ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ರಕ್ತಸ್ರಾವವಾಗಬಹುದು. ನುರಿತ ಚಿಕಿತ್ಸಕರ ಕೈಯಲ್ಲಿ ಈ ವಿಧಾನದಿಂದ ಮೊಳೆರೋಗವನ್ನು ಯಶಸ್ವಿಯಾಗಿ ಮಾಡಬಹುದೆನ್ನಲಾಗುತ್ತಿದೆ. ದುಬಾರಿ ಬೆಲೆಯ ಉಪಕರಣ ಮತ್ತು ವಿಶೇಷ ತರಬೇತಿಯ ವೈದ್ಯರ ಅಭಾವದಿಂದ ಈ ವಿಧಾನವೂ ಎಲ್ಲಾ ಕಡೆ ಲಭ್ಯವಿದೆ.
ಶಸ್ತ್ರ ಚಿಕಿತ್ಸೆ (ಹೆಮೊರಾಯಿಡೆಕ್ಟಮಿ)
ಎರಡು ಮತ್ತು ಮೂರನೆ ದರ್ಜೆಯ ಹಂತಗಳಿಂದ ಮುಂದುವರಿದ ಮೊಳೆ ರೋಗಗಳಿಗೆ ಪಾರಂಪರ್ಯಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅನ್ನುಸರಿಸುವುದು ಅನಿವಾರ್ಯ. ರೋಗಿ ಒಂದೆರಡು ದಿನಗಳ ಮೊದಲೇ ಆಸ್ಪತ್ರೆಗೆ ದಾಖಲಾಗಬೇಕು. ಕರುಳು ಮತ್ತು ಗುದನಾಳಗಳಿಗೆ ಸೂಕ್ತ ಎನಿಮಾಗಳನ್ನು ನೀಡುವುದರಿಂದ ಮಲ ಮತ್ತು ಮತ್ತಿತರ ಸೋಂಕುಗಳಿಂದ ಮೊದಲೇ ಶುಚಿಗೊಳಿಸುವ ಏರ್ಪಾಡು ಮಾಡಿಕೊಳ್ಳಬೇಕು. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಅರಿವಳಿಕೆಯನ್ನುಂಟು ಮಾಡಲೇ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಮೊಳೆಯಾಗಿ ಪರಿವರ್ತನೆಗೊಂಡ ರಕ್ತನಾಳಗಳ ಗೊಂಚಲು ಮತ್ತು ಹೊದಕೆಯಾಗಿರುವ ಲೋಳ್ಪರೆಯ ಭಾಗವನ್ನು ಸುತ್ತಲ ಅಂಗಾಂಶಗಳಿಂದ ಬೇರ್ಪಡಿಸಿ ಬುಡವನ್ನು ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ. ಉಳಿದ ಮೊಳೆಯ ಭಾಗವನ್ನು ಕತ್ತರಿಸಿ ತೆಗೆದು, ಪರಿಸರದಲ್ಲಾಗುತ್ತಿರುವ ಅಲ್ಪ ಸ್ವಲ್ಪ ರಕ್ತಸ್ರಾವವನ್ನು ನಿಲ್ಲಿಸಲಾಗುತ್ತದೆ. ಸನಿಹದಲ್ಲಿರುವ ಬಿಗಿ ಸುತ್ತುಗಳಿಗೆ ಅಪಾಯವಾಗದಂತೆ ಎಚ್ಚರವಹಿಸಬೇಕು. ನೋವಿನ ಉಪಶಮನಕ್ಕೆ ಪ್ರಭಾವಯುತ ಶಮನಿಕ ಹಾಗೂ ನಿದ್ರಾಜನಕ ಮದ್ದುಗಳನ್ನು ಆಗಾಗ್ಗೆ ನೀಡುತ್ತಿರಬೇಕಾಗುತ್ತದೆ. ಗಾಯಗಳನ್ನು ಶುಚಿಗೊಳಿಸಿ ಉಪಚಾರ ಮಾಡುವುದಕ್ಕೆ ಆಗಾಗ್ಗೆ ಬೆಚ್ಚನೆಯ ನೀರಿನ ಕಟಿಮಜ್ಜನ (Sitz Bath) ಮಾಡಿಸುತ್ತಿರಬೇಕು. ನಂತರದ ಒಂದರೆಡು ದಿನಗಳಲ್ಲಿ ಮಲ ವಿಸರ್ಜನೆಗೆ ಸೂಕ್ತ ವಿರೇಚಕ ಮದ್ದುಗಳನ್ನು ನೀಡಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯಾದ ಕೆಲವು ದಿನಗಳ ನಂತರ ಪ್ರತಿಕ್ರಿಯಾತ್ಮಕ ರಕ್ತ ಸ್ರಾವವಾಗುವುದುಂಟು. ಮಲದ್ವಾರದ ಕ್ರಮೇಣ ಕಿರಿದಾಗ(Stricture) ಬಹುದು. ಕೆಲವು ವರುಷಗಳ ನಂತರ ಮರುಚಲ ಮೊಳೆಗಳು ಕಾಣಿಸಿಕೊಳ್ಳುವುದು ಅಪರೂಪವೇನಲ್ಲ.
ಸುಮಾರು ಇನ್ನೂರು ವರ್ಷಗಳ ಹಿಂದೆಯೇ ಜರುಗಿಸಲಾಗಿದ್ದ ಶಸ್ತ್ರ ಚಿಕಿತ್ಸೆ-"ಮುಚ್ಚಿದ (Closed) ಹೆಮೊರಾಯಿಡೆಕ್ಟಮಿ"- ಇತ್ತೀಚಿನ ವರ್ಷಗಳಲ್ಲಿ