಫೀನಾಲ್ ದ್ರಾವಣವನ್ನು ತೈಲ ಒಂದರ ಜೊತೆ ಸೇರಿಸಿ ಇಂಥ ಇಂಜೆಕ್ಷನ್ ಮದ್ದನ್ನು ತಯಾರು ಮಾಡುತ್ತಾರೆ . ಮೊದಲ ಮತ್ತು ಎರಡನೆಯ ದಜ್ರೆಯ ಮೊಳೆಗಳ ಚಿಕಿತ್ಯೆಗೆ ಈ ವಿಧಾನವನ್ನು ಬಳಸಬಹುದು . ಮದ್ದನ್ನು ಚುಚಿದ ಜಾಗದಲ್ಲಿ ಹುಣ್ಣಾಗುವುದು , ಹಾಗು ಮೊಳೆಗಳ ಪುನಃ ಮರುಕಳಿಸುವ ಸಾಧ್ಯೆತೆಗಳಿರುವುದರಿಂದ ಕೆಲವು ಆಯ್ದ ಸಂದಭ್ರಗಳಲ್ಲಿ ಮಾತ್ರ ಈ ವಿಧಾನವನ್ನು ಅನುಸರಿಸಲಾಗುತ್ತದೆ .
ರಬ್ಬರ್ ಬ್ಯಾಂಡ್ ಬಿಗಿತ ::
ಸ್ಪಷ್ಟವಾಗಿ ಊದಿಕೊಂಡು , ಸುಲಭವಾಗಿ ಹಿಡಿತಕ್ಕೆ ಸಿಗುವಂಥ ಮೊಳೆಗಳ ಬುಡಕ್ಕೆ ಬಿಗಿಯಾಗಿ ಹಿಡಿದು ಕೊಳ್ಳುವ ರಬ್ಬರ್ ಬ್ಯಾಂಡ್ಗಳನ್ನು
ಅಳವಡಿಸುವುದರಿಂದ ಮೊಳೆಗೆ ರಕ್ತ ಸಂಚಾರ ಸ್ಥಗಿತಗೊಳಿಸಿದಂತಾಗುತ್ತದೆ . ಮುಂದೆ ಅದು ಕೊಳತು , ಒಣಗಿ ಬಿದ್ದು ಹೋಗುತ್ತದೆ . ಮೊಳೆ ಸರಿಯಾದ ಜಾಗದಲ್ಲಿ ಬ್ಯಾಂಡ್ ಹಿಡಿದುಕೊಂಡರೆ , ಅಷ್ಟೇನೂ ನೋವು ಕಾಣಿಸಲಾರದು . ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡದೆ ಹೊರರೋಗಿಯಾಗಿಯೇ ಚಿಕಿತ್ಸೆ ನಡೆಸಬಹುದು. ಹೆಚ್ಚಿನ ತೊಡಕುಗಳಾಗಿರದ ಮೊದಲ ಮತ್ತು ಎರಡನೆಯ ದರ್ಜೆಯ ಮೊಳೆಗಳಿಗೆ ಈ ವಿಧಾನ ಸೂಕ್ತವಾದುದು. ಮೊಳೆ ಕೊಳೆತು ಬಿದ್ದ ನಂತರ ಕೆಲಸಾರಿ ರಕ್ತಸ್ರಾವ ಉಂಟಾಗುವುದುಂಟು. ವಿಶೇಷ ತರಹೆಯ ಉಪಕರಣ ಇದಕ್ಕೆ ಬೇಕಾಗುವುದರಿಂದ ಈ ವಿಧಾನ ಎಲ್ಲಾ ಕಡೆ ಪ್ರಚಾರದಲ್ಲಿಲ್ಲ.
ನೀರ್ಗಲ್ಲಿನ ಚಿಕಿತ್ಸೆ : (cryo-surgery) ಅಂಗಾಂಶಗಳಲ್ಲಿ ಹೆಚ್ಚಿನ ಶೀತಲ ವಾತಾವರಣವನ್ನು ಮಾಡುವುದರಿಂದ ಅವುಗಳ ಜೀವಕೋಶಗಳ ಮುದುಡಿ ಹೋಗುತ್ತವೆ. ವಿಶಿಷ್ಟ ಉಪಕರಣ ಒಂದರ ಮೂಲಕ - ೭೦೦ ಸೆಂಟಿಗ್ರೇಡ್ನಷ್ಟು ಶೀತಲೀಕರಿಸಿದ ನೈಟ್ರಸ್ ಆಕ್ಸೈಡನ್ನು ಮೊಳೆಗಳಿಗೆ ಸಂಪರ್ಕಿಸಲಾಗುತ್ತದೆ. ಒಂದು ಸಾರಿಗೆ ಎರಡು ಮೊಳೆಗಳಿಗೆ ಇಂಥಾ ಚಿಕಿತ್ಸೆ ಅಳವಡಿಸಬಹುದು. ರೋಗಿ ಒಂದರೆಡು ದಿನ ಆಸ್ಪತ್ರೆಯಲ್ಲಿರಬೇಕಾಗಬಹುದು. ಚಿಕಿತ್ಸೆಯಿಂದುಂಟಾಗುವ ನೋವಿನ ಶಮನಿಕ ಮದ್ದುಗಳನ್ನುಪಯೋಗಿಸಬೇಕಾಗುತ್ತದೆ. ಆದರೆ ಅರಿವಳಿಕೆಯ ಅವಶ್ಯಕತೆ ಇರುವುದಿಲ್ಲ. ಕೆಲ ಕಾಲದ ನಂತರ ಶೈತಲೀಕರಿಸಿದ ಜಾಗದಲ್ಲಿ